Tuesday, April 21, 2026
Homeಅಂತಾರಾಷ್ಟ್ರೀಯಮತ್ತೆ ಬಾಲ ಬಿಚ್ಚಿದ ಹಿಜ್ಬುಲ್ಲಾ, ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ

ಮತ್ತೆ ಬಾಲ ಬಿಚ್ಚಿದ ಹಿಜ್ಬುಲ್ಲಾ, ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ

Hezbollah launches rocket attack on Israel, Israeli forces ask people to evacuate

ಬೈರೂತ್‌, ಮಾ.2- ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್‌ ಮೇಲೆ ಇರಾನ್‌ ಬೆಂಬಲಿತ ಪಡೆಗಳು ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.ಇರಾನ್‌ ಬೆಂಬಲಿತ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ತಡರಾತ್ರಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.

ಖಮೇನಿ ಅವರ ಪವಿತ್ರ ರಕ್ತಕ್ಕೆ ಪ್ರತೀಕಾರವಾಗಿ, ಲೆಬನಾನ್‌ ಹಾಗೂ ಅಲ್ಲಿನ ಜನರ ರಕ್ಷಣೆಗಾಗಿ, ಹಾಗೆಯೇ ಇಸ್ರೇಲ್‌ನ ಸರಣಿ ದಾಳಿಗಳಿಗೆ ಪ್ರತಿಯಾಗಿ ಕ್ಷಿಪಣಿಗಳ ಸುರಿಮಳೆ ಮತ್ತು ಡೋನ್‌ಗಳ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ತಿಳಿಸಿದೆ.

ಇದಕ್ಕೆ ಇಸ್ರೇಲ್‌ ಕೂಡ ಪ್ರತ್ಯುತ್ತರ ಕೊಟ್ಟಿದೆ. ಲೆಬನಾನ್‌ ರಾಜಧಾನಿ ಬೈರೂತ್‌ ಮೇಲೆ ಪ್ರತಿದಾಳಿ ನಡೆಸಿದೆ. ಬೈರೂತ್‌ನ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿ ಇಸ್ರೇಲ್‌ ಇಂದು ದಾಳಿ ನಡೆಸಿದೆ ಎಂದು ಲೆಬನಾನ್‌ ಮಾಧ್ಯಮಗಳು ವರದಿ ಮಾಡಿವೆ.

ಅದಕ್ಕಾಗಿ ಪೂರ್ವ ಮತ್ತು ದಕ್ಷಿಣ ಲೆಬನಾನ್‌ನ ಸುಮಾರು 50 ಹಳ್ಳಿಗಳ ಜನರನ್ನ ಸ್ಥಳಾಂತರಿಸುವಂತೆ ಇಸ್ರೇಲಿ ಸೇನೆ ಒತ್ತಾಯಿಸಿದೆ. ನಾಗರಿಕರು ತಮ್ಮ ಮನೆಗಳನ್ನ ತೆರವುಗೊಳಿಸಿ ಹಳ್ಳಿಗಳಿಂದ ಕನಿಷ್ಠ 1,000 ಮೀಟರ್‌ ದೂರದಲ್ಲಿರುವ ತೆರೆದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಹೇಳಿದೆ.ಇಸ್ರೇಲ್‌ ದಾಳಿಗೆ ಬೈರೂತ್‌ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲಲ್ಲಿ ಭಾರೀ ಸ್ಫೋಟಗಳು ಕೇಳಿಬಂದಿದ್ದು, ಇದು ದಾಳಿಯ ತೀವ್ರತೆಯನ್ನು ಒತ್ತಿ ಹೇಳುತ್ತಿವೆ.

RELATED ARTICLES

Latest News