Homeರಾಜ್ಯಹಲವು ಹೆದ್ದಾರಿಗಳ ಟೋಲ್‌ ದರ ಹೆಚ್ಚಳ

ಹಲವು ಹೆದ್ದಾರಿಗಳ ಟೋಲ್‌ ದರ ಹೆಚ್ಚಳ

Toll rates hiked on several highways

ಬೆಂಗಳೂರು,ಜು.23- ರಾಜ್ಯದ ಹಲವು ಹೆದ್ದಾರಿಗಳಲ್ಲಿ ಟೋಲ್‌ ದರಗಳನ್ನು ಹೆಚ್ಚಿಸಲಾಗಿದೆ. ಬೆಂಗಳೂರು-ಚೆನ್ನೈ ಎಕ್‌್ಸಪ್ರೆಸ್‌‍ವೇಯ ಕರ್ನಾಟಕ ವಿಭಾಗ ಮತ್ತು ರಾಜ್ಯದ ಮೂಲಕ ಹಾದುಹೋಗುವ ಇತರ ಎರಡು ಹೆದ್ದಾರಿಗಳಿಗೆ ಟೋಲ್‌ ಶುಲ್ಕವನ್ನು ಹೆಚ್ಚಿಸಿದೆ.

ರಾಷ್ಟ್ರೀಯ ಎಕ್‌್ಸಪ್ರೆಸ್‌‍ ವೇ 7 ರ ಬೆಂಗಳೂರು-ಬೇತಮಂಗಲ ವಿಭಾಗ ಮತ್ತು ಎನ್‌ಎಚ್‌-4 ನಲ್ಲಿ ಇಂಟರ್‌ಚೇಂಜ್‌ ಹೊಂದಿರುವ ಎನ್‌ಎಚ್‌ 207 ಕಡೆಗೆ 0.7 ಕಿಮೀ ಸಂಪರ್ಕ ರಸ್ತೆಗೆ ಈ ಹೆಚ್ಚಳ ಅನ್ವಯಿಸುತ್ತದೆ. ಎನ್‌ಎಚ್‌ಎಐ ಪ್ರಕಾರ ಶುಲ್ಕಗಳು ಮಾರ್ಚ್‌ 31, 2027 ರವರೆಗೆ ಜಾರಿಯಲ್ಲಿರುತ್ತವೆ.

ಕರ್ನಾಟಕದಲ್ಲಿ, 70.7 ಕಿಮೀ ಎಕ್‌್ಸಪ್ರೆಸ್‌‍ ವೇ ಹೊಸಕೋಟೆಯಿಂದ ಬೇತಮಂಗಲದವರೆಗೆ ಸಾಗಿ, ಆಂಧ್ರಪ್ರದೇಶದ ಗಡಿಯನ್ನು ತಲುಪುತ್ತದೆ. ಇದು ನಾಲ್ಕು ಟೋಲ್‌ ಪ್ಲಾಜಾಗಳನ್ನು ಹೊಂದಿದೆ: ಹೆಡಗಿನಬೆಲೆ (ಹೊಸಕೋಟೆ ಬಳಿ), ಅಗ್ರಹಾರ (ಕೋಲಾರ ಜಿಲ್ಲೆಯ ಮಾಲೂರು ಬಳಿ), ಕೃಷ್ಣರಾಜಪುರ (ಬಂಗಾರಪೇಟೆ ಬಳಿ) ಮತ್ತು ಸುಂದರಪಾಳ್ಯ (ಬೇತಮಂಗಲ ಬಳಿ) ಟೋಲ್‌ ಗೇಟ್‌ಗಳಿವೆ.

ಹೆಡಗಿನಬೆಲೆ ಟೋಲ್‌ ಪ್ಲಾಜಾದಲ್ಲಿ, ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳು ಈಗ ಅಗ್ರಹಾರದಿಂದ 50 ರೂ., ಕಷ್ಣರಾಜಪುರದಿಂದ 120 ರೂ. ಮತ್ತು ಸುಂದರಪಾಳ್ಯದಿಂದ 150 ರೂ. ಪಾವತಿಸಬೇಕಾಗುತ್ತದೆ.

