Homeರಾಜ್ಯಮತ್ತೆ ಬೆಳ್ಳಿ ಕೆ.ಜಿ. 25 ಸಾವಿರ ಹೆಚ್ಚಳ..!

ಮತ್ತೆ ಬೆಳ್ಳಿ ಕೆ.ಜಿ. 25 ಸಾವಿರ ಹೆಚ್ಚಳ..!

Silver kg. 25 thousand increase again..!

ಬೆಂಗಳೂರು, ಫೆ.23-ಕಳೆದ ವಾರ ಏರಿಳಿತವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಈ ವಾರದ ಆರಂಭದಲ್ಲಿ ಚೇತರಿಕೆಯಾಗಿವೆ. ನಿರಂತರ ಕುಸಿತದಿಂದ ಚೇತರಿಕೆ ಕಂಡ ಬೆಳ್ಳಿ ಒಂದು ಕೆ.ಜಿ. 25 ಸಾವಿರ ರೂ. ಏರಿಕೆಯಾಗಿದೆ.

ಚಿನ್ನವೂ ಏರು ಗತಿಯಲ್ಲಿದ್ದು, ಇಂದು 24 ಕ್ಯಾರಟ್‌ನ ಚಿನ್ನ ಒಂದು ಗ್ರಾಂಗೆ 207 ರೂ., 22 ಕ್ಯಾರಟ್‌ ಚಿನ್ನ ಒಂದು ಗ್ರಾಂಗೆ 190 ರೂ. ಹಾಗೂ 18 ಕ್ಯಾರೆಟ್‌ ಚಿನ್ನ ಒಂದು ಗ್ರಾಂಗೆ 155 ರೂ. ನಷ್ಟು ಹೆಚ್ಚಾಗಿದೆ.

ದರ ಏರಿಕೆಯಿಂದ 24 ಕ್ಯಾರಟ್‌ನ ಚಿನ್ನ ಒಂದು ಗ್ರಾಂಗೆ 16,135 ರೂ., 22 ಕ್ಯಾರಟ್‌ ಚಿನ್ನ ಒಂದು ಗ್ರಾಂಗೆ 14,790 ರೂ. ಹಾಗೂ 18 ಕ್ಯಾರೆಟ್‌ ಚಿನ್ನ ಒಂದು ಗ್ರಾಂಗೆ 12,101 ರೂ. ನಷ್ಟಾಗಿದೆ.

ಫೆ.18ರಂದು ಸ್ಥಿರವಾಗಿದ್ದ ಚಿನ್ನದ ದರವು ಫೆ.19ರ ನಂತರ ಏರುಗತಿಯಲ್ಲಿ ಸಾಗಿದೆ. ನಿನ್ನೆ ಭಾನುವಾರ ದರ ಏರಿಕೆಯಾಗಿರಲಿಲ್ಲ. ಇಂದು ಮತ್ತೆ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದ್ದು, ನಿರಂತರ ಬೆಲೆ ಏರಿಕೆಗೆ ಗ್ರಾಹಕರು ಹುಬ್ಬೇರಿಸುವಂತಾಗಿದೆ.

ಚಿನ್ನದಂತೆ ಬೆಳ್ಳಿಯೂ ಏರುಗತಿಯಲ್ಲಿದ್ದು, ಇಂದು ಪ್ರತಿ ಕೆ.ಜಿ.ಗೆ 25 ಸಾವಿರ ರೂ. ನಷ್ಟು ಹೆಚ್ಚಳವಾಗಿದ್ದು, 3 ಲಕ್ಷ ರೂ. ತಲುಪಿದೆ. ಫೆ. 19ರ ನಂತರ ಸತತ ಏರುಗತಿಯಲ್ಲಿ ಸಾಗಿದೆ. ಈ ಅವಧಿಯಲ್ಲಿ ಒಟ್ಟು 45 ಸಾವಿರ ರೂ. ನಷ್ಟು ಒಂದು ಕೆ.ಜಿ. ಬೆಳ್ಳಿ ದರ ಹೆಚ್ಚಾಗಿದೆ.

ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಹೆಚ್ಚಾಗುವುದು ಒಂದೆಡೆಯಾದರೆ, ಮದುವೆಗಾಗಿ ಆಭರಣ ಖರೀದಿಸುವವರ ಸಂಖ್ಯೆಯೂ ಹೆಚ್ಚಿದೆ. ಇವಿ ವಾಹನಗಳಿಗೆ ಬೆಳ್ಳಿ ಬಳಕೆ ಮಾಡುವುದರಿಂದ ಹಾಗೂ ಚಿನ್ನ ಲೇಪಿತ ಬೆಳ್ಳಿ ಆಭರಣಗಳಿಂದಾಗಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.

RELATED ARTICLES
spot_img

Latest News