ಬೆಂಗಳೂರು,ನ.2-ಉತ್ತರಾಖಂಡನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಐವರು ಕನ್ನಡಿಗರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಲಾಯಿತು.ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿವಿಲ್ ಗುತ್ತಿಗೆದಾರ ಪ್ರತಾಪ್ಗೌಡ (41), ಉದ್ಯಮಿ ನಟರಾಜ್ (51), ವಕೀಲರಾದ ಸುಧೀರ್ (50) ಹಾಗೂ ಶಂಕರ್ಗೌಡ (39) ಅವರ ಮೃತದೇಹಗಳು ಡೆಹ್ರಾಡೂನ್ನಿಂದ ಇಂಡಿಗೋ ವಿಮಾನದ ಮೂಲಕ ತರಲಾಯಿತು.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ಗೆ ನಾಲ್ವರ ಪಾರ್ಥಿವ ಶರೀರಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಆಗಮಿಸಿದ್ದ ಸ್ನೇಹಿತರು ತಮ ಗೆಳೆಯರನ್ನು ನೆನೆದು ಕಣ್ಣೀರಾಕಿದರು. ಇದೇ ವೇಳೆ ದೇವನಹಳ್ಳಿ ತಹಸೀಲ್ದಾರ್ ಅನಿಲ್ ಅವರು ಪಾರ್ಥಿವ ಶರೀರಗಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಅರುಣ ಪಾರ್ಥಿವ ಶರೀರ ಬೆಳಗಾವಿಗೆ:
ಸಿಸಿಬಿ ಇನ್ಸ್ ಪೆಕ್ಟರ್ ಅರುಣ ಸಾಳುಂಕೆ (44) ಅವರ ಪಾರ್ಥಿವ ಶರೀರ ಗೋವಾಗೆ ಬಂದಿದ್ದು, ಅಲ್ಲಿಂದ ಬೆಳಗಾವಿಗೆ ತೆಗೆದುಕೊಂಡು ಹೋಗಲಾಯಿತು.ಈ ಐದು ಮಂದಿ ಸ್ನೇಹಿತರಾಗಿದ್ದು, ಬದರಿನಾಥ ಯಾತ್ರೆಗೆ ಹೋಗಿದ್ದು, ಅ.30 ರಂದು ಮಧ್ಯಾಹ್ನ ಮರುಳುತ್ತಿದ್ದಾಗ ಟೇಕ್ ಆಫ್ ಆದ ಕೇವಲ ಎರಡು ನಿಮಿಷಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡು ದಟ್ಟ ಮಂಜು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಬೆಟ್ಟಕ್ಕೆ ಅಪ್ಪಳಿಸಿ ಪತನಗೊಂಡು ಪೈಲೆಟ್ ಸೇರಿದಂತೆ ಅದರಲ್ಲಿದ್ದ ಎಲ್ಲರೂ ದುರ್ಮರಣಕ್ಕೀಡಾಗಿದ್ದರು.
