Homeರಾಜ್ಯಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ : ಹಾಸನ ಗಡಿ ದಾಟಿದ ಕಾಡಾನೆಗಳ ಹಿಂಡು

ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ : ಹಾಸನ ಗಡಿ ದಾಟಿದ ಕಾಡಾನೆಗಳ ಹಿಂಡು

ಹಾಸನ,ನ.22-ಜಿಲ್ಲೆ ಬಿಟ್ಟು ಜಗ್ಗದ ಕಾಡಾನೆಗಳು ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯಿಂದ ಗಡಿ ದಾಟಿ ಭದ್ರಾಅಭಯರಣ್ಯದತ್ತ ಹೆಚ್ಚೆ ಹಾಕಿವೆ. ಬೇಲೂರು ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಐದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ರಾತ್ರಿಯೂ ಕೂಡ ಕಾರ್ಯಾಚರಣೆ ನಡೆಸಿದರು.

ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದ ಬಳಿಯ ಅರಮನೆ ಗುಡ್ಡದ ಬಳಿ ಇದ್ದ ಕಾಡಾನೆ ಗುಂಪನ್ನು ಹಾಸನ ಜಿಲ್ಲೆಯ ಗಡಿ ದಾಟಿಸಿದ್ದು, ಸದ್ಯ ತತ್ಕೊಳ ಅರಣ್ಯ ಪ್ರದೇಶದಿಂದ 9 ಕಿ.ಮೀ ದೂರದಲ್ಲಿ ಕಾಡಾನೆಗಳಿದ್ದು, ಇಂದು ಬೆಳಗ್ಗೆ ಕೂಡ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಟಿಎಫ್‌ ಸಿಬ್ಬಂದಿಗಳು ಮತ್ತೆ 6 ಕಿ.ಮೀ ದೂರ ಕಾಡಾನೆಗಳನ್ನು ಓಡಿಸಿದ್ದು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ತಂಡ ಅಧಿಕಾರಿಗಳ ಸಮನ್ವಯತೆ ಸಹಕಾರದಿಂದ ಆನೆಗಳ ಗುಂಪನ್ನು ಗಡಿ ದಾಟಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲ್ಕೂಕಿನ ಕಾರಬೈಲು ಗ್ರಾಮದ ಬಳಿ ಆನೆಗಳ ಗುಂಪು ಇದ್ದು, ತತ್ಕೊಳ ಅರಣ್ಯದ ಮೂಲಕ ಭದ್ರಾಅಭಯರಣ್ಯದತ್ತ ಓಡಿಸಲಿದ್ದಾರೆ.

RELATED ARTICLES

Latest News