Tuesday, April 21, 2026
Homeಇದೀಗ ಬಂದ ಸುದ್ದಿ'ಅನ್ನಭಾಗ್ಯ' ಯೋಜನೆಯಿಂದ ಸುಮಾರು 20 ಲಕ್ಷ ಅನರ್ಹ ಫಲಾನುಭವಿಗಳಿಗೆ ಗೇಟ್ ಪಾಸ್

‘ಅನ್ನಭಾಗ್ಯ’ ಯೋಜನೆಯಿಂದ ಸುಮಾರು 20 ಲಕ್ಷ ಅನರ್ಹ ಫಲಾನುಭವಿಗಳಿಗೆ ಗೇಟ್ ಪಾಸ್

Govt to Remoie around 20 lakh ineligible beneficiaries

ಬೆಂಗಳೂರು : ಅರ್ಹತೆ ಇಲ್ಲದಿದ್ದರೂ ಸರಕಾರದ ಫಲಾನುಭವಿಗಳ ಪಟ್ಟಿಗೆ ಒಳನುಸುಳಿ ಆಕ್ರಮವಾಗಿ ಸವಲತ್ತು ಪಡೆಯುತ್ತಿದ್ದ ರಾಜ್ಯದ ಸುಮಾರು 20 ಲಕ್ಷದಷ್ಟು ಅನರ್ಹ ಫಲಾನುಭವಿಗಳನ್ನು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ರದ್ದುಪಡಿಸಿ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಿಂದ ಗೇಟ್ ಪಾಸ್ ನೀಡಲಾಗಿದೆ.

ಬರುವ ದಿನಗಳಲ್ಲಿ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಅರ್ಹರನ್ನು ಹೊರೆತುಪಡಿಸಿ ಯಾವುದೇ ಕಾರಣಕ್ಕೂ ಅನರ್ಹರಿಗೆ ಸರಕಾರದ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸರಕಾರದ ಸವಲತ್ತುಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು. ಆಗಲೇ ಆ ಯೋಜನೆಯ ಸದುದ್ದೇಶ ಈಢೇರುತ್ತದೆ. ಓಟ್ ಬ್ಯಾಂಕ್ ಗಾಗಿ ಅನರ್ಹರನ್ನು ಸೇರ್ಪಡೆ ಮಾಡಬೇಡಿ ಎಂದು ಸೂಚನೆ ನೀಡಿತ್ತು.

ರಾಜ್ಯದಲ್ಲಿ ಹೆಚ್ಚಾಗಿದ್ದ ನಕಲಿ ಫಲಾನುಭವಿಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ 13 ಲಕ್ಷ ಕಾರ್ಡ್ ಪರಿಷ್ಕರಣೆ ಪಟ್ಟಿ ಮಾಡಿತ್ತು. ಅದರಲ್ಲಿ ರಾಜ್ಯ ಸರ್ಕಾರ 7 ಲಕ್ಷ ಕಾರ್ಡ್ ರದ್ದು ಮಾಡಲು ಪ್ರತ್ಯೇಕ ಪಟ್ಟಿ ಮಾಡಿತ್ತು. ಇದೀಗ ಆಹಾರ ಇಲಾಖೆ ಇಲ್ಲಿಯವರೆಗೆ20 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಿದೆ. ಜೊತೆಗೆ ಬಿಪಿಎಲ್ ನಿಂದ ಎಪಿಎಲ್ ಗೆ 14.5 ಲಕ್ಷ ಕಾರ್ಡ್‍ಗಳನ್ನ ವರ್ಗಾವಣೆ ಮಾಡಿದೆ.

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ ಸುಮಾರು 7.76 ಲಕ್ಷ ಪಡಿತರ ಚೀಟಿಗಳು ಅನರ್ಹ ಎಂದು ಗುರುತಿಸಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರದ ಕುಟುಂಬ ತಂತ್ರಾಂಶ’ದ ದತ್ತಾಂಶದ ಅನ್ವಯ 13.87 ಲಕ್ಷಕ್ಕೂ ಅಧಿಕ ಕಾರ್ಡ್‍ಗಳು ಅನರ್ಹರ ಕೈಯಲ್ಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ, ಇಲಾಖೆಯು ಹಂತ ಹಂತವಾಗಿ ಅನರ್ಹ ಕಾರ್ಡ್‍ಗಳನ್ನು ರದ್ದುಪಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.ಇದರಲ್ಲಿ 9,826 ಃPಐ ಕಾರ್ಡ್ ಅಮಾನತುಗೊಂಡಿದ್ದರೆ. 34,617 ಬಿಪಿಎಲ್ ಕಾರ್ಡ್ ರದ್ದಾಗಿದೆ.

