Homeರಾಜ್ಯಟಿ.ಡಿ.ರಾಜೇಗೌಡರಿಗೆ ಸಚಿವ ಸ್ಥಾನ ನೀಡಲು ಮಲೆನಾಡು ಕರಾವಳಿ ಜನಪರ ಒಕ್ಕೂಟ ಆಗ್ರಹ

ಟಿ.ಡಿ.ರಾಜೇಗೌಡರಿಗೆ ಸಚಿವ ಸ್ಥಾನ ನೀಡಲು ಮಲೆನಾಡು ಕರಾವಳಿ ಜನಪರ ಒಕ್ಕೂಟ ಆಗ್ರಹ

Malnadu Coastal People's Alliance demands ministerial berth for T.D. Rajegowda

ಬೆಂಗಳೂರು,ಮೇ 29- ಕಾಂಗ್ರೆಸ್‌‍ ಸರ್ಕಾರದಲ್ಲಿ ಡಿ.ಬಿ.ಚಂದ್ರೇಗೌಡರ ನಂತರ ಯಾರೂ ಶೃಂಗೇರಿ ಕ್ಷೇತದಿಂದ ಸಚಿವರಾಗಿಲ್ಲ. ಬಿಜೆಪಿ ಪ್ರಾಬಲ್ಯದ ಹೊರತಾಗಿಯೂ ಟಿ.ಡಿ.ರಾಜೇಗೌಡರು ಎರಡು ಬಾರಿ ಶಾಸಕರಾಗಿದ್ದಾರೆ. ಈ ಬಾರಿಯ ಸಂಪುಟದಲ್ಲಿ ರಾಜೇಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ಮಲೆನಾಡು ಕರಾವಳಿ ಜನಪರ ಒಕ್ಕೂಟ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್‌ ಹೊಸಕೊಪ್ಪ ಅವರು ಮಲೆನಾಡು ಕರಾವಳಿ ಭಾಗದಲ್ಲಿ ಕೋಮುವಾದಿ ಶಕ್ತಿಗಳಿಗೆ ಎದುರಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದೂ ಸ್ಥಾನಗಳಲ್ಲೂ ಜನ ಕಾಂಗ್ರೆಸ್‌‍ ಶಾಸಕರನ್ನು ಗೆಲ್ಲಿಸಿದ್ದಾರೆ. ಕಾರ್ಯಕರ್ತರ ಹೋರಾಟ ಒಳಗೊಂಡಂತೆ ಸುಧೀರ್‌ಕುಮಾರ್‌ ಮುರೊಳ್ಳಿ ಅವರಂತಹ ಪ್ರಜ್ಞಾವಂತ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌‍ ಸದೃಢವಾಗಿ ಮಲೆನಾಡಿನಲ್ಲಿ ಗೆಲುವಿನ ನಗೆ ಬೀರಿದೆ.

ನೂರಾರು ವರ್ಷಗಳಿಂದ ಬದುಕಿ ಬಾಳುತ್ತಿರುವ ನೆಲೆವಾಸಿಗಳ ಭೂಮಿ ಹಕ್ಕು, ವನ್ಯಜೀವಿಗಳಿಂದ ಬೆಳೆಹಾನಿ, ಅಡಿಕೆ ತೋಟಗಳಿಗೆ ರೋಗ, ರಸ್ತೆಗಾಗಿ ಅರಣ್ಯ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳ ಗೂಡಾಗಿದೆ. ಆರು ಜಿಲ್ಲೆಗಳನ್ನು ಒಳಗೊಂಡ ಮಲೆನಾಡು ಕರಾವಳಿ ನಾಡಿನ ಪ್ರಮುಖ ಪ್ರದೇಶ. ಅದರಲ್ಲೂ ಶೃಂಗೇರಿ ಕ್ಷೇತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್‌‍ ಸರ್ಕಾರದಲ್ಲಿ ಡಿ.ಬಿ.ಚಂದ್ರೇಗೌಡ ಅವರನ್ನು ಹೊರತುಪಡಿಸಿ ಈ ಕ್ಷೇತ್ರದಿಂದ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಪ್ರಸ್ತುತ ಶಾಸಕರಾಗಿರುವ ಟಿ.ಡಿ.ರಾಜೇಗೌಡರಿಗೆ ಮಲೆನಾಡು ಹಾಗೂ ಕರಾವಳಿ ಬಗ್ಗೆ ಅಪಾರ ಅನುಭವವಿದೆ. ಈ ಭಾಗದಲ್ಲಿ ಜನರನ್ನು ಕಾಡುತ್ತಿರುವ ಅರಣ್ಯ ಭೂಮಿ, ವನ್ಯಜೀವಿಗಳ ಸಂಘರ್ಷ ಇತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ಅದರಲ್ಲೂ ಅರಣ್ಯ ಖಾತೆಯನ್ನು ಕೊಟ್ಟು ಸಹಕರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

Latest News