Homeರಾಜ್ಯಡ್ರಗ್ಸ್ ಬೇಡ ಬ್ರೋ… ಪೊಲೀಸರಿಗೆ ಸಹಕರಿಸಿ ಬ್ರೋ

ಡ್ರಗ್ಸ್ ಬೇಡ ಬ್ರೋ… ಪೊಲೀಸರಿಗೆ ಸಹಕರಿಸಿ ಬ್ರೋ

'No drugs bro' : BEngaluru Police Campaign

ವಿ.ರಾಮಸ್ವಾಮಿ ಕಣ್ವ
ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಬೆಂಗಳೂರು ನಗರ ಪೊಲೀಸರು ಮಾದಕ ವಸ್ತು ಸಾಗಾಟ ಮಾರಾಟ ಮತ್ತು ಬಳಕೆಯನ್ನು ತಪ್ಪಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಆಪರೇಷನ್‌ ರೈಸ್‌‍' ಮತ್ತುಬೇಡ ಬ್ರೋ’ ಎಂಬ ಉಪಕ್ರಮಗಳ ಮೂಲಕ ನಗರ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.

ಇಂದಿನ ಯುವ ಜನಾಂಗ ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುವಾಗ ಬ್ರೋ, ಬ್ರೋ ಎಂಬ ಪದವನ್ನು ಬಳಸುತ್ತಿದ್ದಾರೆ. ಯುವಜನರು ಕಾಯಿನ್‌ ಮಾಡಿರುವ ಬ್ರೋ' ಪದವನ್ನು ನಮ ಪೊಲೀಸರು ಬಳಸಿಕೊಂಡು ಮಾದಕ ವಸ್ತುಗಳನ್ನು ತ್ಯಜಿಸಲುಬೇಡ ಬ್ರೋ’ ಎಂಬ ಅಭಿಯಾನ ಆರಂಭಿಸಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಮಾದಕ ವಸ್ತು ಬಳಕೆ ಹೆಚ್ಚಳ:
ಆಧುನಿಕ ಜೀವನಶೈಲಿ ರಾತ್ರಿ ಜೀವನ, ವಿದೇಶಿ ಪ್ರಜೆಗಳ ಸ್ನೇಹ, ಸಂಪರ್ಕ, ಡಿಜಿಟಲ್‌ ಜಾಲ ಬಳಕೆ ಮುಂತಾದ ಕಾರಣಗಳಿಂದ ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ.ಯುವಜನರಲ್ಲಿ ಪ್ರಭಾವ, ಮಾನಸಿಕ ಒತ್ತಡ, ಮನರಂಜನೆ, ಪ್ರಾಯೋಗಿಕವಾಗಿ ಆರಂಭವಾಗುವ ವ್ಯಸನಗಳು ಮಾದಕ ವಸ್ತುಗಳ ಬೇಡಿಕೆ ಮತ್ತು ಪೂರೈಕೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಈ ಸಾಮಾಜಿಕ ಪಿಡುಗನ್ನು ತೊಲಗಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಯುವ ಜನತೆ ಸೆಳೆಯಲು ಬೇಡ ಬ್ರೋ:
ಅದರಲ್ಲೂ ಯುವ ಜನತೆಯ ಗಮನ ಸೆಳೆಯಲು ಬೇಡ ಬ್ರೋ ಅಭಿಯಾನ ಆರಂಭಿಸಿದ್ದಾರೆ. ಯುವ ಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಈ ವ್ಯಸನವನ್ನು ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ವಿಶೇಷ ಜಾಗೃತಿ ಅಭಿಯಾನ ಇದಾಗಿದೆ.

ಯುವ ಜನರಿಗೆ ಸುಲಭವಾಗಿ ಅರ್ಥವಾಗುವ, ಅವರ ಮನಸ್ಥಿತಿಗೆ ಹತ್ತಿರವಾಗುವ ಮತ್ತು ಯುವ ಸಂದೇಶಗಳ ಮೂಲಕ ಮಾದಕ ವ್ಯಸನ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಕಾನೂನು ಬದ್ಧ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುವುದು ಹಾಗೂ ಸ್ನೇಹಿತರ ಒತ್ತಡಕ್ಕೆ ಮಣಿಯದೆ ದೃಢವಾಗಿ ಮಾದಕ ವಸ್ತುಗಳನ್ನು ನಿರಾಕರಿಸುವ ಮನೋಭಾವ ಬೆಳೆಸಲು ಅಭಿಯಾನ ಪ್ರೇರೇಪಿಸುತ್ತದೆ.

ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಗುರಿ:
ಯುವ ಜನರನ್ನು ಮಾದಕ ವ್ಯಸನ ವಿರೋಧಿ ರಾಯಭಾರಿಯಾಗಿ ಸಬಲೀಕರಣಗೊಳಿಸುವ ಮೂಲಕ ಆರೋಗ್ಯಕರ, ಸುರಕ್ಷಿತ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ಬೇಡ ಬ್ರೋ ಅಭಿಯಾನದ ಪ್ರಮುಖ ಉದ್ದೇಶ ವಾಗಿದೆ.

