ಬೆಂಗಳೂರು,ಜ.3- ಮತಗಳ್ಳತನ (ವೋಟ್‌ಚೋರಿ) ಕುರಿತು ನಡೆಸಿರುವ ಸಮೀಕ್ಷೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ವರದಿ ಮತ್ತು ಸಮೀಕ್ಷೆ ನಡೆಸುವ ಸಂಸ್ಥೆ (ಗ್ಲೋಬಲ್ ರಿಸರ್ಚ್ ಅಂಡ್
ಅಕಾಡೆಮಿಕ್ ಅಸೋಸಿಯೇಷನ್ ಮೆಥೋಡ್ಸ್ ) ಸಂಶೋಧನೆ ವರದಿಗಳ ಬಗ್ಗೆ ಸಂಸದ, ಹಿರಿಯ ಬಿಜೆಪಿ ನಾಯಕ ಲೆಹರ್ ಸಿಂಗ್ ಸಿರೋಯಾ ತಮ ಎಕ್‌್ಸಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಮ ಎಕ್‌್ಸ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 6 ಮಹತ್ವದ ಪ್ರಶ್ನೆಗಳನ್ನು ಕೇಳಿದ್ದಾರೆ. 2025ರ ಆಗಸ್ಟ್‌ನಲ್ಲಿ ಸಿದ್ದರಾಮಯ್ಯ ಸರ್ಕಾರದ ಇವ್ಯಾಲ್ಯುವೇಶನ್ ಮ್ಯಾನಿಟರಿಂಗ್ ಅಥಾರಿಟಿ ನಡೆಸಿದ ಸಮೀಕ್ಷೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಿಮ ಸಮೀಕ್ಷೆಯ ವೆಬ್‌ಸೈಟ್‌ನಲ್ಲಿದ್ದ ವರದಿಯನ್ನು ಮತ ಚೋರಿ ಆರೋಪಗಳ ಮೊದಲು ನಡೆಸಲಾಗಿತ್ತು ಎಂದು ಹೇಳಿ ತೆಗೆದುಹಾಕಿದ ಕಾರಣವೇನು?
ಅಧ್ಯಕ್ಷ ಡಾ. ಆರ್. ಬಾಲಸುಬ್ರಹಣಿಯನ್ ಹಾರ್ವರ್ಡ್, ಕೊರ್ನೆಲ್ ಶಿಕ್ಷಣ ಹೊಂದಿರುವವರಾಗಿ ಸಮೀಕ್ಷೆ ನಡೆಸಲು ಯೋಗ್ಯರಲ್ಲರಾ? ಡಾ. ಬಾಲಸುಬ್ರಹಣಿಯನ್ ಪ್ರಧಾನಮಂತ್ರಿ ಮೋದಿಯ ಕುರಿತು ಪುಸ್ತಕ ಬರೆದಿದ್ದರೆ, ಅವರ ವೃತ್ತಿಪರತೆ ಮೇಲೆ ಪ್ರಭಾವವಾಯಿತೆ?
ಹಾಗಾದರೆ ನೆಹರು-ಗಾಂಧಿ ರಾಜವಂಶದ ಬಗ್ಗೆ ಪುಸ್ತಕಗಳನ್ನು ಬರೆದವರೆಲ್ಲರೂ ಭ್ರಷ್ಟ ವೃತ್ತಿಪರರೇ? ಅಥವಾ ಹೊಗಳುಭಟ್ಟರೇ ಡಾ.ಬಾಲಸುಬ್ರಮಣಿಯನ್ (ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ದಶಕಗಳಿಂದ ಕೆಲಸ ಮಾಡಿದ್ದಾರೆ) ಅವರ ಸೈದ್ಧಾಂತಿಕ ಸಂಬಂಧದ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿದಿದ್ದರೆ, ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮತ್ತು ಈಗ, ಲೋಕಸಭಾ ಚುನಾವಣೆಗೆ ಮೊದಲು ಮತ್ತು ನಂತರ ಅವರ ಎರಡನೇ ಅವಧಿಯಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಅಧ್ಯಯನ ಮಾಡಲು ಮತ್ತು ಮುನ್ಸೂಚನೆ ನೀಡಲು ವಿವಿಧ ಸರ್ಕಾರಿ ಇಲಾಖೆಗಳು ಗುತ್ತಿಗೆಗಳನ್ನು ಏಕೆ ನೀಡಿವೆ?
2013-2018 ರ ನಡುವೆ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಡಾ. ಬಾಲಸುಬ್ರಮಣಿಯನ್ ಅವರ ನೇತೃತ್ವದಲ್ಲಿ ನಡೆಸಿದ ಸಮೀಕ್ಷೆಗಳು ಮತ್ತು ಅಧ್ಯಯನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಈ ಯಾವುದೇ ಸಮೀಕ್ಷೆಗಳು ಮತ್ತು ಅಧ್ಯಯನಗಳನ್ನು ಕೇಂದ್ರ ಅಥವಾ ರಾಜ್ಯ ಚುನಾವಣಾ ಆಯೋಗವು ನಡೆಸುತ್ತಿಲ್ಲ ಯಾಕೆ?ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ವರದಿಗಳನ್ನು ಏಕೆ ಸ್ವೀಕರಿಸಿ, ಈಗ ಅದು ಸಮಸ್ಯಾತ್ಮಕವಾಗಿದೆ ಎನ್ನುತ್ತಿರುವಿದೇಕೆ? ಪ್ರಧಾನಿ ಮೋದಿ ಮೇಲಿನ ಕರ್ನಾಟಕ ಕಾಂಗ್ರೆಸ್‌ನ ದ್ವೇಷವೇ ಅವರನ್ನು ಮುನ್ನಡೆಸುತ್ತಿದೆಯೇ ಅಥವಾ ಡಿ.ಕೆ.ಶಿವಕುಮಾರ್ ಇಂದ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಉಳಿಸಬೇಕಾದ ರಾಹುಲ್‌ಗಾಂಧಿಯವರ ಮೇಲೆ ಭಯವೇ? ಎಂದು ಪ್ರಶ್ನಿಸಿದ್ದಾರೆ.
