ನವದೆಹಲಿ, ಅ.6- ಚುನಾವಣೆ ಹೊಸ್ತಿಲಲ್ಲಿರುವ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಉಚಿತ ಕೊಡುಗೆಗಳ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಮತದಾರರಿಗೆ ಉಚಿತ ಕೊಡುಗೆಗಳನ್ನು ಘೋಷಣೆ ಮಾಡುವ ರಾಜಕೀಯ ಪಕ್ಷಗಳ ಮಾನ್ಯತೆಯನ್ನೇ ರದ್ದು ಮಾಡಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವಾಗಲೇ ಸುಪ್ರೀಂ ಕೋರ್ಟ್ ನೀಡಿರುವ ನೋಟಿಸ್ ಭಾರೀ ಮಹತ್ವ ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ಲಂಚ ನೀಡಲು ತೆರಿಗೆದಾರರ ಹಣವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಈ ನೋಟಿಸ್ ಜಾರಿ ಮಾಡಿತು.
ಮತದಾರರಿಗೆ ತೆರಿಗೆ ಹಣದಲ್ಲಿ ಉಚಿತವಾಗಿ ಕೊಡುಗೆಗಳನ್ನು ನೀಡುತ್ತಿರುವುದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ಸರ್ಕಾರಕ್ಕೂ ಸುಪ್ರೀಂಕೋರ್ಟ್ ಸೂಚಿಸಿದೆ.
ಬರಪೀಡಿತ ಪ್ರದೇಶಗಳಲ್ಲಿ ಕೇಂದ್ರ ತಂಡಗಳಿಂದ ಪರಿಸ್ಥಿತಿ ಅವಲೋಕನ
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಕೇಂದ್ರ, ಚುನಾವಣಾ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ನೋಟಿಸ್ ಜಾರಿ ಮಾಡಿದ್ದು, ತೆರಿಗೆದಾರರ ಹಣವನ್ನು ಎರಡು ರಾಜ್ಯ ಸರ್ಕಾರಗಳು ಮತದಾರರ ಆಮಿಷಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿತು.
ಸರ್ಕಾರ ಚುನಾವಣೆಗೂ ಮುನ್ನ ಹಣ ಹಂಚುವುದಕ್ಕಿಂತ ಕ್ರೂರವಾದ ಸಂಗತಿ ಇನ್ನೊಂದಿಲ್ಲ. ಇದು ಪ್ರತಿ ಬಾರಿಯೂ ನಡೆಯುತ್ತಿದ್ದು, ಅಂತಿಮವಾಗಿ ತೆರಿಗೆದಾರರ ಮೇಲೆ ಹೊರೆ ಬೀಳುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ನಾಲ್ಕು ವಾರಗಳಲ್ಲಿ ನೋಟಿಸ್‍ಗೆ ಪ್ರತಿಕ್ರಿಯಿಸುವಂತೆ ಪೀಠ ಹೇಳಿದೆ. ಭಟ್ತುಲಾಲ್ ಜೈನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಈ ವಿಷಯದ ಕುರಿತು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಅದನ್ನು ಸೇರಿಸಲು ಆದೇಶಿಸಿತು ದೇಶದಲ್ಲಿ ಹೆಚ್ಚುತ್ತಿರುವ ಉಚಿತ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿ, ಉಚಿತ ಯೋಜನೆಗಳು ದೇಶವನ್ನು ಆರ್ಥಿಕ ವಿನಾಶದತ್ತ ಕೊಂಡೊಯ್ಯುತ್ತಿವೆ. ಉಚಿತ ಯೋಜನೆಗಳಿಂದ ಯಾರೂ ಪ್ರಯೋಜನ ಪಡೆಯುತ್ತಿಲ್ಲ ಎಂದು ಅಭಿಪ್ರಾಯಟ್ಟಿದೆ.
ಈ ಹಿಂದೆ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್, ಇಂತಹ ಉಚಿತ ಘೋಷಣೆಗಳನ್ನು ಮುಂದುವರಿಸಿದರೆ, ಈ ಪ್ರಕ್ರಿಯೆಯು ದೇಶವನ್ನು ಆರ್ಥಿಕ ವಿನಾಶದತ್ತ ಕೊಂಡೊಯ್ಯುತ್ತದೆ. ಸರ್ಕಾರ ಈ ಬಗ್ಗೆ ಕಾನೂನು ತರುವವರೆಗೆ ನ್ಯಾಯಾಲಯ ಮಧ್ಯಪ್ರವೇಶಿಸಿ ಮಾರ್ಗಸೂಚಿಗಳನ್ನು ನಿರ್ಧರಿಸಬಹುದು ಎಂದು ಹೇಳಿದ್ದರು.
ಚುನಾವಣಾ ಪ್ರಚಾರದ ವೇಳೆ ವಿವಿಧ ಪಕ್ಷಗಳು ನೀಡಿರುವ ಉಚಿತ ಯೋಜನೆಗಳ ಭರವಸೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಈ ಪಿಐಎಲ್‍ಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂಬ ಸಲಹೆಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿತ್ತು.
