ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಉಕ್ರೇನ್,ಫೆ.2- ಜನವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಮೂವರು ಬಲಿಯಾಗಿದ್ದು, 20ಕ್ಕೂ ಹೆಚ್ಚು ನಾಗರೀಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಪೂರ್ವ ನಗರದ ಕ್ರಾಮಾಟೋಸ್ರ್ಕ್‍ನಲ್ಲಿ ನಡೆದಿದೆ. ಎರಡು ಗಂಟೆಗಳ ಹಿಂದೆ, ರಷ್ಯಾದ ಆಕ್ರಮಣಕಾರರು ನಗರದ ಮಧ್ಯಭಾಗದಲ್ಲಿರುವ ವಸತಿ ಕಟ್ಟಡವನ್ನು ರಾಕೆಟ್‍ನಿಂದ ಹೊಡೆದು ಅದನ್ನು ಸಂಪೂರ್ಣವಾಗಿ ನಾಶಪಡಿಸಿದರು ಎಂದು ಪ್ರಾದೇಶಿಕ ಗವರ್ನರ್ ಪಾವ್ರೋ ಕಿರಿಲೆಂಕೊ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ ಮೂವರು ನಾಗರಿಕರು ಹತರಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ […]