Homeರಾಜ್ಯಶಂಕಿತ ಉಗ್ರ ಸುಹೇಲ್‌ಗೆ ಎನ್‌ಐಎ ಗ್ರಿಲ್‌

ಶಂಕಿತ ಉಗ್ರ ಸುಹೇಲ್‌ಗೆ ಎನ್‌ಐಎ ಗ್ರಿಲ್‌

NIA grills suspected terrorist Suhail

ಬೆಂಗಳೂರು,ಜೂ.27- ಶಂಕಿತ ಉಗ್ರ ಸುಹೇಲ್‌ನನ್ನು ರಾಷ್ಟ್ರೀಯ ತನಿಖಾದಳದ (ಎನ್‌ಐಎ) ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಕೆಲವು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಬಂಧಿಸಲಾಗಿದ್ದ ಆತನನ್ನು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿ ಉಗ್ರ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಯೋದ್ಯಯ ರಾಮಮಂದಿರ ಸ್ಫೋಟದ ಸಂಚು ಹಾಗೂ ಪಾಕಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಹಿನ್ನಲೆಯಲ್ಲಿ ನಿನ್ನೆ ಹರಿಹರಕ್ಕೆ ಆಗಮಿಸಿದ ಎನ್‌ಐಎ ಅಧಿಕಾರಿಗಳ ವಿಶೇಷ ತಂಡವು ಶಂಕಿತ ಉಗ್ರನಿಗೆ ಗ್ರಿಲ್‌ ಮಾಡಿದೆ.

ಶಂಕಿತ ಉಗ್ರ ಸುಹೇಲ್‌ನ ದೇಶದ್ರೋಹಿ ಸಂಚು ಹಾಗೂ ಅಂತರಾಷ್ಟ್ರೀಯ ಸಂಪರ್ಕ ಹೊಂದಿರುವ ಬಗ್ಗೆ ಇನ್ನಷ್ಟು ಆಳವಾಗಿ ತನಿಖೆ ನಡೆಯುತ್ತಿದೆ. ಶಂಕಿತ ಮೂವರು ಉಗ್ರರ ಬಂಧನದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಹಾಗೂ ಒಳನಾಡಿನ ಇತರ ಭಾಗಗಳಲ್ಲಿ ಎನ್‌ಐಎ ತನಿಖೆ ಚುರುಕುಗೊಳಿಸಲಿದೆ.

RELATED ARTICLES

Latest News