Homeರಾಜ್ಯ"ಜೆಡಿಎಸ್‌‍ ಮೇಲೆ 'ಸ್ಟಿಂಗ್‌ ಆಪರೇಷನ್‌' ಆರೋಪ ಹೊರಿಸಲು ಗೃಹ ಇಲಾಖೆ ಮೂಲಕ ಪ್ರಯತ್ನ"

“ಜೆಡಿಎಸ್‌‍ ಮೇಲೆ ‘ಸ್ಟಿಂಗ್‌ ಆಪರೇಷನ್‌’ ಆರೋಪ ಹೊರಿಸಲು ಗೃಹ ಇಲಾಖೆ ಮೂಲಕ ಪ್ರಯತ್ನ”

ಬೆಂಗಳೂರು, ಅ.25-ಸ್ಟಿಂಗ್‌ ಆಪರೇಷನ್‌ ಮಾಡಿರುವ ಆರೋಪವನ್ನು ಜೆಡಿಎಸ್‌‍ ಮೇಲೆ ಹೊರಿಸಲು ಗೃಹ ಇಲಾಖೆ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜೆಡಿಎಸ್‌‍ ಹಿರಿಯ ವಕ್ತಾರ ಹೆಚ್‌.ಎನ್‌.ದೇವರಾಜು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ ಪಕ್ಷದ ಹಾಗೂ ಪಕ್ಷದ ಮುಖಂಡರ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿರುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ನಾಡಿನ ಮತ್ತು ಪಕ್ಷ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಸಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಚಂದನ್‌ ಹಾಗೂ ಆ ವಿಭಾಗದ ಉದ್ಯೋಗಿ ಮೋಹನ್‌ಗೌಡ ತಲೆಮರೆಸಿಕೊಂಡಿದ್ದಾರೆ ಎಂದು ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತಿದೆ. ಕೆ.ಜಿ.ಹಳ್ಳಿಯಲ್ಲಿರುವ ಚಂದನ್‌ ಅವರ ಮನೆಯನ್ನು ಸರ್ಚ್‌ ಮಾಡುವ ಪೊಲೀಸರು, ಜೆಪಿನಗರದ ಡಾಲರ್‌ರ‍ಸ ಕಾಲೋನಿಯ ನಿವಾಸಕ್ಕೆ ನೋಟಿಸ್‌‍ ನೀಡಿ ತಲೆ ಮರೆಸಿಕೊಂಡಿರುವ ಆರೋಪ ಮಾಡಲಾಗುತ್ತಿದೆ. ಸ್ಟಿಂಗ್‌ ಆಪರೇಷನ್‌ ಮಾಡಿರುವ ಆರೋಪ ಒಪ್ಪಿಕೊಂಡಿರುವ ವ್ಯಕ್ತಿಗೆ ರಾಜಾತಿಥ್ಯ ನೀಡಿ. ಆತನ ನೆರಳು ಹಿಡಿಯುವ ಪ್ರಯತ್ನವಾಗುತ್ತಿದೆ ಎಂದು ಅವರು ಹೇಳಿದರು.

ಚಂದನ್‌ ವಾಸವಿರುವ ಮನೆ ಸರ್ಚ್‌ ಮಾಡುವ ಪೊಲೀಸರು, ಅದೇ ಮನೆ ವಿಳಾಸಕ್ಕೆ ನೋಟಿಸ್‌‍ ನೀಡದೆ, ಬೇರೊಂದು ಮನೆ ವಿಳಾಸಕ್ಕೆ ನೋಟಿಸ್‌‍ ನೀಡುತ್ತಿರುವುದು ತನಿಖೆ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ. ಮೋಹನ್‌ಗೌಡ ಅವರು ಇಲ್ಲದ ವೇಳೆ ಅವರ ಮನೆಯನ್ನು ಸರ್ಚ್‌ ಮಾಡಿರುವ ಸಿಸಿಬಿ ಪೊಲೀಸರು, ಮೋಹನ್‌ ಅವರ ಪತ್ನಿಯ ಮೊಬೈಲ್‌ ಮತ್ತು ಪೆನ್‌ಡ್ರೈವ್‌ ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಏನಿತ್ತು ಎಂಬುದನ್ನು ಇದುವರೆಗೂ ಏಕೆ ಬಹಿರಂಗಪಡಿಸಿಲ್ಲ ಎಂದು ಅವರು ಪ್ರಶ್ನಿಸಿದರು.

ಮೋಹನ್‌ಗೌಡ ಅವರ ಪತ್ನಿ ಹಾಗೂ ತಾಯಿ ಅವರನ್ನು ಎಳೆದಾಡಿದ್ದಾರೆ. ಅಲ್ಲದೆ, ಖಾಸಗಿ ಮಾಹಿತಿಯ ಗೌಪ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಅವರು, ಮನೆಯನ್ನು ಶೋಧ ಮಾಡಿದ ನಂತರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದ್ದಾರೆ. ಮೋಹನ್‌ಗೌಡ ಪರ ವಕೀಲರ ಭೇಟಿಗೂ ಎಸಿಪಿ ಅವರು ಅವಕಾಶ ಮಾಡಿಕೊಟ್ಟಿಲ್ಲ ಎಂದು ದೂರಿದರು.

ತನಿಖೆಗೆ ಸಹಕಾರ ನೀಡುತ್ತಿದ್ದರೂ ತಲೆಮರೆಸಿಕೊಂಡಿದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಅಡ್ಡದಾರಿಯಲ್ಲಿ ಒತ್ತಡ ಹೇರುವ ಕೆಲಸ ಫಲಿಸುವುದಿಲ್ಲ, ಇದರಿಂದ ಎದೆಗುಂದುವುದಿಲ್ಲ. ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಿತ್ತಿಪತ್ರ ಅಂಟಿಸಿದ ಕಾಂಗ್ರೆಸ್‌‍ ಕಾರ್ಯಕರ್ತರ ವಿರುದ್ಧ ದೂರು ಕೊಟ್ಟರು ಕ್ರಮ ಕೈಗೊಳ್ಳದೇ ಬಿ ರಿಪೋರ್ಟ್‌ ಹಾಕಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌‍ ವಕ್ತಾರೆ ಪ್ರಶಾಂತಿ ಮಾತನಾಡಿ, ತಮ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನಾತಕ ಹೋರಾಟ ಮಾಡುತ್ತೇನೆ. ಹೆಣ್ಣು ಮಕ್ಕಳ ದ್ವನಿ ಕುಗಿಸುವ ಪ್ರಯತ್ನ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ ವಕ್ತಾರರಾದ ತಿಮೇಗೌಡ, ರಿಷಿಕ್‌ ವಿವನ್‌, ಬಸವರಾಜು ಪಾದಯಾತ್ರಿ ಉಪಸ್ಥಿತರಿದ್ದರು.

RELATED ARTICLES
spot_img

Latest News