Thursday, April 16, 2026
Homeರಾಷ್ಟ್ರೀಯಡೆಲಿವರಿ ಬಾಯ್‌ಗೆ ಇರಿದು ಕೊಲೆ ಮಾಡಿದ್ದ 3 ಅಪ್ರಾಪ್ತ ವಯಸ್ಕರ ಬಂಧನ

ಡೆಲಿವರಿ ಬಾಯ್‌ಗೆ ಇರಿದು ಕೊಲೆ ಮಾಡಿದ್ದ 3 ಅಪ್ರಾಪ್ತ ವಯಸ್ಕರ ಬಂಧನ

3 minors arrested after delivery agent stabbed to death in Delhi

ನವದೆಹಲಿ, ಫೆ.3- ಪೂರ್ವ ದೆಹಲಿಯ ಪಾಂಡವ್‌ ನಗರದಲ್ಲಿ ಡೆಲಿವರಿ ಬಾಯ್‌ ಜೊತೆ ಗಲಾಟೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಅಪ್ರಾಪ್ತ ವಯಸ್ಕರಾಗಿದ್ದು ಬೃಕ್‌ನಲ್ಲಿ ಬಂದು ್ನ ಪತ್ಪರ್‌ಗಂಜ್‌‍ ನಿವಾಸಿ ಅರುಣ್‌ ರಾಜ್‌(22) ನನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿದಾಗ, ರಾಜ್‌ ಗಾಯಗೊಂಡು ಬಿದ್ದಿರುವುದನ್ನು ಕಂಡು ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅರುಣ್‌ ರಾಜ್‌ನ ಕುತ್ತಿಗೆ ಮತ್ತು ಎದೆಯ ಮೇಲೆ ಬಹು ಇರಿತದ ಗಾಯಗಳಾಗಿವೆ ಎಂದು ಅಧಿಕಾರಿ ಹೇಳಿದರು.

ಘಟನೆ ನಂತರ ಪೊಲೀಸ್‌‍ ತಂಡವು ಸ್ಥಳವನ್ನು ಪರಿಶೀಲಿಸಿ ಮತ್ತು ಸಿಸಿಟಿವಿ ದೃಶ್ಯಾವಳಿಗಳಿಂದ ಸಿಕ್ಕ ಮಾಹಿತಿಯಂತೆ ಹಲವು ತಂಡಗಳನ್ನು ರಚಿಸಿ, ಶಂಕಿತ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು, ನಂತರ ಆರೋಪಿ ಬಾಲಾಪರಾಧಿಗಳನ್ನು ಬಂಧಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಅಪರಾಧದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News