ಬೆಂಗಳೂರು ವಾಹನ ಸವಾರರ ಜೇಬಿಗೆ ಕತ್ತರಿ:
ಇಂದಿನಿಂದ ನೈಸ್‌‍ ರಸ್ತೆ- ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್‌ ದರ ಏರಿಕೆ, ಹೊಸ ಶುಲ್ಕದ ವಿವರ ಈ ಕೆಳಗಿನಂತಿದೆ. ಅಗ್ರಹಾರದಲ್ಲಿ, ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳಿಗೆ ಹೆಡಗಿನಬೆಲೆಯಿಂದ 50 ರೂ., ಕಷ್ಣರಾಜಪುರದಿಂದ 70 ರೂ. ಮತ್ತು ಸುಂದರಪಾಳ್ಯದಿಂದ 95 ರೂ. ಪಾವತಿಸಬೇಕು.

ಕೃಷ್ಣರಾಜಪುರದಲ್ಲಿ, ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳಿಗೆ ಹೆಡಗಿನಬೆಲೆಯಿಂದ 120 ರೂ., ಅಗ್ರಹಾರದಿಂದ 70 ರೂ. ಮತ್ತು ಸುಂದರಪಾಳ್ಯದಿಂದ 30 ರೂ.ಹಣ ಪಾವತಿಸಬೇಕು. ಸುಂದರಪಾಳ್ಯದಲ್ಲಿ, ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳಿಗೆ ಹೆಡಗಿನಬೆಲೆಯಿಂದ 150 ರೂ., ಅಗ್ರಹಾರದಿಂದ 95 ರೂ. ಮತ್ತು ಕಷ್ಣರಾಜಪುರದಿಂದ 30 ರೂ. ಹಣ ಪಾವತಿಸಬೇಕು.

ಮಿನಿ ಬಸ್‌‍ಗಳು, ಟ್ರಕ್‌ಗಳು ಮತ್ತು ಬಸ್‌‍ಗಳು ಸೇರಿದಂತೆ ಇತರ ವಾಹನಗಳಿಗೂ ಟೋಲ್‌ ಶುಲ್ಕವನ್ನು ಹೆಚ್ಚಿಸಲಾಗಿದೆ. 24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣಕ್ಕೆ 50% ಕಡಿಮೆ ವೆಚ್ಚವಾಗುತ್ತದೆ. ಒಂದು ತಿಂಗಳಲ್ಲಿ 50 ಏಕ ಪ್ರಯಾಣಗಳಿಗೆ, ಟೋಲ್‌ ಅನ್ವಯವಾಗುವ ಶುಲ್ಕದ ಮೂರನೇ ಎರಡರಷ್ಟು ಇರುತ್ತದೆ.

ರಾಷ್ಟ್ರೀಯ ಹೆದ್ದಾರಿ 48 ರ 19.5 ಕಿ.ಮೀ ಬೆಂಗಳೂರು-ನೆಲಮಂಗಲ ವಿಭಾಗವನ್ನು ಬಳಸುವುದರಿಂದ ವಾಹನಗಳು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಾರುಗಳು/ಜೀಪ್‌ಗಳು/ವ್ಯಾನ್‌ಗಳು/ಲಘು ಮೋಟಾರು ವಾಹನಗಳಿಗೆ ಪರಿಷ್ಕೃತ ಶುಲ್ಕಗಳು 105 ರೂ. (ಒಂದು ಮಾರ್ಗ) ಮತ್ತು 155 ರೂ. (24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣ) ಹಣ ಪಾವತಿಸಬೇಕಾಗುತ್ತದೆ.

RELATED ARTICLES

Latest News