Homeರಾಜ್ಯಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ಯೋಜನೆ : ಸಚಿವ ಕೆ.ಜೆ.ಜಾರ್ಜ್‌

ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ಯೋಜನೆ : ಸಚಿವ ಕೆ.ಜೆ.ಜಾರ್ಜ್‌

ಬೆಂಗಳೂರು,ಸೆ.25- ರಾಜ್ಯದ ಕ್ರೀಡಾ ಕಾರ್ಯಕ್ರಮಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿ ಹೊಸ ಕ್ರೀಡಾ, ಪ್ರವಾಸದ ಅನುಭವ ಮತ್ತು ಸ್ಥಳೀಯ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಹೊಸ ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಇಂಧನ , ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ಯೋಜನೆಯ ಮೊದಲ ಹಂತವಾಗಿ ಪ್ರಮುಖ ಕ್ರೀಡಾ ಕಾರ್ಯಕ್ರಮ ಆಯೋಜಕರೊಂದಿಗೆ ಪ್ರವಾಸೋದ್ಯಮ ಇಲಾಖೆ ಒಪ್ಪಂದಕ್ಕೆ ಸಹಿ ಹಾಕಲಿದ್ದು, ರಾಜ್ಯದಲ್ಲಿ ನಡೆಯುವ ಮ್ಯಾರಥಾನ್‌, ಸೈಕ್ಲಿಂಗ್‌, ಟ್ರಯಥ್ಲಾನ್‌ ಸೇರಿದಂತೆ ಪ್ರಮುಖ ಎಂಡ್ಯೂರನ್ಸ್ ಇವೆಂಟ್ಸ್ ಗಳನ್ನು ಸಂಬಂಧಿತ ಪ್ರವಾಸಿ ತಾಣಗಳೊಂದಿಗೆ ಜೋಡಿಸಲು ಉದ್ದೇಶಿಸಲಾಗಿದೆ.

ಕ್ರೀಡಾ ಕಾರ್ಯಕ್ರಮಕ್ಕೆ ಬರುವವರು ಕೇವಲ ಸ್ಪರ್ಧಾಳುಗಳಾಗಿ ಹಿಂದಿರುಗಬಾರದು. ಅವರೊಂದಿಗೆ ಬರುವ ಕುಟುಂಬ ಮತ್ತು ಸ್ನೇಹಿತರೂ ಕರ್ನಾಟಕದ ಕ್ರೀಡಾ ಪ್ರವಾಸವನ್ನು ಅನುಭವಿಸುವ ಪ್ರವಾಸಿಗರಾಗಬೇಕು. ಕಮ್‌ ಫಾರ್‌ ದಿ ಸ್ಪೋರ್ಟ್‌, ಸ್ಟೇ ಫಾರ್‌ ಕರ್ನಾಟಕ ಎಂಬುದು ಈ ಉಪಕ್ರಮದ ಮೂಲ ಆಶಯ ಅವರು ಹೇಳಿದರು.

ಬೆಂಗಳೂರು, ಮೈಸೂರು, ಕರಾವಳಿ ಮತ್ತು ಇತರೆ ತಾಣಗಳಲ್ಲಿ ನಡೆಯುವ ಕ್ರೀಡಾ ಕಾರ್ಯಕ್ರಮಗಳೊಂದಿಗೆ 2 3 ದಿನಗಳ ಪ್ರವಾಸಿಗರ ವಾಸ್ತವ್ಯ, ಸ್ಥಳೀಯ ಆಹಾರ, ಪರಂಪರೆ, ಸಂಸ್ಕೃತಿ ಮತ್ತು ಪ್ರವಾಸಿ ಅನುಭವಗಳನ್ನು ಜೋಡಿಸುವ ಯೋಜನೆ ರೂಪಿಸಲಾಗುತ್ತಿದೆ.
ಮುಂದಿನ ಹಂತದಲ್ಲಿ ಸರ್ಫಿಂಗ್‌, ಕಯಾಕಿಂಗ್‌, ವಾಟರ್‌ ಸ್ಪೋರ್ಟ್ಸ್ , ಟ್ರೇಲ್‌ ರನ್ನಿಂಗ್‌, ಸೈಕ್ಲಿಂಗ್‌ ಮತ್ತು ಇತರೆ ಸಾಹಸ ಕ್ರೀಡೆಗಳನ್ನು ಒಳಗೊಂಡ ರಾಜ್ಯವ್ಯಾಪಿ ಸ್ಪೋರ್ಟ್ಸ್ ಅಡ್ವೆಂಚರ್‌ ಟೂರಿಸಂ ಕ್ಯಾಲೆಂಡರ್‌ ರೂಪಿಸುವ ಉದ್ದೇಶವಿದೆ.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ, ಪ್ರತಿಯೊಂದು ಪ್ರಮುಖ ಕ್ರೀಡಾ ಕಾರ್ಯಕ್ರಮವನ್ನೂ ಆಯಾ ಸ್ಥಳದ ಐತಿಹ್ಯ ತಿಳಿಯುವ ಅನುಭವದ ಜೊತೆ ಜೋಡಿಸುವುದು ನಮ ಉದ್ದೇಶ. ಇದರಿಂದ ಪ್ರವಾಸಿಗರ ವಾಸ್ತವ್ಯ ಅವಧಿ ಹೆಚ್ಚಿಸುವುದರ ಜೊತೆಗೆ ಹೋಟೆಲ್‌, ಹೋಂಸ್ಟೇ, ಸ್ಥಳೀಯ ಸಾರಿಗೆ, ಆಹಾರ, ಮಾರ್ಗದರ್ಶಕರು ಮತ್ತು ಸಣ್ಣ ಉದ್ಯಮಗಳಿಗೆ ನೇರ ಆರ್ಥಿಕ ಅವಕಾಶ ಸೃಷ್ಟಿಸಬಹುದು ಎಂದು ಹೇಳಿದರು. ಆಕ್ಟೀವ್‌ ಕರ್ನಾಟಕವನ್ನು ಹಂತ ಹಂತವಾಗಿ ರಾಜ್ಯದ ವಿವಿಧ ತಾಣಗಳಿಗೆ ವಿಸ್ತರಿಸಿ, ಕರ್ನಾಟಕವನ್ನು ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪಿಸುವುದು ಇಲಾಖೆಯ ಗುರಿಯಾಗಿದೆ.

ಮೊದಲ ಹಂತವಾಗಿ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯ ಜೊತೆಗೆ ಪ್ರವಾಸೋದ್ಯಮ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಸಂಸ್ಥೆಯ ಜೊತೆಗೂಡಿ ಮ್ಯಾರಥಾನ್‌, ಸೈಕ್ಲಾಥಾನ್‌ ಹಾಗೂ ಟ್ರಯಥ್ಲಾನ್‌ ಚಟುವಟಿಕೆಗಳನ್ನು ಇವರ ಜೊತೆಗೂಡಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

RELATED ARTICLES
spot_img

Latest News