ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ ಬಿಆರ್‌ಎಸ್‌, ಎಎಪಿ

ನವದೆಹಲಿ, ಜ.31-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ ಎಂದು ಪ್ರತಿಭಟಿಸಲು ಸಂಸತ್ತಿನ ಉಭಯ ಸದನಗಳ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣವನ್ನು ಬಿಆರ್‍ಎಸ್ ಹಾಗು ಆಮ್ ಆದ್ಮಿ ಪಕ್ಷ ಬಹಿಷ್ಕರಿಸಿದೆ. ರಾಜ್ಯಸಭೆಯಲ್ಲಿ ಭಾರತ್ ರಾಷ್ಟ್ರ ಸಮಿತಿಯ ಉಭಯ ಸದನದ ನಾಯಕರೂ ಆಗಿರುವ ಕೇಶವರಾವ್ ಮಾತನಾಡಿ ತಮ್ಮ ಪಕ್ಷವುಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಎಲ್ಲಾ ರಂಗಗಳಲ್ಲಿ ಆಡಳಿತದ ವೈಫಲ್ಯಕಂಡಿದೆ ಎಂದು ಆರೋಪಿಸಿ ಬಹಿಷ್ಕರಿಸುತ್ತಿದೆ ಎಂದು ಹೇಳಿದರು. ಬಿಆರ್‍ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ […]