Homeರಾಜ್ಯಎಸ್‌ಐಆರ್‌ ಸಮರ್ಥನೆಗೆ ಅಭಿಯಾನಕ್ಕೆ ಮುಂದಾದ ಬಿಜೆಪಿ

ಎಸ್‌ಐಆರ್‌ ಸಮರ್ಥನೆಗೆ ಅಭಿಯಾನಕ್ಕೆ ಮುಂದಾದ ಬಿಜೆಪಿ

ನವದೆಹಲಿ,ಅ.16-ವಿಶೇಷ ಮತ ದಾರರ ಪಟ್ಟಿ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌‍ ಹಾಗೂ ಇಂಡಿ ಒಕ್ಕೂಟ ಎತ್ತಿರುವ ಆರೋಪಗಳನ್ನು ಕಟುವಾಗಿ ಎದು ರಿಸಲು ಆಡಳಿತಾರೂಢ ಬಿಜೆಪಿ ಬೃಹತ್‌ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲು ಸಜ್ಜಾಗಿದೆ.

ಕಾಂಗ್ರೆಸ್‌‍ ಮತ್ತು ಅದರ ಮಿತ್ರಪಕ್ಷಗಳು ಹರಡುತ್ತಿರುವ ಮತ ದಾನದ ಹಕ್ಕು ಹಾಗೂ ಗೊಂದಲಗಳನ್ನು ನಿವಾರಿಸಲು ಸಾರ್ವಜನಿಕರಲ್ಲಿ ವಾಸ್ತವಿಕ ಚಿತ್ರಣವನ್ನು ಮೂಡಿಸಲು ದೇಶಾದ್ಯಂತ ಪತ್ರಿಕಾ ಗೋಷ್ಠಿಗಳು, ಬೃಹತ್‌ ರ್ಯಾಲಿಗಳು ಹಾಗೂ ಬುದ್ಧಿಜೀವಿಗಳ ಜತೆ ವಿಶೇಷ ಸಂವಾದ ಸಭೆಗಳನ್ನು ಆಯೋಜಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಪ್ರಚಾರ ತಂತ್ರದ ಭಾಗವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ಬೃಹತ್‌ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹಿರಿಯ ನಾಯಕರು ತಮ ತಮ ಕ್ಷೇತ್ರಗಳಲ್ಲಿ ರ್ಯಾಲಿಗಳು ಹಾಗೂ ಬಹಿರಂಗ ಸಭೆಗಳನ್ನು ನಡೆಸಲಿದ್ದಾರೆ.

ಕಾನೂನು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಹಾಗೂ ಬುದ್ಧಿಜೀವಿಗಳೊಂದಿಗೆ ವಿಶೇಷ ಸಭೆಗಳನ್ನು ನಡೆಸಿ, ಮತದಾರರ ಪಟ್ಟಿ ಪರಿಷ್ಕರಣೆಯ ಪಾರದರ್ಶಕತೆ ಮತ್ತು ತಾಂತ್ರಿಕ ಅಂಶಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ.ದೇಶದ ರಾಜಧಾನಿ ನವದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇಂಡಿ ಒಕ್ಕೂಟದ ನಾಯಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಗಳ ಬೆನ್ನಲ್ಲೇ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌‍ ಹಾಗೂ ಅದರ ಮಿತ್ರಪಕ್ಷಗಳು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿದ್ದವು. ಅಷ್ಟೇ ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್‌ ಮಂತರ್‌ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಗಳನ್ನು ನಡೆಸಿದ್ದವು.

ಪ್ರತಿಪಕ್ಷಗಳು ಚುನಾವಣಾ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸಲು ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿವೆ ಹಾಗೂ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ತಿರುಗೇಟು ನೀಡಿದೆ.ಚುನಾವಣಾ ಆಯೋಗವು ನಡೆಸುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ನಕಲಿ ಮತದಾರರನ್ನು ತೆರವುಗೊಳಿಸಲು ಕಾನೂನುಬದ್ಧವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ ಎಂಬುದನ್ನು ಸಾರ್ವಜನಿಕರಿಗೆ ಸಾಬೀತುಪಡಿಸುವುದು ಬಿಜೆಪಿಯ ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ವಿಪಕ್ಷಗಳು ಹರಡುತ್ತಿರುವ ಅಪಪ್ರಚಾರವನ್ನು ಮೆಗಾ ಔಟ್ರೀಚ್‌ ಕಾರ್ಯಕ್ರಮಗಳ ಮೂಲಕ ತಳಮಟ್ಟದಿಂದ ಬಿಜೆಪಿ ರಣತಂತ್ರ ರೂಪಿಸಿದೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ದೇಶದ ರಾಜಕೀಯ ವಲಯದಲ್ಲಿ ಪ್ರಮುಖ ವಿವಾದವಾಗಿ ಬೆಳೆದಿದೆ. ಮತದಾರರ ಪಟ್ಟಿಗಳಲ್ಲಿನ ನಕಲಿ, ಅನರ್ಹ ಅಥವಾ ಮೃತಪಟ್ಟವರ ಹೆಸರುಗಳನ್ನು ಗುರುತಿಸಿ ಪಟ್ಟಿಯ ಪರಿಷ್ಕರಣೆಯ ಉದ್ದೇಶವೆಂದು ಚುನಾವಣಾ ಪ್ರಕ್ರಿಯೆಯ ಪರವಾದವರು ವಾದಿಸುತ್ತಾರೆ. ಆದರೆ, ಪರಿಷ್ಕರಣೆಯ ವಿಧಾನ, ಅಗತ್ಯ ದಾಖಲೆಗಳ ಸಲ್ಲಿಕೆ, ಅರ್ಹ ಮತದಾರರ ಹೆಸರು ಕೈಬಿಡುವ ಸಾಧ್ಯತೆ ಮತ್ತು ಆಕ್ಷೇಪ ಸಲ್ಲಿಸುವ ಪ್ರಕ್ರಿಯೆಗಳ ಕುರಿತು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸುತ್ತಿವೆ.

ವಿರೋಧ ಪಕ್ಷಗಳ ಪ್ರಮುಖ ವಾದವೆಂದರೆ, ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಮತ್ತೊಂದೆಡೆ, ಬಿಜೆಪಿ ಚುನಾವಣಾ ಪಟ್ಟಿಗಳ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು.ಹೀಗಾಗಿ, ಎಸ್‌‍ಐಆರ್‌ ಕುರಿತ ಚರ್ಚೆ ಕೇವಲ ಆಡಳಿತಾತಕ ಪ್ರಕ್ರಿಯೆಗೆ ಸೀಮಿತವಾಗದೆ, ಪ್ರಜಾಪ್ರಭುತ್ವದ ಹಕ್ಕುಗಳು, ಚುನಾವಣಾ ಪಾರದರ್ಶಕತೆ ಮತ್ತು ರಾಜಕೀಯ ಪಕ್ಷಗಳ ನಡುವಿನ ವಿಶ್ವಾಸದ ಪ್ರಶ್ನೆಯಾಗಿ ರೂಪುಗೊಂಡಿದೆ.

RELATED ARTICLES
spot_img

Latest News