ಜೋಶಿಮಠದಲ್ಲಿ 12 ದಿನಗಳಲ್ಲಿ 5.4ಸೆಂ,ಮೀ ಭೂಮಿ ಮುಳುಗಡೆ

ಚಮೋಲಿ,ಜ.13-ಉತ್ತರಾಖಂಡದ ಜೋಶಿಮಠದಲ್ಲಿ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ನಷ್ಟು ಭೂಮಿ ಮುಳುಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಜೋಶಿಮಠವು ಡಿಸೆಂಬರ್ 27 ಮತ್ತು ಜನವರಿ 8 ರ ನಡುವೆ 5.4 ಸೆಂ.ಮೀ ಮುಳುಗಿರುವುದು ಕಂಡು ಬಂದಿದೆ. ಮಧ್ಯ ಜೋಶಿಮಠದಲ್ಲಿ, ಸೇನಾ ಹೆಲಿಪ್ಯಾಡ್ ಮತ್ತು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತ್ವರಿತ ಸ್ಥಳಾಂತರ ಸಂಭವಿಸಿದೆ. ಜೋಶಿಮಠ-ಔಲಿ ರಸ್ತೆಯ ಬಳಿ 2,180 ಮೀಟರ್ […]

ಆಲಿಘರ್‍ನಲ್ಲೂ ಬಿರುಕು ಬಿಟ್ಟ ಮನೆಗಳು

ನವದೆಹಲಿ,ಜ.11-ಉತ್ತರಾಖಂಡದ ಜೋಶಿಮಠದ ಮಾದರಿಯಲ್ಲೇ ಆಲಿಘರ್‍ನಲ್ಲೂ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲಿಘರ್‍ನ ಕನ್ವರಿಗಂಜ್‍ನಲ್ಲಿರುವ ಐದು ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೋಶಿಮಠದ ಮಾದರಿಯಲ್ಲೇ ನಮ್ಮ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಈ ಕುರಿತಂತೆ ನಾವು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗರ್ಭದಲ್ಲಿ ಆಳವಡಿಸಲಾಗುತ್ತಿರುವ ಪೈಪ್‍ಲೈನ್ ಸೋರಿಕೆಯಿಂದಾಗಿ ಮನೆಗಳು ಬಿರುಕು ಬೀಳುತ್ತಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅನುಮಾನ […]

ಜೋಶಿಮಠ ತೆರವು ಕಾರ್ಯಚರಣೆ ಆರಂಭ

ನವದೆಹಲಿ,ಜ.10- ಉತ್ತರಾಖಂಡ್‍ನ ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಮತ್ತು ತೀವ್ರವಾಗಿ ಹಾನಿಗೀಡಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಜೋಶಿಮಠವನ್ನು ಅಪಾಯ, ಬಫರ್ ಮತ್ತು ಸಂಪೂರ್ಣವಾಗಿ ಸುರಕ್ಷಿತ ಎಂಬ ಮೂರು ವಲಯಗಳನ್ನಾಗಿ ವಿಂಗಡಿಸಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ 678 ಕಟ್ಟಡಗಳು ಬಿರುಕು ಬಿಟ್ಟಿವೆ. ಅವುಗಳಲ್ಲಿ ಹೆಚ್ಚು ಹಾನಿಗೊಳಗಾಗಿರುವ ಕಟ್ಟಡಗಳು ಹಾಗೂ ವಾಲಿರುವ ಮೌಂಟ್ ವ್ಯೂ ಮತ್ತು ಮಲಾರಿ ಇನ್ ಹೋಟೆಲ್‍ಗಳನ್ನು ಸಂಪೂರ್ಣ ತೆರವುಗೊಳಿಸಲಾಗುತ್ತಿದೆ. ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ […]

ಧಾರ್ಮಿಕ ಶ್ರದ್ಧಾಕೇಂದ್ರ ಬದ್ರಿನಾಥ್‍ನ ಜೋಶಿಮಠಕ್ಕೆ ಕಾದಿದೆಯಾ ಅಪಾಯ..?

ಜೋಶಿಮಠ,ಜ.7- ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಉತ್ತರಾಕಾಂಡ್‍ನ ಬದ್ರಿನಾಥ, ಹೇಮಕುಂದ್ ಸಾಹಿಬ್ ಮತ್ತು ಅಂತಾರಾಷ್ಟ್ರೀಯ ಯಾತ್ರಾ ಕೇಂದ್ರ ಅವೌಲಿಗೆ ಹೆಬ್ಬಾಗಿಲಿನಂತಿರುವ ಜೋಶಿಮಠ ಪ್ರಕೃತಿ ವಿಕೋಪದ ಅಂಚಿನಲ್ಲಿದೆ. ಶತಮಾನಗಳ ಹಿಂದೆ ಆದಿಗುರು ಶಂಕರಾಚಾರ್ಯರು ನೆಲೆಸಿದ್ದ ಈ ಸ್ಥಳ ಭೂ ಕುಸಿತದಿಂದ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು ಸಂಪೂರ್ಣ ನಶಿಸಿ ಹೋಗುವ ಆತಂಕದಲ್ಲಿದೆ. ಜೋಶಿಮಠನಲ್ಲಿರುವ ಮನೆಗಳು, ರಸ್ತೆಗಳು, ಮೈದಾನ ಸೇರಿದಂತೆ ಹಲವೆಡೆ ಕ್ರಮೇಣ ಬಿರುಕು ಹೆಚ್ಚಾಗ ತೋಡಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿನಿ, ಈ ಪ್ರದೇಶದಲ್ಲಿ ವಾಸವಿರುವ 600ಕ್ಕೂ ಹೆಚ್ಚು […]