Sunday, April 19, 2026
Homeರಾಜ್ಯಬಲಿದಾನ ಪದಕ ಪಡೆದ ಪ್ರಥಮ ಮಹಿಳಾ ಸೇನಾಧಿಕಾರಿ ಕನ್ನಡತಿ ದೀಕ್ಷಾ

ಬಲಿದಾನ ಪದಕ ಪಡೆದ ಪ್ರಥಮ ಮಹಿಳಾ ಸೇನಾಧಿಕಾರಿ ಕನ್ನಡತಿ ದೀಕ್ಷಾ

Meet Captain Deeksha C Mudadevannanavar, Indian Army's First Woman To Join Special Forces

ಬೆಂಗಳೂರು,ಮಾ.23- ಕನ್ನಡತಿ, ದಾವಣಗೆರೆಯ ಮೇಜರ್‌ ದೀಕ್ಷಾ ಮುಡದೇವಣ್ಣನವರ್‌ ಅರೆಸೇನಾಪಡೆಯ ಬಲಿದಾನ ಪದಕ ಪಡೆದ ಪ್ರಥಮ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.ಪುರುಷರ ಪ್ರಾಬಲ್ಯದ ಎದುರು ಈ ಶೌರ್ಯ ಪದಕಕ್ಕೆ ಭಾಜನರಾಗಿರುವ ಪ್ರಥಮ ಮಹಿಳಾ ಸೇನಾಧಿಕಾರಿ ಎಂಬ ಹಿರಿಮೆ ಹೊತ್ತಿದ್ದಾರೆ.

ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ದೀಕ್ಷಾ ಶಾಲಾ ದಿನಗಳಲ್ಲಿಯೇ ತಮ ಶೌರ್ಯ ಜೀವನಕ್ಕೆ ಮುನ್ನುಡಿ ಬರೆದರು. ನ್ಯಾಷನಲ್‌ ಕೆಡೆಟ್‌ ಕಾರ್ಪ್‌್ಸ (ಎನ್‌ಸಿಸಿ)ಗೆ ಸೇರ್ಪಡೆಗೊಂಡು ಗಳಿಸಿದ ತರಬೇತಿ ಅವರಲ್ಲಿ ಶಿಸ್ತು, ಸೇವಾಭಾವನೆ ಮತ್ತು ತಾಳೆಯನ್ನು ಬೆಳೆಸಿದವು.

ದೇಶಪ್ರೇಮಿಗಳ ಕಥೆಗಳಿಂದ ಸ್ಫೂರ್ತಿ ಪಡೆದ ದೀಕ್ಷಾ ತಾನು ದೇಶಕ್ಕೆ ಅರ್ಥಪೂರ್ಣ ಸೇವೆ ಸಲ್ಲಿಸಬೇಕೆಂಬ ಕನಸು ಕಂಡರು. ಮಿಲಿಟರಿ ಸೇರಿ ವೈದ್ಯಕೀಯ ಶಿಕ್ಷಣ ಪಡೆದರು. 2019 ರಲ್ಲಿ ಶಾರ್ಟ್‌ ಸರ್ವೀಸ್‌‍ ಕಮಿಷನ್‌ (ಎಸ್‌‍ಎಸ್‌‍ಸಿ)ಗೆ ಅರ್ಜಿ ಹಾಕಿ ಸೇನೆಗೆ ಸೇರ್ಪಡೆಯಾದರು. ವೈದ್ಯಕೀಯದಲ್ಲಿ ಪರಿಣತಿ ಸಾಧಿಸಿದರು.

ಎಸ್‌‍ಎಸ್‌‍ಸಿಗೆ ಆಯ್ಕೆಯಾದ ಬಳಿಕ ಅವರು ಲಖನೌದ ಆರ್ಮಿ ಮೆಡಿಕಲ್‌ ಕಾರ್ಪ್‌್ಸ ಸೆಂಟರ್‌ನಲ್ಲಿ ಕಠಿಣ ತರಬೇತಿ ಪಡೆದರು. ಇಲ್ಲಿ ಅವರು ಮೆಡಿಕಲ್‌ ಆಫೀಸರ್‌ರ‍ಸ ಬೇಸಿಕ್‌ ಕೋರ್ಸ್‌ (ಎಂಓಬಿಸಿ) ಪೂರೈಸಿ ಸೇನಾ ಸಿಬ್ಬಂದಿಯ ತುರ್ತು ಚಿಕಿತ್ಸೆ ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾರಂಭಿಸಿದರು.

ಗುಡ್ಡಗಾಡು ಪ್ರದೇಶವಾದ ತಾಂಗ್‌ಸೆಯ 303 ಫೀಲ್‌್ಡ ಆಸ್ಪತ್ರೆಗೆ ನಿಯೋಜಿತರಾದ ದೀಕ್ಷಾ ಅಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದರು. 2022 ರಲ್ಲಿ ರೆಜಿಮೆಂಟಲ್‌ ಮೆಡಿಕಲ್‌ ಆಫೀಸರ್‌ (ಆರ್‌ಎಂಬಿ) ಆಗಿ ಪ್ಯಾರಾಶೂಟ್‌ ರೆಜಿಮೆಂಟ್‌ಗೆ ನಿಯುಕ್ತರಾದರು.

ತಮ ಅಮೂಲ್ಯ ಸೇವೆಗೆ ಸಂದ ಗೌರವವಾಗಿ ಮೇಜರ್‌ ಹುದ್ದೆಗೆ ಮುಂಬಡ್ತಿ ಪಡೆದ ದೀಕ್ಷಾ 2024 ರ ಬಲಿದಾನ ಪದಕಕ್ಕೆ ಪಾತ್ರರಾದರು. ಈ ಪದಕ ಸೇನೆಯಲ್ಲಿ ಶೌರ್ಯದಿಂದ ಕೆಲಸ ಮಾಡಿದ ಅಪಾರ ದೇಶಪ್ರೇಮ ಪ್ರದರ್ಶಿಸಿದವರಿಗೆ ನೀಡುವ ಉನ್ನತ ಗೌರವವಾಗಿದೆ.

RELATED ARTICLES

Latest News