ಭಿಕ್ಷಾಟನೆ ತಡೆಯಲು ಯೋಜನೆ

ಬೆಂಗಳೂರು,ಜು.18- ಎಲ್ಲ ಇಲಾಖೆಗಳ ಸಹಯೋಗದಿಂದ ತಾಯಿ-ಮಗುವಿನ ಭಿಕ್ಷಾಟನೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ವಿಕಾಸಸೌಧದಲ್ಲಿ ನಡೆದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು-ತಾಯಂದಿರನ್ನು ರಕ್ಷಿಸಲು ಮತ್ತು ಭಿಕ್ಷಾಟನೆ ನಿಯಂತ್ರಿಸುವ ಸಂಬಂಧ ನಡೆದ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರಿನಲ್ಲಿ 720 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಮಕ್ಕಳ-ತಾಯಿಂದಿರ ಭಿಕ್ಷಾಟನೆ ತಡೆಯಲು ಬೆಂಗಳೂರಿನಲ್ಲಿ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ 8 ವಿಭಾಗಗಳಲ್ಲಿ […]

ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ವಿತರಿಸಲು ಮುಂದಾದ ಸರ್ಕಾರ

ಬೆಂಗಳೂರು,ಜು.14- ಕರಾವಳಿ ಜಿಲ್ಲಾಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಗಳ ಪ್ರಮುಖ ಆಹಾರಧಾನ್ಯವಾದ ಕುಚಲಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ವಿಧಾನಸೌಧದಲ್ಲಿಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ಕರಾವಳಿ ಜಿಲ್ಲಾÉಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಗಳ ಜನರ ಪ್ರಮುಖ ಆಹಾರ ಧಾನ್ಯ ಕುಚಲಕ್ಕಿ ಆಗಿದ್ದು, ಈ ಭಾಗದ ಜನರಿಗೆ ಕುಚಲಕ್ಕಿ ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು […]

ಹಿಜಾಬ್ ಹಿಂದಿವೆ ಮತಾಂಧ ಶಕ್ತಿಗಳು : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು,ಫೆ.5- ಸಮಾಜ ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯ ಹೊರತು ಬೇರೆಯಲ್ಲ. ಕರಾವಳಿ ಭಾಗದಲ್ಲಿ ಹಿಜಾಬ್‍ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಇದು ಕ್ರಿಯೆಗೆ ಪ್ರತಿಕ್ರಿಯೆ ನಡೆದಿದೆ. ಹಾಗಂತ ಕೇಸರಿ ಶಾಲನ್ನು ಸಮರ್ಥಿಸಿಕೊಳ್ಳುತ್ತೇವೆಎಂದು ಅರ್ಥವಲ್ಲ ಎಂದರು. ನಮ್ಮ ಜಿಲ್ಲೆಯಲ್ಲಿ ಮತಾಂಧ ಗುಂಪನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಕೆಲ ವಿದ್ಯಾರ್ಥಿನಿಯರು ಹಿಜಾಬ್‍ನ್ನೇ ಮುಂದಿಟ್ಟುಕೊಂಡು ವಿವಾದ […]

ವಿಧಾನ ಪರಿಷತ್‍ನ ಸಭಾನಾಯಕ, ಉಪಸಭಾಪತಿ, ಪ್ರತಿಪಕ್ಷದ ನಾಯಕ ನಾಳೆ ನಿವೃತ್ತಿ

ಬೆಂಗಳೂರು, ಜ.4- ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ವಿಧಾನ ಪರಿಷತ್‍ನ 23 ಸದಸ್ಯರು ನಾಳೆ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಮೇಲ್ಮನೆ ಸಭಾನಾಯಕ, ಉಪಸಭಾಪತಿ ಹಾಗೂ ಪ್ರತಿಪಕ್ಷದ ನಾಯಕರು ನಿವೃತ್ತಿ ಹೊಂದಲಿದ್ದಾರೆ. ಈ ಸ್ಥಾನಗಳು ಕೂಡ ನಿವೃತ್ತಿ ನಂತರ ತೆರವಾಗಲಿವೆ. ನಿವೃತ್ತಿಯಿಂದ ತೆರವಾಗುವ 25 ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗ ಈಗಾಗಲೇ ಚುನಾವಣೆ ನಡೆಸಿ ಆಯ್ಕೆಯಾದ ಅಭ್ಯರ್ಥಿಗಳ ಫಲಿತಾಂಶವನ್ನು ಕೂಡ ಪ್ರಕಟಿಸಿದೆ. ಚುನಾಯಿತರಾಗಿರುವ ನೂತನ 25 ಸದಸ್ಯರು ಜ.6ರ ನಂತರ […]