Homeರಾಜ್ಯಬೆಂಗಳೂರಿನ 100ಕ್ಕೂ ಹೆಚ್ಚು ಕಡೆ ಆರ್‌ಎಸ್‌‍ಎಸ್‌‍ ಪಥಸಂಚಲನ ಯಶಸ್ವಿ

ಬೆಂಗಳೂರಿನ 100ಕ್ಕೂ ಹೆಚ್ಚು ಕಡೆ ಆರ್‌ಎಸ್‌‍ಎಸ್‌‍ ಪಥಸಂಚಲನ ಯಶಸ್ವಿ

ಬೆಂಗಳೂರು,ಅ.25- ನಗರದ ನೂರಕ್ಕೂ ಹೆಚ್ಚು ಕಡೆ ಇಂದು ಬೆಳಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌‍ಎಸ್‌‍) ಪಥ ಸಂಚಲನ ನಡೆಸಿದೆ. ಇಂದು ಸಂಜೆಯೂ ಸಹ ನಗರದ ಹಲವು ಕಡೆ ಈ ಪಥ ಸಂಚಲವನ್ನು ಹಮಿಕೊಳ್ಳಲಾಗಿದೆ.

ಈ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿಯಾದ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಸಿಎಆರ್‌ ಮತ್ತು ಕೆಎಸ್‌‍ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಡಿಸಿಪಿ,ಎಸಿಪಿಗಳು ಪಥ ಸಂಚಲನ ನಡೆಯುವ ಸ್ಥಳಗಳಲ್ಲಿ ಮೊಕ್ಕಂ ಹೂಡಿದ್ದು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಇಂದು ಬೆಳಗ್ಗೆ ನಗರದ ಯಶವಂತಪುರ, ರಾಜಾಜಿನಗರ, ಪೀಣ್ಯ, ಬ್ಯಾಡರಹಳ್ಳಿ, ಚಾಮರಾಜಪೇಟೆ,ಹೆಚ್‌ಎಸ್‌‍ಆರ್‌ ಲೇಔಟ್‌, ಮಡಿವಾಳ, ಕೆಆರ್‌ಪುರ, ವೈಟ್‌ಫೀಲ್ಡ್ ಮುಂತಾದ ಕಡೆಗಳಲ್ಲಿ ಪಥ ಸಂಚಲನ ನಡೆದಿದೆ.

ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಸಹ ಆರ್‌ಎಸ್‌‍ಎಸ್‌‍ ಇಂದು ಪಥ ಸಂಚಲನ ಹಮಿಕೊಂಡಿತ್ತು. ಶನಿವಾರ ಸಹ ರಾಜ್ಯದ ಕೆಲವು ಕಡೆ ಈ ಪಥ ಸಂಚಲನ ನಡೆದಿದೆ.

RELATED ARTICLES
spot_img

Latest News