ಇನ್ನುಳಿದ ನಾಲ್ಕು ಲಕ್ಷ ಕಾರ್ಡ್‍ಗಳು ಮರು ಪರಿಶೀಲನೆಯಲ್ಲಿ ರದ್ದುಗೊಂಡಿದೆ. ಮರು ಪರಿಶೀಲನೆಯಲ್ಲಿಯೂ 4 ಲಕ್ಷ ಕಾರ್ಡ್‍ಗಳನ್ನ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ.

ಬಿಪಿಎಲ್ ಕಾರ್ಡ್ ಪರಿಶೀಲನೆಯಲ್ಲಿ ಬಳ್ಳಾರಿಯಲ್ಲಿ 1 ಲಕ್ಷ 91 ಸಾವಿರ ಬಿಪಿಎಲ್ ಕಾರ್ಡ್ ರದ್ದು ಹಾಗೂ ಎಪಿಎಲ್ ಗೆ ಶಿಫ್ಟ್ ಆಗಿದೆ.ವಿಜಯಪುರ ಜಿಲ್ಲೆ – 95,037 ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಗೆ ವರ್ಗಾಯಿಸಲಾಗಿದೆ. ಕೊಡಗು ಜಿಲ್ಲೆ – 94,423 ಹಾಗೂ ಬೆಂಗಳೂರಿನಲ್ಲಿ ಎರಡು ಲಕ್ಷ ಬಿಪಿಎಲ್ ಗೆ ಕಾರ್ಡ್ ರದ್ದುಗೊಳಿಸಲಾಗಿದೆ.ಕೇಂದ್ರ ಸರ್ಕಾರ 12 ಮಾನದಂಡ ಮತ್ತು ರಾಜ್ಯ ಸರ್ಕಾರ 4 ಮಾನದಂಡ ಆಧರಿಸಿ ಕಾರ್ಡ್ ಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ.

ಅರ್ಹರಿಗೆ ಇದೆ ಅವಕಾಶ
ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಅರ್ಹ ಫಲಾನುಭವಿಗಳ ಕಾರ್ಡ್‍ಗಳು ಕೂಡ ರದ್ದಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ. ತಮ್ಮ ಕಾರ್ಡ್ ಅರ್ಹತೆಯಿದ್ದರೂ ರದ್ದಾಗಿದ್ದರೆ, ಅಂತಹ ನಾಗರಿಕರು 45 ದಿನಗಳ ಒಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಬಹುದು. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಅರ್ಹತೆ ಖಚಿತಪಟ್ಟಲ್ಲಿ ಬಿಪಿಎಲ್ ಕಾರ್ಡ್ ಅನ್ನು ಮರುಸ್ಥಾಪನೆ ಮಾಡಲಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇ-ಕೆವೈಸಿ ಕಡ್ಡಾಯ
ಪಡಿತರ ಸೋರಿಕೆ ಮತ್ತು ನಕಲಿ ಕಾರ್ಡ್ ಹಾವಳಿಗೆ ಕಡಿವಾಣ ಹಾಕಲು ಇಲಾಖೆಯು ಇ-ಕೆವೈಸಿ (ಆಧಾರ್ ಜೋಡಣೆ) ಯನ್ನು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ಇನ್ನೂ 6,16,196 ಕಾರ್ಡ್‍ದಾರರು ಇ-ಕೆವೈಸಿ ಮಾಡಿಸಿಲ್ಲ. ಹೊರ ರಾಜ್ಯಗಳಿಂದ ಬಂದು ನೆಲೆಸಿರುವವರ ಪೈಕಿ ಸುಮಾರು 57,864 ಮಂದಿ ನಕಲಿ ಬಿಪಿಎಲ್ ಕಾರ್ಡ್‍ಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇ-ಕೆವೈಸಿ ಪೂರ್ಣಗೊಳ್ಳದಿದ್ದಲ್ಲಿ ಅಂತಹ ಕಾರ್ಡ್‍ಗಳನ್ನು ಅನುಮಾನಾಸ್ಪದ ಎಂದು ಪರಿಗಣಿಸಿ ರದ್ದುಪಡಿಸುವ ಸಾಧ್ಯತೆಯೂ ಇದೆ.

ಅನರ್ಹರಿಗೆ ದಂಡದ ಬಿಸಿ
ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು, 7.5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು ಹಾಗೂ ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್‍ಗೆ ಅರ್ಹರಲ್ಲ. ಇಂತಹ ಅನರ್ಹರನ್ನು ಪತ್ತೆಹಚ್ಚಲು ಸರ್ಕಾರ ಆದಾಯ ತೆರಿಗೆ ಇಲಾಖೆ, ‘ಕುಟುಂಬ ತಂತ್ರಾಂಶ’ದಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದೆ.

