ಆನೆ ದಂತದಿಂದ ತಯಾರಿಸಿದ ಪುರಾತನ ಕಾಲದ ವಸ್ತುಗಳು ಜಪ್ತಿ

ಬೆಂಗಳೂರು, ನ.18- ಬೆಲೆ ಕಟ್ಟಲಾಗದಂತಹ ಆನೆ ದಂತದಿಂದ ಮಾಡಿರುವ ಪುರಾತನ ಕಾಲದ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬಂಧಿಸಿ 7 ಕೆಜಿ 500 ಗ್ರಾಂ ತೂಕದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹರಿಯಾಣ ಮೂಲದ ಹಿಮ್ಮತ್ ಸಿಂಗ್, ಪಂಜಾಬ್‍ನ ಪ್ರವೀಣ್ ಸಾಂಬಿಯಾಲ್, ಮೈಸೂರಿನ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್, ಬೆಂಗಳೂರಿನ ಮೊಹಮ್ಮದ್ ಇಸ್ರಾರ್ ಅಲಿಯಾಸ್ ಬಾಬು ಮತ್ತು ಬೆಂಗಳೂರಿನ ಅಮ್ಜದ್ ಪಾಷ ಬಂಧಿತರು. ನ.14ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ […]