ಬೆಂಗಳೂರು, ಫೆ.17- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್ ರವರು, ಬಡ್ತಿ ಪಡೆಯುವ ಸಲುವಾಗಿ ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿದ್ದ ಡಿ.ಬಿ.ನಟೇಶ್‌ರವರು ಸರ್ಕಾರದ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡು, ಕಲಂ 13(1)(ಎ) ಭ್ರಷ್ಟಚಾರ ಪ್ರತಿಬಂಧಕ ಕಾಯಿದೆ 1988 (ತಿದ್ದುಪಡಿ ಕಾಯಿದೆ 2018) ರೀತ್ಯಾ ಅಪರಾಧ ಕೃತ್ಯ ಎಸಗಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ಡಿ.ಬಿ.ನಟೇಶ್ ಅವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಿ, ವರದಿ ಪಡೆದುಕೊಂಡು ಸರ್ಕಾರದ ಕೆಲಸದಿಂದ ವಜಾ ಮಾಡಬೇಕಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಕೋಟ್ಯಾಂತರ ರೂಪಾಯಿ ಹಣ ಪಡೆದು, ಬಡ್ತಿ ಕೊಡಿಸುವ ಮೂಲಕ ಅಕ್ರಮ, ಭ್ರಷ್ಟಚಾರ ನಡೆಸಿ, ಸಾರ್ವಜನಿಕರ (ಸರ್ಕಾರದ) ಆಸ್ತಿಯನ್ನು ಕಬಳಿಸಿರುವವರಿಗೆ ಪರೋಕ್ಷವಾಗಿ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಿ.ಬಿ.ನಟೇಶ್‌ರವರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಬಿ.ಎಂ.ರವರಿಗೆ ಅಕ್ರಮ ಲಾಭ ಮಾಡಿಕೊಡುವ ಉದ್ದೇಶ ಹೊಂದಿದ್ದರು. ಭ್ರಷ್ಟಚಾರ ಪ್ರತಿಬಂಧಕ ಕಾಯಿದೆ 1968 (ತಿದ್ದುಪಡಿ ಕಾಯಿದೆ 2018) ರ ಕಲಂ 13(1)(ಎ) ರ ಪ್ರಕಾರ ನಟೇಶ್ ಗಂಭೀರ ಅಪರಾಧ ಮಾಡಿದ್ದಾರೆ. 2024ರ ಅಕ್ಟೋಬರ್ 1ರಂದು ತನಿಖಾಧಿಕಾರಿ ಬರೆದ ಪತ್ರ ಆಧರಿಸಿ ಡಿ.ಬಿ.ನಟೇಶ್ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡಲಾಗಿತ್ತೆ. ತನಿಖಾಧಿಕಾರಿ ಬರೆದಿರುವ ಪತ್ರದ ಬಗ್ಗೆ ಬಡ್ತಿ ನೀಡುವ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಟೇಶ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೆ, ರಕ್ಷಣೆ ಮಾಡಿರುವ ಉದ್ದೇಶವೇನು ? ಇದನ್ನು ಏಕೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಾರದು. ಡಿ.ಬಿ.ನಟೇಶ್‌ರವರಿಂದ ಕೋಟ್ಯಂತರ ರೂಪಾಯಿ ಹಣ ಪಡೆಯಲಾಗಿದೆ. 2026ರ ಫೆಬ್ರವರಿ 9ರಂದು ಲಂಚ ನೀಡುವ ಸಲುವಾಗಿ ಕೋಟ್ಯಂತರ ರೂಪಾಯಿಯನ್ನು, ಯಾವ ಸಂಖ್ಯೆಯ, ಯಾವ ವಾಹನದಲ್ಲಿ ಸಾಗಿಸಲಾಯಿತು ? ಯಾರ ಮುಖಾಂತರ ವ್ಯವಹಾರ ನಡೆಯಿತು ? ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ. ಅದು ಸುಳ್ಳಾಗಿದ್ದರೆ ಹೆಸರು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ದೂರು ನೀಡುವಂತೆ ಒತ್ತಾಯಿಸಿದ್ದಾರೆ.
ತಮಲ್ಲಾ ಆಕ್ಷೇಪಗಳಿಗೆ ಏಳು ದಿನಗಳ ಒಳಗೆ ಸ್ಪಷ್ಟಿಕರಣ ಮತ್ತು ದೃಢೀಕೃತ ದಾಖಲೆಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಮುಡಾ ಪ್ರಕರಣದಿಂದ ನನ್ನನ್ನು ಹಿಂದೆ ಸರಿಸಲು, ಹಲವರು ನನಗೆ ಆಮೀಷ ಒಡ್ಡುವ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀನಿಧಿ, ಹರ್ಷ ಎಂಬುವವರು ಆಮೀಷ ಒಡ್ಡಿದ್ದಾಗ ದೂರು ನೀಡಿದ್ದಾಗಿ ಸರಿಸಿಕೊಂಡಿದ್ದಾರೆ.
ಡಿ.ಬಿ.ನಟೇಶ್ ಆತೀಯರೊಬ್ಬರಿಗೆ ಕರೆ ಮಾಡಿ, ಸ್ನೇಹಮತಿ ಕೃಷ್ಣರನ್ನು ಹೇಗಾದರೂ ಮಾಡಿ ತಮ ಬಳಿಗೆ ಕರೆದುಕೊಂಡು ಬರುವಂತೆ ಹೇಳಿರುವ ಧ್ವನಿಮುದ್ರಣ ಸಿಕ್ಕಿದೆ ಎಂದು ತಿಳಿಸಿದ್ದರೆ. ಈ ಧ್ವನಿಮುದ್ರಣವನ್ನು ಜನ ಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿ, ತನಿಖೆಗೆ ಆದೇಶ ಮಾಡಲು ಕೋರುತ್ತೇನೆ ಎಂದಿದ್ದಾರೆ.
