Homeರಾಜ್ಯಪ್ರಧಾನಿ ಮೋದಿ ಭಜನೆ ಮಾಡಿದ್ದಕ್ಕೆ ಉರಿದುಬಿದ್ದ ಕಾಂಗ್ರೆಸ್ಸಿಗರು : ಬಿಜೆಪಿಗರಿಂದ ತಿರುಗೇಟು

ಪ್ರಧಾನಿ ಮೋದಿ ಭಜನೆ ಮಾಡಿದ್ದಕ್ಕೆ ಉರಿದುಬಿದ್ದ ಕಾಂಗ್ರೆಸ್ಸಿಗರು : ಬಿಜೆಪಿಗರಿಂದ ತಿರುಗೇಟು

ನವದೆಹಲಿ,ಸೆ.26- ಸಂಘ ಪರಿವಾರದ ಸಿದ್ಧಾಂತವಾದಿ ದೀನದಯಾಳ್‌ ಉಪಾಧ್ಯಾಯ ಅವರ 110ನೇ ಜನ ದಿನಾಚರಣೆಯ ಅಂಗವಾಗಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಎದುರಿನ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಭಜನ್‌ ಕ್ಲಬ್ಬಿಂಗ್‌ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕಟುವಾಗಿ ಟೀಕಿಸಿದ್ದು, ಇದಕ್ಕೆ ಬಿಜೆಪಿ ಕಡೆಯಿಂದಲೂ ತೀವ್ರ ತಿರುಗೇಟು ವ್ಯಕ್ತವಾಗಿದೆ.

ಎಕ್ಸ್ ನಲ್ಲಿಂದು ಪೋಸ್ಟ್‌ ಮಾಡಿರುವ ಪ್ರಿಯಾಂಕ್‌ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಭಜನ್‌ ಕ್ಲಬ್ಬಿಂಗ್‌ೞನಲ್ಲಿ ಪಾಲ್ಗೊಳ್ಳಲು ಸಮಯವಿದೆ, ಆದರೆ ಚುನಾವಣಾ ಆಯೋಗದ ಸುತ್ತ ಎದ್ದಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಮಯವಿಲ್ಲ, ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರವು ಕಠಿಣ ಸವಾಲುಗಳು ಮತ್ತು ಪ್ರಶ್ನೆಗಳನ್ನು ಎದುರಿಸಿದಾಗಲೆಲ್ಲಾ ಪ್ರಧಾನಿಯವರು ಮೌನ ವಹಿಸುವುದು ಅಥವಾ ಗೈರುಹಾಜರಾಗುವುದು ಕಳೆದ 13 ವರ್ಷಗಳಿಂದ ಬೆಳೆದು ಬಂದಿರುವ ಒಂದು ಪರಿಚಿತ ಮಾದರಿಯಾಗಿದೆ. ಸಂಭ್ರಮಾಚರಣೆಗಳಲ್ಲಿ ಪ್ರತ್ಯಕ್ಷರಾಗುವ ಪ್ರಧಾನಿ, ಹೊಣೆಗಾರಿಕೆಯ ವಿಷಯ ಬಂದಾಗ ಮೌನಕ್ಕೆ ಶರಣಾಗುತ್ತಾರೆ ಎಂದು ಖರ್ಗೆ ಟೀಕಿಸಿದ್ದಾರೆ.

ಬಿಜೆಪಿ ಪ್ರತ್ಯುತ್ತರ:
ಕಾಂಗ್ರೆಸ್‌‍ ನಾಯಕನ ಹೇಳಿಕೆಗೆ ಬಿಜೆಪಿ ವಕ್ತಾರ ಸಿ.ಆರ್‌. ಕೇಶವನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌‍ ಪಕ್ಷವು ಭಾರತದ ಪುರಾತನ ಭಜನೆ ಮತ್ತು ಭಕ್ತಿ ಪರಂಪರೆಯನ್ನು ಪದೇ ಪದೇ ಅಪಹಾಸ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ವಾರ್ಥಿ ಕಾಂಗ್ರೆಸ್‌‍ನ ಮೊದಲ ಕುಟುಂಬವನ್ನು (ಗಾಂಧಿ ಕುಟುಂಬ) ಹಾಡಿ ಹೊಗಳುವುದರಲ್ಲಿ ಮಾತ್ರ ಪರಿಣತಿ ಹೊಂದಿರುವ ಪ್ರಿಯಾಂಕ್‌ ಖರ್ಗೆ ಅವರಿಂದ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಎಂದು ಕೇಶವನ್‌ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್‌ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್‌‍ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಹಾಗೂ ಸುಮಾರು 100 ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದೆ. ಈ ಸರಣಿ ಸೋಲುಗಳ ಜವಾಬ್ದಾರಿಯನ್ನು ರಾಹುಲ್‌ ಗಾಂಧಿಯವರ ಮೇಲೆ ಹೊರಿಸುವ ಧೈರ್ಯ ಜೂನಿಯರ್‌ ಖರ್ಗೆಗೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಏನಿದು ಭಜನ್‌ ಕ್ಲಬ್ಬಿಂಗ್‌?
ಭಜನ್‌ ಕ್ಲಬ್ಬಿಂಗ್‌ೞ ಎಂಬುದು ಆಧುನಿಕ ಯುವಜನತೆಯಲ್ಲಿ ಜನಪ್ರಿಯವಾಗುತ್ತಿರುವ ಒಂದು ಹೊಸ ಸಾಂಸ್ಕೃತಿಕ ಪ್ರವೃತ್ತಿಯಾಗಿದೆ. ಸಾಂಪ್ರದಾಯಿಕ ಭಕ್ತಿಗೀತೆಗಳು ಮತ್ತು ಭಜನೆಗಳನ್ನು ಮದ್ಯಪಾನ ರಹಿತವಾಗಿ, ಉತ್ಸಾಹಭರಿತ ಸಂಗೀತ ಕಚೇರಿಯ (ಅಟಿಛಿಡಿಣ) ವಾತಾವರಣದಲ್ಲಿ ಯುವಕರು ಒಂದೆಡೆ ಸೇರಿ ಹಾಡಿ, ನರ್ತಿಸುವ ಶೈಲಿ ಇದಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಇದು ಯುವಪೀಳಿಗೆಯನ್ನು ಸೆಳೆಯುತ್ತಿದೆ.

ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮುಂಭಾಗದ ಸಾಲಿನಲ್ಲಿ ಕುಳಿತು, ಭಗವಾನ್‌ ಶ್ರೀರಾಮನ ಭಜನೆಗೆ ಚಪ್ಪಾಳೆ ತಟ್ಟುತ್ತಾ ಹಾಗೂ ತಂಬೂರಿ ಮಾದರಿಯ ವಾದ್ಯವನ್ನು ಬಾರಿಸುತ್ತಾ ಯುವಕರೊಂದಿಗೆ ಭಾಗವಹಿಸಿದ್ದರು.ಪ್ರಸ್ತುತ ಈ ಘಟನೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಾಂಸ್ಕೃತಿಕ ಪರಂಪರೆ ಹಾಗೂ ರಾಜಕೀಯ ಹೊಣೆಗಾರಿಕೆಯ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದೆ.

RELATED ARTICLES
spot_img

Latest News