ನಿತ್ಯ ನೀತಿ :ಹೂವಿನಂತೆ ಮಾತನಾಡಿ ಸುಳ್ಳಿನ ಪ್ರಪಂಚ' ಕಟ್ಟುವವರಿಗೆಅಭಿಮಾನಿಗಳು’ ಜಾಸ್ತಿ! ಮುಳ್ಳಿನಂತೆ ಮಾತಾಡಿ ಸತ್ಯದ ಪ್ರಪಂಚ' ತೋರಿಸುವವರಿಗೆವಿರೋಧಿಗಳು’ ಜಾಸ್ತಿ..!!
ಪಂಚಾಂಗ : ಶನಿವಾರ, 25-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ:ಜ್ಯೇಷ್ಠಾ ಪೂರ್ಣ / ಯೋಗ: ಬ್ರಹಾ / ಕರಣ: ಬವ
ಸೂರ್ಯೋದಯ – ಬೆ.6.04
ಸೂರ್ಯಾಸ್ತ – 06.50
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಸ್ತ್ರೀಯರಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದಿರಿ.
ವೃಷಭ: ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ.
ಮಿಥುನ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಕಟಕ: ಆದಾಯ ಹೆಚ್ಚಾದರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಅನಿವಾರ್ಯ.
ಸಿಂಹ: ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ಕನ್ಯಾ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಉತ್ತಮ.
ತುಲಾ: ಸಂಗಾತಿಯೊಂದಿಗೆ ಚರ್ಚಿಸಿ ಹಣಕಾಸಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಿ.
ವೃಶ್ಚಿಕ: ವೃತ್ತಿ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.
ಧನುಸ್ಸು: ಹೊಸ ಜನರನ್ನು ಭೇಟಿ ಮಾಡು ವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.
ಮಕರ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಕುಂಭ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ಮೀನ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.
