Thursday, April 16, 2026
Homeಕ್ರೀಡಾ ಸುದ್ದಿವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಬಾಂಗ್ಲಾ ಕ್ರಿಕೆಟಿಗ ರೆಹಮಾನ್‌ನನ್ನು ಕೈಬಿಟ್ಟ ಕೆಕೆಆರ್‌

ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಬಾಂಗ್ಲಾ ಕ್ರಿಕೆಟಿಗ ರೆಹಮಾನ್‌ನನ್ನು ಕೈಬಿಟ್ಟ ಕೆಕೆಆರ್‌

KKR drops Bangladesh pacer Rahman amid widespread outrage

ಗುವಾಹಟಿ, ಜ.3- ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉದ್ವಿಗ್ನಗೊಂಡಿರುವ ನಡುವೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ -2026 ರ ಆವೃತ್ತಿಗೆ ಮುಂಚಿತವಾಗಿ ಬಾಂಗ್ಲಾ ದೇಶದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ ಅವರನ್ನು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಆಡಳಿತ ಮಂಡಳಿ ಕೈಬಿಟ್ಟಿದೆ.

ಕಳೆದ ತಿಂಗಳು ನಡೆದ ಆಟ ಗಾರರ ಹರಾಜಿನಲ್ಲಿ ಚೆನ್ನೈಸೂಪರ್‌ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಜೊತೆಗಿನ ಜಿದ್ದಾಜಿದ್ದ ಬಿಡ್ಡಿಂಗ್‌ ನಂತರ ಕೆಕೆಆರ್‌ 30 ವರ್ಷದ ಎಡಗೈ ಬೌಲರ್‌ಅನ್ನು ಸೇವೆಗಳನ್ನು 2 ಕೋಟಿ ರೂ. ಮೂಲ ಬೆಲೆ ಯಿಂದ 9.20 ಕೋಟಿ ರೂ.
.ಗೆ ಪಡೆದುಕೊಂಡಿತ್ತು.

ಹಲವಾರು ಟೀಕೆಗಳ ನಡುವೆ ಇಂದು ಎಚ್ಚೆತ್ತ ಬಿಸಿಸಿಐ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆರ ನೀಡಿತ್ತು ಅಗತ್ಯವಿದ್ದರೆ ಕೆಕೆಆರ್‌ಗೆ ಬದಲಿ ಆಟಗಾರನನ್ನು ಹೆಸರಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಿಳಿಸಿದ್ದರು.

ಇತ್ತೀಚಿನ ಬೆಳವಣಿಗೆಗಳಿಂದಾಗಿ ಈ ನಿರ್ಧಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ ಇತ್ತೀಚೆಗೆ ಭಾರತದ ವಿರುದ್ದ ಹೇಳಿಕೆಗಳು,ಹಿಂದೂಗಳ ಹತ್ಯೆ ಮತ್ತು ಅಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವ ಸನ್ನಿವೇಶದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗನ ಭಾಗವಹಿಸುವಿಕೆಗೆ ತಡೆಗೆ ಬಿಸಿಸಿಐ ಮೇಲೆ ಒತ್ತಡ ಹೆಚ್ಚುತ್ತಿತ್ತು.

ಬಿಸಿಸಿಐ ಮತ್ತು ಜನರ ಬಾವನೆಗೆ ಸ್ಪಂದಸಿ ಬಾಂಗ್ಲಾ ಆಟಗಾರ ಆಯ್ಕೆಯನ್ನು ರದ್ದು ಮಾಡಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಕೆಕೆಆರ್‌ ತಿಳಿಸಿದೆ.ಪ್ರಸ್ತುತ ಎದ್ದಿದ್ದ ವಿವಾದಕ್ಕೆ ತೆರೆ ಎಳೆದಿದೆ.

RELATED ARTICLES

Latest News