Thursday, April 16, 2026
Homeರಾಜ್ಯವಿಧಾನಸಭೆಯಲ್ಲಿ ಅಬಕಾರಿ ಇಲಾಖೆ ಲಂಚ ಪ್ರತಿಧ್ವನಿ

ವಿಧಾನಸಭೆಯಲ್ಲಿ ಅಬಕಾರಿ ಇಲಾಖೆ ಲಂಚ ಪ್ರತಿಧ್ವನಿ

Excise Department Bribery Echoes in the Assembly

ಬೆಂಗಳೂರು,ಫೆ.3- ಅಬಕಾರಿ ಇಲಾಖೆಯಲ್ಲಿ ಲೈಸೆನ್ಯಾನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಅವರು ನಿಯಮ 69 ರಡಿ ವಿಷಯ ಪ್ರಸ್ತಾಪಿಸಿ ಅಧಿಕಾರಿ ಹಾಗೂ ಲೈಸೆನ್‌್ಸ ಪಡೆಯುವವರ ನಡುವೆ ನಡೆದಿರುವ ಸಂಭಾಷಣೆಯ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಒಂದು ಹಂತದಲ್ಲಿ ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್‌ ಗಂಭೀರವಾದ ಆರೋಪಗಳನ್ನು ವಿರೋಧಪಕ್ಷದ ನಾಯಕರು ಎಳೆಎಳೆಯಾಗಿ ಬಿಡಿಸಿಡುತ್ತಿದ್ದಾರೆ. ಆರೋಪ ಹೊತ್ತಿರುವ ಸಚಿವರು ರಾಜೀನಾಮೆ ಕೊಡಬೇಕು. ನೈತಿಕತೆ ಇದ್ದರೆ ಮುಖ್ಯಮಂತ್ರಿ ಅವರ ರಾಜೀನಾಮೆಯನ್ನು ಪಡೆಯಬೇಕು. ಮೌನವಾಗಿ ಎಲ್ಲವನ್ನೂ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆಗ ಕಾಂಗ್ರೆಸ್‌‍ ಪಕ್ಷದ ಶಾಸಕ ಪೊನ್ನಣ್ಣ ಮಾತನಾಡಿ, ವಿರೋಧಪಕ್ಷದವರು ಮಾಡುತ್ತಿರುವ ಆರೋಪ ಏನೂ ಅರ್ಥವಾಗುತ್ತಿಲ್ಲ ಎಂದು ಆಕ್ಷೇಪವೆತ್ತಿದರು.

ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ, ಮೊದಲ ಬಾರಿ ಶಾಸಕರಾದವರು 7 ಬಾರಿ ಶಾಸಕರಾದವರಿಗೆ ಪಾಠ ಮಾಡುತ್ತಿದ್ದಾರೆ ಎಂದು ಛೇಡಿಸಿದರು.ಪೊನ್ನಣ್ಣ ಅವರ ಬೆಂಬಲಕ್ಕೆ ನಿಂತ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಪೊನ್ನಣ್ಣ ಅವರು ಹೊಸಬರಾಗಿ ಶಾಸಕರಾಗಿರಬಹುದು. ಅವರಿಗೆ ಒಳ್ಳೆಯ ಅನುಭವವಿದೆ ಎಂದರು.ಬಿಜೆಪಿ ಮತ್ತೊಬ್ಬ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ, ನಿಮ ಸರ್ಕಾರದ ಸಲಹೆಗಾರರು ಇವರು ಎಂದು ಛೇಡಿಸಿದರು.

ಆಗ ಅಶೋಕ್‌ ಮಾತನಾಡಿ, ಪೊನ್ನಣ್ಣ ಅವರೇ ನಿಮಗೂ ಆಡಿಯೋ ಕೊಡುತ್ತೇವೆ, ಕೇಳಿ ಎಂದು ಮಾತು ಮುಂದುವರೆಸಿ ದರು. ಮಂಡ್ಯ ಅಬಕಾರಿ ಇಲಾಖೆಯ ಡಿಸಿ ಲೈಸೆನ್‌್ಸ ನೀಡುವ ವಿಚಾರದಲ್ಲಿ ಜಾತಿ ತಂದಿದ್ದಾರೆ. ನೀವು ಕುರುಬರ ಮುಖಂಡರೊಂದಿಗೆ ದೊಡ್ಡವರು ಚಿಕ್ಕವರಿಂದ ಫೋನು ಮಾಡಿಸಿ ಎಂದೆಲ್ಲಾ ಹೇಳಿದ್ದಾರೆ. ಅಲ್ಲದೆ ಅಧಿಕಾರಿ ಸರ್ಕಾರಿ ಕೆಲಸ ಮಾಡದೇ ಜಾತಿ ಕೆಲಸ ಮಾಡಿದ್ದಾರೆ. ಜಾತಿ ಆಧಾರದ ಮೇಲೆ ಮದ್ಯದಂಗಡಿಯ ಲೈಸೆನ್‌್ಸ ನೀಡಲಾಗುತ್ತಿದೆಯೇ ? ಎಂದು ಪ್ರಶ್ನಿಸಿದರು. ಸರ್ಕಾರ ಸರ್ಕಸ್‌‍ ಕಂಪನಿಗಿಂತಲೂ ಕೆಟ್ಟದಾಗಿ ಆಡಳಿತ ನಡೆಸುತ್ತಿದೆ ಎಂದರು.