ಮಾದಕ ವಸ್ತುಗಳು ನಿಮೆಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಅವುಗಳು ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಆ ಒಂದು ತಪ್ಪು ನಿರ್ಧಾರವೇ ನಿಮ ಆರೋಗ್ಯ, ಶಿಕ್ಷಣ, ವೃತ್ತಿ, ಕುಟುಂಬ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ಮಾದಕ ವಸ್ತು ಮುಕ್ತ ಯುವಜನತೆ ಎಂದರೆ ಸುಶಿಕ್ಷಿತ ಕುಟುಂಬ, ಸದೃಢ ಸಮಾಜ ಮತ್ತು ಉತ್ತಮ ಭವಿಷ್ಯ. ಇದಕ್ಕಾಗಿ ಸಹೋದರ-ಸಹೋದರಿಯರೇ ಪೊಲೀಸರ ಜೊತೆ ಕೈಜೋಡಿಸಿ ಮಾದಕ ವಸ್ತು ಮುಕ್ತ ರಾಜ್ಯಕ್ಕೆ ಪಣತೊಡಿ.

ಪೊಲೀಸರಿಗೆ ಮಾಹಿತಿ ನೀಡಿ :
ಮಾದಕ ವಸ್ತು ಸಾಗಾಟ, ಮಾರಾಟ, ತಯಾರಿಕೆ, ಸೇವನೆ ನಿಮಗೆ ಕಂಡು ಬಂದರೆ ತಕ್ಷಣ ಪೋಲಿಸ್‌‍ ಸಹಾಯವಾಣಿ 112, 1908, ಕೇಂದ್ರ ಸರ್ಕಾರದ ಟೋಲ್‌ ಫ್ರಿ ಸಂಖ್ಯೆ 1933, ನಿಮ ಹತ್ತಿರದ ಪೊಲೀಸ್‌‍ ಠಾಣೆಗೆ ಅಥವಾ ಕೆಎಸ್‌‍ಪಿ ಆ್ಯಪ್‌ನಲ್ಲಿರುವ ಡ್ರಗ್‌್ಸ ಫ್ರೀ ಕರ್ನಾಟಕ ಆಯ್ಕೆಯನ್ನು ಬಳಸಿ ಮಾಹಿತಿ ನೀಡಿ. ನಿಮ ಹೆಸರುಗಳನ್ನು ಪೊಲೀಸರು ಖಂಡಿತವಾಗಿಯೂ ಗೌಪ್ಯವಾಗಿಡುತ್ತಾರೆ. ಆದ್ದರಿಂದ ಭಯ ಪಡಬೇಡಿ.

ಆರೋಗ್ಯದ ಮೇಲೆ ನೇರ ಪರಿಣಾಮ
ಮಾದಕ ವಸ್ತುಗಳ ಸೇವನೆಯಿಂದ ನಿಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದ್ದು, ಶ್ವಾಸಕೋಶದ ಸಮಸ್ಯೆ, ರಕ್ತದೊತ್ತಡ, ಪಾರ್ಶ್ವವಾಯು, ಕಿಡ್ನಿ ವೈಫಲ್ಯ, ನರದೋಷಗಳು, ಮರೆವು ಮತ್ತು ಖಿನ್ನತೆಗೆ ಒಳಗಾಗುತ್ತೀರಿ. ಆದುದರಿಂದ ಯುವ ಜನಾಂಗ ಮಾದಕ ವಸ್ತುಗಳು ಹಾಗೂ ಯಾವುದೇ ರೀತಿಯ ವ್ಯಸನಗಳಿಗೆ ಬೇಡ ಎಂದು ಹೇಳಿ ಮಾದಕ ವಸ್ತುಗಳನ್ನು ಉಪಯೋಗಿಸಲು ಒತ್ತಡ ಹೇರುವ ವ್ಯಕ್ತಿಗಳಿಂದ ದೂರವಿರಿ.

*ಕ್ರೀಡೆ, ವ್ಯಾಯಾಮ, ಉತ್ತಮ ಹವ್ಯಾಸಗಳು ಮತ್ತು ಸಕಾರಾತಕ ಸ್ನೇಹವನ್ನು ಆರಿಸಿಕೊಳ್ಳಿ.
*ಯಾರಾದರೂ ಮಾದಕ ವಸ್ತುಗಳನ್ನು ನೀಡಲು ಪ್ರಯತ್ನಿಸಿದರೆ ಪೋಷಕರು, ಶಿಕ್ಷಕರು, ವಿಶ್ವಾಸಾರ್ಹ ಹಿರಿಯರಿಗೆ ತಕ್ಷಣ ತಿಳಿಸಿ.
*ಮಾದಕ ವಸ್ತುಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಯಾವುದೇ ಭಯವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಿ.
*ಒಂದು ವೇಳೆ ನಿಮ ಸ್ನೇಹಿತರು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರೆ ಬೇಡ ಬ್ರೋ ಎಂದು ಹೇಳಿ, ಅವರುಗಳನ್ನು ಸರಿ ದಾರಿಗೆ ತನ್ನಿ.

RELATED ARTICLES

Latest News