ಗಮನಾರ್ಹ ಸಂಗತಿಯೆಂದರೆ, ಇಲಾಖೆಯು ಪರಿಶೀಲನಾ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಿದ ನಂತರ, ಹಲವು ಅನರ್ಹರು ಸ್ವಯಂಪ್ರೇರಿತರಾಗಿ ತಮ್ಮ ಹೆಸರನ್ನು ಕಾರ್ಡ್‍ನಿಂದ ತೆಗೆದುಹಾಕಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಇಷ್ಟು ದಿನಗಳ ಕಾಲ ಗೊತ್ತಿದ್ದೂ ಸರ್ಕಾರದ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ, ಅವರು ಪಡೆದ ಪಡಿತರಕ್ಕೆ ಸಮನಾದ ಮೊತ್ತವನ್ನು ದಂಡವಾಗಿ ವಸೂಲಿ ಮಾಡಲು ಆಹಾರ ಇಲಾಖೆ ಕಠಿಣ ನಿರ್ಧಾರ ಕೈಗೊಂಡಿದೆ.

ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಪಡಿತರ ಚೀಟಿಯಾಗಿದ್ದು, ಕಡಿಮೆ ದರದಲ್ಲಿ ಪಡಿತರ ಹಾಗೂ ಆರೋಗ್ಯ ಸೇವೆಗಳನ್ನು ಪಡೆಯಬಹುದು. ಹೊಸ ಸದಸ್ಯರನ್ನು ಸೇರಿಸಲು ಪೆÇೀಷಕರ ಆಧಾರ್, ಮಕ್ಕಳ ಜನನ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ಅಗತ್ಯವಾಗಿ ಪಡೆಯಬೇಕು.

ಕೇಂದ್ರದ ಮಾನದಂಡಗಳು

  1. ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಫಲಾನುಭವಿಗಳ ಸಂಖ್ಯೆ – 5,80,415
  2. ಬೇರೆ ರಾಜ್ಯದಲ್ಲಿ ಇದ್ದು ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು – 73,859
  3. 12 ತಿಂಗಳಿನಿಂದ ಅಕ್ಕಿಪಡೆಯದವರ ಸಂಖ್ಯೆ- 40,833
  4. ಪಿಎಂ ಕಿಸಾನ್ ಯೋಜನೆ ಅಡಿ 7.5 ಎಕರೆಗಿಂತ ಹೆಚ್ಚು ಭೂಮಿ ಇರುವವರು- 34,710
  5. ಕಂಪನಿಗಳು ಡೈರೆಕ್ಟ್ ಆಗಿರುವವರು- 21,402
  6. 6 ರಿಂದ 12 ತಿಂಗಳವರೆಗೂ ಅಕ್ಕಿ ಪಡೆಯದವರು – 17,414
  7. ಜಿಎಸ್‍ಟಿ ಹೊಂದಿದ್ದೂ 25 ಲಕ್ಷಕ್ಕಿಂತ ಹೆಚ್ಚು ವಹಿವಾಟು – 2,695
  8. 100 ವರ್ಷ ಮೇಲ್ಪಟ್ಟ ಪಡಿತರ ಫಲಾನುಭವಿಗಳು- 2050
  9. ಆಧಾರ್ ಸ್ಥಿತಿಯಲ್ಲಿ ಮೃತ ವ್ಯಕ್ತಿಗಳ ಸಂಖ್ಯೆ – 1452
  10. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಸದಸ್ಯ ಫಲಾನುಭವಿಗಳು- 793
  11. ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವವರು – 430
  12. ನಾಲ್ಕು ಚಕ್ರ ವಾಹನ ಇರುವವರು- 153

ರಾಜ್ಯ ಸರ್ಕಾರ 4 ಮಾನದಂಡಗಳು

  1. ಅಕ್ಕಿ ಪಡೆಯದವರು- 2,75,667
  2. ಆದಾಯ ತೆರಿಗೆದಾರರು- 98,473
  3. ವಾರ್ಷಿಕ ವರಮಾನ 1.20 ಲಕ್ಷಕ್ಕಿಂತ ಹೆಚ್ಚು ಇರುವವರು- 10,09,475
  4. ಸರ್ಕಾರಿ ನೌಕರರು -4,036
    ಒಟ್ಟು- 13,87,651
RELATED ARTICLES

Latest News