ಆಗ ಆಡಳಿತ ಪಕ್ಷದ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ವೈನ್‌ ಸ್ಟೋರ್‌ಗೆ ಹೋದರೆ ಇಂತಹ 50 ಆಡಿಯೋ, ವಿಡಿಯೋಗಳನ್ನು ತರಬಹುದು.ಸಚಿವರು ಕಂತೆ ಕಂತೆ ಲಂಚ ಪಡೆಯುವುದು ಸಿಕ್ಕಿದೆ ಎಂದುಕೊಂಡಿದ್ದೆ ಎಂದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, ಅಬಕಾರಿ ಜಿಲ್ಲಾಧಿಕಾರಿ ಎಣ್ಣೆ ಅಂಗಡಿಯಲ್ಲಿ ಕುಡಿದು ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು
ಬಿಜೆಪಿಯ ವೇದವ್ಯಾಸ ಕಾಮತ್‌ ಮಾತನಾಡಿ, ಇದು ಕೊಬ್ಬರಿಯ ವಿಚಾರವಲ್ಲ. ಎಣ್ಣೆ ಅಂಗಡಿಯ ವಿಚಾರ ಎಂದು ಛೇಡಿಸಿದರು.

ಸುನೀಲ್‌ಕುಮಾರ್‌ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನು ನಮ ಸರ್ಕಾರದ ಅವಧಿಯಲ್ಲಿ ಯಾವ ಎಣ್ಣೆ ಅಂಗಡಿಯಿಂದ ಕರೆತರುತ್ತಿದ್ದೀರಿ ಎಂದು ತಿರುಗೇಟು ನೀಡಿದರು.

ಜೆಡಿಎಸ್‌‍ ಶಾಸಕ ಎಚ್‌.ಟಿ.ಮಂಜು ಮಾತನಾಡಿ, ಸಮರ್ಥನೆಗೂ ಒಂದು ಇತಿಮಿತಿ ಬೇಡವೇ?, ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ನುಡಿದರು.ಆಡಳಿತ ಪಕ್ಷದ ಮತ್ತೊಬ್ಬ ಶಾಸಕ ಅಲ್ಲಮಪ್ರಭು ಪಾಟೀಲರು ಮಾತನಾಡಿ, ಅಶೋಕ್‌ ಅವರು ಸಚಿವರಾಗಿದ್ದಾಗಲೂ ಹಣ ಪಡೆದ ಆರೋಪ ಬಂದಿದೆ. ಆದರೆ ನಮ ಮುಖ್ಯಮಂತ್ರಿ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿದ್ದಾರೆ ಎಂದಾಗ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಸರ್ಕಾರ ಯಾವುದಾದರೂ ಇರಲಿ, ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ, ಮಾತಿನ ಚಕಮಕಿ ಜರುಗಿತು.
ಮಾತು ಮುಂದುವರೆಸಿದ ಅಶೋಕ್‌, ಲಂಚ ಕೇಳಿದ ಆರೋಪ ಮಾಡಿದವರ ಮೇಲೆ ಕ್ರಮ ಕೈಗೊಂಡು ನೀವು ತಪ್ಪಿತಸ್ಥರಲ್ಲದಿದ್ದರೆ ಜೈಲಿಗೆ ಹಾಕಿ. 11 ವಾರದೊಳಗೆ ಪರವಾನಗಿ ನೀಡಬೇಕೆಂಬ ನ್ಯಾಯಾಲಯದ ಆದೇಶವಿದ್ದರೂ ಈ ರೀತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News