ಯಾವುದೇ ರಾಜಕೀಯ ಪಕ್ಷಗಳು ಉಚಿತ ಯೋಜನೆಗಳನ್ನು ನೀಡುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಕೇಂದ್ರ ಚುನಾವಣಾ ಆಯೋಗ ಆಯೋಗ, ಹಣಕಾಸು ಆಯೋಗ, ಭಾರತ ಸರ್ಕಾರ, ವಿರೋಧ ಪಕ್ಷಗಳು, ರಿಸರ್ವ್ ಬ್ಯಾಂಕ್ ಮತ್ತು ಎಲ್ಲಾ ಪಾಲುದಾರರನ್ನು ಉಚಿತ ಘೋಷಣೆಯ ಸಾಧಕ-ಬಾಧಕಗಳನ್ನು ಸೂಚಿಸಲು ಆಹ್ವಾನಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಪ್ರಣಾಳಿಕೆಯಲ್ಲಿ ನೀಡಿರುವ ಉಚಿತ ಭರವಸೆಗಳು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಹೇಳಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡಿರುವ ಉಚಿತ ಭರವಸೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ನಲ್ಲಿ ತಾತ್ವಿಕ ಬೆಂಬಲವನ್ನು ನೀಡಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕಾರ್ಯವಿಧಾನ ಅಥವಾ ಪರಿಣಿತ ಸಂಸ್ಥೆಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇಂತಹ ಉಚಿತ ಘೋಷಣೆಗಳು ಆರ್ಥಿಕತೆಗೆ ಹೊರೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಆರ್ಥಿಕತೆಗೆ ಅಪಾಯಕಾರಿ. ಕೇಂದ್ರ ಸರ್ಕಾರವನ್ನು ಪ್ರತಿನಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಗೊಂದಲದ ಘೋಷಣೆಗಳು ಮತದಾರರ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಕುಗ್ಗಿಸುತ್ತದೆ. ಈ ಉಚಿತ ಭರವಸೆಗಳು ಮತದಾರರ ಮೇಲೆ ಏನು ಮತ್ತು ಹೇಗೆ ಪರಿಣಾಮ ಬೀರಲಿವೆ ಎಂಬುದು ಮತದಾರರಿಗೆ ತಿಳಿದಿರಬೇಕು. ಇದರಲ್ಲಿ ನಾವು ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದ್ದೇವೆ. ಭಾರತೀಯ ಚುನಾವಣಾ ಆಯೋಗವು ಈ ವಿಷಯವನ್ನು ಪರಿಶೀಲಿಸಬೇಕು ಎಂದು ತುಷಾರ್ ಮೆಹ್ತಾ ಸಲಹೆ ನೀಡಿದ್ದರು.
ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳು ಮತ್ತು ಗುಂಡಾಗಳ ತಾಣವಾಗಿದೆ : ಬಿಜೆಪಿ ವಾಗ್ದಾಳಿ
ಈ ವಿಚಾರವನ್ನು ಚುನಾವಣಾ ಆಯೋಗವೇ ನಿಭಾಯಿಸಬೇಕು ಎಂದು ಸರ್ಕಾರ ಈ ಹಿಂದೆಯೇ ಹೇಳಿದ್ದರಿಂದ ಇದು ಗಮನಾರ್ಹವಾಗಿದೆ. ಆದಾಗ್ಯೂ, ಕಳೆದ ಜುಲೈ 26 ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಚುನಾವಣಾ ಸಮಿತಿಯು ಸರ್ಕಾರದ ಮೇಲೆ ಜವಾಬ್ದಾರಿಯನ್ನು ಹಾಕಿದ್ದು, ಸುಪ್ರೀಂ ಕೋರ್ಟ್ ಈಗ ಕೇಂದ್ರ, ನೀತಿ ಆಯೋಗ, ಹಣಕಾಸು ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲಾ ಮಧ್ಯಸ್ಥಗಾರರಿಗೆ ಈ ವಿಷಯದ ಬಗ್ಗೆ ಚರ್ಚಿಸಲು ಮತ್ತು ಅದನ್ನು ಎದುರಿಸಲು ರಚನಾತ್ಮಕ ಸಲಹೆಗಳೊಂದಿಗೆ ಬರಲು ಸೂಚನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಯಲ್ಲಿ ಉಚಿತ ಯೋಜನೆಗಳ ಬಗ್ಗೆ ಉಚಿತ ರೇವಾರಿ ಸಂಸ್ಕೃತಿ ಎಂದು ಕರೆದಿದ್ದಾರೆ. ಹಾಗೆ, ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಈ ಬಗ್ಗೆ ಪ್ರಧಾನಿ ಮೋದಿ ಮೇಲೆ ದಾಳಿ ನಡೆಸುತ್ತಿದೆ. ಬಿಜೆಪಿ ನಾಯಕರ ಮನವಿಯಲ್ಲಿ, ಉಚಿತ ಯೋಜನೆಗಳು ದೇಶದ ಆರ್ಥಿಕತೆಗೆ ಹಾನಿಯನ್ನುಂಟುಮಾಡುತ್ತವೆ ಎಂದು ದೂರಿದೆ.
ದೆಹಲಿಯಲ್ಲಿ ಅಕಾರದಲ್ಲಿರುವ ಎಎಪಿ ಪರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ಅಫಿಡವಿಟ್ ಕೂಡ ಸಲ್ಲಿಸಲಾಗಿದ್ದು, ಅದರಲ್ಲಿಯೂ ಪಕ್ಷವಾಗಬೇಕೆಂದು ಒತ್ತಾಯಿಸಲಾಗಿದೆ. ಇದೇ ವೇಳೆ ಆಮ್ ಆದ್ಮಿ ಪಕ್ಷದ ಪರವಾಗಿ ಸಮಾಜ ಕಲ್ಯಾಣ ಯೋಜನೆಗೂ ಉಚಿತ ಕೊಡುಗೆಗಳಿಗೂ ವ್ಯತ್ಯಾಸವಿದೆ ಎಂದು ವಾದಿಸಲಾಯಿತು. ಉಚಿತ ಕೊಡುಗೆಗಳನ್ನು ಘೋಷಿಸಿದ ಪಕ್ಷಗಳ ಮಾನ್ಯತೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ.