ಬೆಂಗಳೂರು,ಫೆ.17- ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಉದ್ಯಮಿ ಮೋಹನ್ ದಾಸ್ ಪೈ ಅವರು, ಇದೊಂದು ದೊಡ್ಡ ಸುಳ್ಳು ಮತ್ತು ಕೆಟ್ಟ ಜೋಕ್ ಎಂದು ಟೀಕಿಸಿದ್ದಾರೆ.
ಈ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಹೊರತುಪಡಿಸಿದ್ರೇ ಎರಡನೇ ದೊಡ್ಡ ಆದಾಯದ ಮೂಲ ದಕ್ಷಿಣ ಕನ್ನಡ. 30,000 ಹೆಚ್ಚಿನ ವಿದ್ಯಾರ್ಥಿಗಳು ಬೇರೆ ರಾಜ್ಯ ನಗರದಿಂದ ವೈದ್ಯಕೀಯ ಎಂಜಿನಿಯರಿಂಗ್ ಕಲಿಯಲು ಇಲ್ಲಿಗೆ ಬರುತ್ತಾರೆ. ನೀವು ಹೇಳಿದ್ದೆ ಸರಿಯಾಗಿದ್ದರೇ ಯಾಕೆ ಹೆತ್ತವರು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಕಳಿಸುತ್ತಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವರಾಗಿ ನಿಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವು ನಮನ್ನು ಅತ್ಯಂತ ತುಚ್ಛವಾಗಿ ನೋಡಿದ್ದೀರಿ ಎಂದು ಪೈ ಕಿಡಿಕಾರಿದ್ದಾರೆ. ಇದಕ್ಕೆ ಮತ್ತೆ ಎಕ್ಸ್ ನಲ್ಲಿ ಖರ್ಗೆ ತಿರುಗೇಟು ಕೊಟ್ಟಿದ್ದು, ಸಮಸ್ಯೆಗಳ ಬಗ್ಗೆ ಕುರುಡಾಗಿದ್ದರೆ ಹೀಗೆಯೇ ಆಗುತ್ತದೆ. ರಾಜ್ಯದ ಶೇ.40ರಷ್ಟು ಜಿಡಿಪಿಯನ್ನು ಬೆಂಗಳೂರು ಕೊಡುತ್ತದೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣಕನ್ನಡ ಶೇ.5.4ರಷ್ಟು ಕೊಡುಗೆ ಇದೆ.
ಇದರಲ್ಲಿಯೇ ವ್ಯತ್ಯಾಸ ತಿಳಿಯೋದಿಲ್ಲವೇ? ನಾನು ಹೇಳುವುದು ಸುಳ್ಳಾಗಿದ್ದರೆ ಅಲ್ಲಿನ ಸ್ಥಳೀಯ ಕಾಮರ್ಸ್ ವಿಭಾಗ ಈ ಬಗ್ಗೆ ಚರ್ಚೆ ಯಾಕೆ ಮಾಡುತ್ತದೆ? ನಮ ಸರ್ಕಾರ ಕರಾವಳಿ ಅಭಿವೃದ್ಧಿಯ ಬಗ್ಗೆ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
