Homeರಾಜ್ಯಕಾಡಾನೆಗೆ ಕೆಣಕಿದ್ದ ಇಬ್ಬರು ಕಿಡಿಗೇಡಿಗಳಿಗೆ 10 ಸಾವಿರ ರೂ. ದಂಡ

ಕಾಡಾನೆಗೆ ಕೆಣಕಿದ್ದ ಇಬ್ಬರು ಕಿಡಿಗೇಡಿಗಳಿಗೆ 10 ಸಾವಿರ ರೂ. ದಂಡ

ಮೈಸೂರು, ನ. 20- ರಸ್ತೆ ಬದಿ ನಿಂತಿದ್ದ ಕಾಡಾನೆಗೆ ಕಲ್ಲು ಹೊಡೆದಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆ ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತಪ್ಪೊಪ್ಪಿಗೆ ಹೇಳಿಕೆಯೊಂದಿಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.

ರಸ್ತೆ ಬದಿ ಮೇಯುತ್ತಿದ್ದ ಕಾಡಾನೆಗೆ ಸ್ಕೂಟರ್‌ನಲ್ಲಿ ಬಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಆನೆಮಾಳ ಹಾಡಿ ನಿವಾಸಿಗಳಾದ ಎ.ಎಂ. ರಾಜೇಶ್‌ ಹಾಗೂ ಎ.ವಿ. ಸುಮೇಶ್‌ ಎಂಬುವರು ಕಲ್ಲು ಎಸೆದು ಆನೆಯನ್ನು ಕೆಣಕುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ಆ ವಿಡಿಯೋ ಗಮನಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಆನೆ ಮೇಲೆ ಕಲ್ಲೆಸದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.ಈ ಹಿನ್ನೆಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಸೌರಭ್‌ ಕುಮಾರ್‌ ನಿರ್ದೇಶನದ ಮೇರೆಗೆ ನಾಗರಹೊಳೆಯ ಡಿ.ಬಿ. ಕುಪ್ಪೆ ಆರ್‌ಎ್‌‍ಒ ಎಸ್‌‍.ಎಸ್‌‍ ಸಿದ್ದರಾಜು ತನಿಖೆ ಕೈಗೊಂಡು ಇಬ್ಬರಿಗೆ ದಂಡ ವಿಧಿಸಿದ್ದಾರೆ.

RELATED ARTICLES

Latest News