Monday, October 14, 2024
Homeಮನರಂಜನೆಪಡ್ಡೆಹೆಕ್ಳ ನಿದ್ದೆಗೆಡಿಸಲು ಸ್ಯಾಂಡಲ್‌ವುಡ್‌ಗೆ ಸನ್ನಿಲಿಯೋನ್‌ ರೀಎಂಟ್ರಿ

ಪಡ್ಡೆಹೆಕ್ಳ ನಿದ್ದೆಗೆಡಿಸಲು ಸ್ಯಾಂಡಲ್‌ವುಡ್‌ಗೆ ಸನ್ನಿಲಿಯೋನ್‌ ರೀಎಂಟ್ರಿ

Sunny Leone reentry in Sandalwood

ಬೆಂಗಳೂರು, ಸೆ.9- ಶೇಷಮಾ…. ಶೇಷಮಾ.. ಬಾಗಿಲು ತೆರೆಯಮ…. ಎಂದು ಡಿ.ಕೆ. ಸಿನಿಮಾದಲ್ಲಿ ಜೋಗಿ ಪ್ರೇಮ್‌ರೊಂದಿಗೆ ಭರ್ಜರಿ ಸ್ಟೆಪ್‌್ಸ ಹಾಕಿದ್ದ ಬಾಲಿವುಡ್‌ನ ಮಾದಕ ಬೆಡಗಿ ಸನ್ನಿಲಿಯೋನ್‌. ನಂತರ ಇಂದ್ರಜಿತ್‌ ಲಂಕೇಶ್‌ ಜೊತೆಗೆ ಲವ್‌ ಯೂ ಆಲಿಯಾ ಚಿತ್ರದಲ್ಲಿ ತುಂಡುಡುಗೆ ತೊಟ್ಟು ಜರ್ಬರ್‌ದಸ್ತ್‌ ಮೈಮಾಟ ಪ್ರದರ್ಶಿಸಿದ್ದರು. ಈಗ ಮತ್ತೆ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಯುಐ ಚಿತ್ರದಲ್ಲಿ ಭರ್ಜರಿ ಎಂಟ್ರಿ ಕೊಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯಲು ಸನ್ನಿಲಿಯೋನ್‌ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಹಾರಿ ಬಂದಿದ್ದಾಳೆ.

ಈಗಾಗಲೇ ಸನ್ನಿಲಿಯೋನ್‌ಳ ಮಾದಕ ಪೋಟೋವನ್ನು ಯುಐ ಚಿತ್ರತಂಡವು ಪ್ರಕಟಿಸಿದ್ದು, ಈ ಸಿನಿಮಾದಲ್ಲಿ ಸನ್ನಿಲಿಯೋನ್‌ ಕೇವಲ ಹಾಡಿಗೆ ಸ್ಟೆಪ್‌್ಸ ಹಾಕಿ ಕಾಣೆಯಾಗುತ್ತಾರೋ, ಅಥವಾ ಒಂದೆರಡು ದೃಶ್ಯಗಳಲ್ಲಿ ನಟಿಸಿ ಹರಯದ ಹುಡುಗರ ಎದೆಯಲ್ಲಿ ಚಿಟ್ಟೆಗಳು ಹಾರಾಡುವಂತೆ ಮಾಡುತ್ತಾರೋ ಎಂಬುದರ ಕುರಿತು ಚಿತ್ರತಂಡವು ಯಾವುದೇ ಮಾಹಿತಿ ನೀಡಿಲ್ಲ.

ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಯುಐ ಚಿತ್ರತಂಡವು ಈ ಚಿತ್ರದಲ್ಲಿ ರೇಷಾನಾಣಯ್ಯರ ಜೊತೆಗೆ ಒಬ್ಬ ಹಾಟ್‌ ನಟಿ ಪ್ರವೇಶಿಸುತ್ತಾರೆ ಎಂಬ ಸುದ್ದಿಯನ್ನು ಹರಿಬಿಟ್ಟಿದ್ದು, ಈಗ ಸನ್ನಿಲಿಯೋನ್‌ ಅವರಿರುವ ಪೋಟೋ ರಿವೀಲ್‌ ಆಗಿದೆ.

ಜಿ.ಮನೋಹರನ್‌ ಹಾಗೂ ಕೆ.ವಿ.ಶ್ರೀಕಾಂತ್‌ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಜೊತೆಗೆ ರೇಷಾನಾಣಯ್ಯ ಹಾಗೂ ನಿಧಿಸುಬ್ಬಯ್ಯ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್‌.ಸಿ.ವೇಣು ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತವಿದೆ.
ರವಿಶಂಕರ್‌, ಸಾಧುಕೋಕಿಲ, ಅಚ್ಚುತ್‌ಕುಮಾರ್‌ ಸೇರಿದಂತೆ ಹಲವು ದೊಡ್ಡ ಹೆಸರಿರುವ ಕಲಾವಿದರು ನಟಿಸುತ್ತಿದ್ದು, ಈಗ ಸನ್ನಿಲಿಯೋನ್‌ಳ ಪ್ರವೇಶವಾಗಿರುವುದರಿಂದ ಈ ಚಿತ್ರವು ಬೆಳ್ಳಿಪರದೆ ಮೇಲೆ ಯಾವಾಗ ಬಿಡುಗಡೆ ಆಗುತ್ತದೆಯೋ ಎಂದು ಪಡ್ಡೆ ಹೆಕ್ಳು ಜಾತಕಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

RELATED ARTICLES

Latest News