ಹೊಯ್ಸಳರ ಕಾಲದ ವೀರಗಲ್ಲು ಶಾಸನ ಪತ್ತೆ

ದೇವನಹಳ್ಳಿ, ಜ. 22- ತಾಲ್ಲೂಕಿನ ಕಸಬಾ ಹೋಬಳಿಯ ಜಿ.ಎಸ್.ಜಿ. ರಿಯಾಲಿಟಿ ಲೇಔಟ್ನಲ್ಲಿ ಒಂದು ಅಪ್ರಕಟಿತ ಹೊಯ್ಸಳರ ಕಾಲದ ಶಿಲಾಶಾಸನ ದೊರೆತಿದ್ದು ಇದು ಯಾರಿಂದ ರಚಿತವಾಯಿತು ಇದರ ಸಾರಾಂಶವೇನು ಎಂಬುದನ್ನು ತಿಳಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮೈಸೂರಿನ ಶಾಸನ ತಜ್ಞ ಡಾ|| ಎಸ್.ನಾಗರಾಜಪ್ಪನವರಿಗೆ ಶಾಸನದ ಫೋಟೋಗಳನ್ನು ಕಳುಹಿಸಿಕೊಟ್ಟು ಅವರಿಂದ ಶಾಸನದ ಅರ್ಥವನ್ನು ಇಲ್ಲಿ ಪ್ರಕಟಿಸಿದ್ದೇವೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ತಿಳಿಸಿದರು. ಅಪೂರ್ಣ ಶಾಸನ ಕ್ರಿ.ಶ. 1343 ರಲ್ಲಿ ಬಲ್ಲಾಳನು ತಿರುವಣ್ಣಾಮಲೈ ಪಟ್ಟಣದಿಂದ ಆಳುತ್ತಿರುವಾಗ, ಅವನ […]