ಚಂದ್ರಶೇಖರ್ ಸಾವಿನ ಪ್ರಕರಣ : ವಿನಯ್ ಗುರೂಜಿ ಬಳಿ ಮಾಹಿತಿ ಕಲೆಹಾಕಿದ ಪೊಲೀಸರು

ಬೆಂಗಳೂರು,ನ.7- ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರ ಮಗನ ನಿಗೂಢ ಸಾವು ಕುರಿತು ತನಿಖಾ ತಂಡ ವಿನಯ್ ಗುರೂಜಿ ಅವರಿಂದ ಮಾಹಿತಿ ಪಡೆದಿದೆ. ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಮಠಕ್ಕೆ ತಡರಾತ್ರಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಆಗಮಿಸಿದ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗುರೂಜಿ ಅವರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಆಶ್ರಮದ ಸಿಬ್ಬಂದಿ, ಆಶ್ರಮದ ಉಸ್ತುವಾರಿ ವಹಿಸಿರುವ ಭಕ್ತರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು. ಭೇಟಿ […]

ಕಳಂಕಿತ ಕೋಡಿಹಳ್ಳಿ ಹೊರ ಹಾಕಿ : ತೀವ್ರ ವಾಗ್ವಾದ

ಬೆಂಗಳೂರು, ಅ.15- ಭ್ರಷ್ಟಾಚಾರದ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಭೆಗೆ ಆಹ್ವಾನಿಸಿದ್ದಕ್ಕೆ ರೈತ ಮುಖಂಡರು ಸಚಿವರ ಎದುರೇ ಸಭೆಯಿಂದ ಹೊರ ಹಾಕಲು ತೀವ್ರ ವಾಗ್ವಾದ ನಡೆಯಿತು. ಕಬ್ಬು ಬೆಲೆ ನಿಗದಿ ಹಾಗೂ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಲು ವಿಧಾನಸೌಧದಲ್ಲಿ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ರೈತ ಮುಖಂಡರ ಜೊತೆ ಸಭೆ ಕರೆದಿದ್ದರು. ಸಭೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ಅವರಾಗಿಯೇ ಸಭೆಯಲ್ಲಿ ಆಸೀನರಾಗಿದ್ದು ಕೆಲವು ರೈತರ ಮುಖಂಡರು […]