Homeರಾಜ್ಯಬಂಗಾರಪೇಟೆ ಕಾರು ಅಪಘಾತ, ಪುಣೆ ಮೂಲದ ನಾಲ್ವರ ಸಾವು

ಬಂಗಾರಪೇಟೆ ಕಾರು ಅಪಘಾತ, ಪುಣೆ ಮೂಲದ ನಾಲ್ವರ ಸಾವು

ಬೆಂಗಳೂರು, ಸೆ.24-ಬಂಗಾರಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯ ಮರಗಲ್ ಗ್ರಾಮದ ಬಳಿ ಇಂದು‌ ಮಧ್ಯಾಹ್ನ ಮಹೇಂದ್ರ ಕಾರು ಸ್ವಯಂ ಅಪಘಾತಕ್ಕೀಡಾಗಿ ಪುಣೆ ಮೂಲದ ನಾಲ್ವರು ಮೃತಪಟ್ಟಿದ್ದಾರೆ.

ಮೃತರನ್ನು ನವನೀತ್ ಗಾಯಕವಾಡ್, ಪವಾರ್ ವಿಶ್ವನಾಥ್, ಕಿರಣ್ ಹಾಗೂ ವಿಶಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸೋಮನಾಥ ಕೊಲ್ಲಿ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಇವರೆಲ್ಲರೂ ಪುಣೆಯ ನಿವಾಸಿಗಳಾಗಿದ್ದು, ತಿರುಪತಿಗೆ ಕಾರಿನಲ್ಲಿ ಹೋಗುವಾಗ ಮಧ್ಯಾಹ್ನ 1.30ರ ಸಮಯದಲ್ಲಿ ಮರಗಲ್ ಗ್ರಾಮದ ಬಳಿ ಅಪಘಾತ ಉಂಟಾಗಿದೆ.ಸುದ್ದಿ ತಿಳಿದ ಬಂಗಾರಪೇಟೆ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News