ಬೆಂಗಳೂರು, ಮಾ.14- ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಖಚಿತವಾದ ನಿರ್ಧಾರವಾಗಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏಕೆ ಒಂದೇ ರೀತಿ ಮಾಡುತ್ತಿಲ್ಲ? ನಾವೆಲ್ಲಾ ದಲಿತರು ಪ್ರೀತಿಯಿಂದ ಇದ್ದೆವು. ಈಗ ನಮ ನಮಲ್ಲೇ ಯುದ್ಧ ಶುರುವಾಗಿದೆ. 101 ಜಾತಿಗಳ ಬಗ್ಗೆ ಮಾತನಾಡುತ್ತಾರೆ. ಮೊದಲಿದ್ದಂತೆ ಮೀಸಲಾತಿ ಮುಂದುವರೆಸಿದರೆ ಸಾಕು ಎಂದರು.
ನಾವೆಲ್ಲರೂ ಸಮಪ್ರಮಾಣದಲ್ಲಿ ಮೀಸಲಾತಿ ಪಡೆಯುತ್ತಿದ್ದೆವು. ಬಲಗೈ ಸಮುದಾಯದವರು ಅದನ್ನೇ ಹೇಳುತ್ತಿದ್ದಾರೆ. ಆದರೆ, ಎಡಗೈ ಸಮುದಾಯ ವಿರೋಧ ಮಾಡುತ್ತಿದೆ. ಈಗ ಒಳಮೀಸಲಾತಿ ಬೇಕು ಎನ್ನುತ್ತಾರೆ. ಇದರಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆ. ಗೊಂದಲವೂ ಹೆಚ್ಚಾಗುತ್ತಿದೆ. ಅವರವರ ಜನಾಂಗದ ಹಿತವನ್ನು ನೋಡುತ್ತಿದ್ದಾರೆ. ಯಾರೂ ಕೂಡ ತಮ ತನವನ್ನ ಬಿಟ್ಟುಕೊಡುತ್ತಿಲ್ಲ ಎಂದು ಅವರು ಹೇಳಿದರು.
ಮುಂಚೆ ಜಾತಿ ಹೇಳಲು ನಾಚಿಕೆ ಆಗುತಿತ್ತು. ಈಗ ಜಾತಿಯನ್ನೇ ಮುಂದೆ ಮಾಡುತ್ತಿದ್ದಾರೆ. ಒಳಮೀಸಲಾತಿ ಮಾಡಿದರೂ, ಮಾಡದಿದ್ದರೂ ಇದು ಬಗೆಹರಿಯುವಂತಹದ್ದು ಅಲ್ಲ. ಕೋರ್ಟ್ ಹೇಳಿರುವಂತೆ ನಡೆಡುಕೊಳ್ಳುವುದು ಒಳ್ಳೆಯದು. ಒಳಮೀಸಲಾತಿಯೇ ನಮಗೆ ಬೇಡ. ಇದನ್ನು ಮಾಡಿದರೆ ಗೊಂದಲವಾಗುತ್ತದೆ. ಈಗ ಹೇಗಿದೆ ಅಷ್ಟೇ ಇರಬೇಕು. ಸರ್ಕಾರ ಸುಮನೆ ಇರುತ್ತದೆ ಎಂದು ಭಾವಿಸಿದ್ದೇವೆ ಎಂದು ಅವರು ತಿಳಿಸಿದರು.
