Homeರಾಜ್ಯಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ : ಯು.ಟಿ. ಖಾದರ್‌

ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ : ಯು.ಟಿ. ಖಾದರ್‌

No official information has been received about the cabinet addition so far: U.T. Khader

ಬೆಂಗಳೂರು, ಜೂ.3-ಇದುವರೆಗೆ ಸಂಪುಟ ಸೇರ್ಪಡೆ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಬಾಲು ಬಂದರೂ ಬ್ಯಾಟಿಂಗ್‌ ಮಾಡುತ್ತೇನೆ.ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಅವರು ತಿಳಿಸಿದರು.

ನಾನು ಇನ್ನೂ ಸ್ಪೀಕರ್‌ ಆಗಿಯೇ ಇದ್ದು, ಸಚಿವ ಸ್ಥಾನ ನೀಡುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದ ಅವರು, ಮೂರು ವರ್ಷಗಳಲ್ಲಿ ವಿಧಾನಸಭೆಯಲ್ಲಿ ಹಲವು ಕೆಲಸ ಮಾಡಿದ್ದೇವೆ. ಇಂದು ಮಧ್ಯಾಹ್ನ 3.30ರ ಒಳಗಾಗಿ ಕಾಂಗ್ರೆಸ್‌‍ ಪಕ್ಷದಿಂದ ಅಧಿಕೃತ ಮಾಹಿತಿ ಬರುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES
spot_img

Latest News