Homeರಾಜ್ಯಬೆಂಗಳೂರಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿವಿಧ ಸಂಘಟನೆಗಳಿಂದ ಸಿದ್ಧತೆ

ಬೆಂಗಳೂರಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿವಿಧ ಸಂಘಟನೆಗಳಿಂದ ಸಿದ್ಧತೆ

ಬೆಂಗಳೂರು, ಅ.31- ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ನಾಳೆ ವಿವಿಧ ಸಂಘಟನೆಗಳಿಂದ ಅದ್ದೂರಿ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ವಾಟಾಳ್‌ ನಾಗರಾಜ್‌ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಕನ್ನಡ ಹಬ್ಬ 71 ಕಾರ್ಯಕ್ರಮ ಆಯೋಜಿಸಲಾಗಿದ್ದು,

ಬೆಳಿಗ್ಗೆ 11 ಗಂಟೆಗೆ ಸಿಎಂ ಡಿಕೆಶಿ ಶಿವಕುಮಾರ್‌ ಅವರು ಧ್ವಜಾರೋಹಣ ನೇರವೇರಿಸಲಿದ್ದು, ಸತತ 8 ವರ್ಷಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯಅವರು ರಾಜ್ಯೋತ್ಸವಕ್ಕೆ ಚಾಲನೆ ನೀಡುತ್ತಾ ಬಂದಿದ್ದು, ಮಧ್ಯಾಹ್ನ 2 ಗಂಟೆಗೆ ಭುವನೇಶ್ವರಿಗೆ ತಾಯಿಗೆ ಅವರು ಪೂಜೆ ಸಲ್ಲಿಸಿ ನಗರ ದೇವತೆ ಅಣ್ಣಮ ದೇವಿ ಹಾಗೂ ಭುವನೇಶ್ವರಿಯ ವೈಭವದ ಮೆರವಣಿಗೆಗೆ ಅವರು ಚಾಲನೆ ನೀಡಲಿದ್ದಾರೆ.

ಖ್ಯಾತ ವಕೀಲರಾದ ಪ್ರಮೀಳ ನೇಸರ್ಗಿ, ವಾಟಾಳ್‌ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್‌ ರಾವ್‌ ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತ ಆರ್‌ ಜಗದೀಶ್‌ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

ಕನ್ನಡ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಸಿ. ಮೂರ್ತಿ ಅವರ ನೇತೃತ್ವದಲ್ಲಿ ಕಳೆದ 41 ವರ್ಷಗಳಿಂದ ಅದ್ದೂರಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಿದ್ದು, ನಾಳೆ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳನ್ನು ಸಿಎಂ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಲಿದ್ದಾರೆ. ಸಚಿವ ಯುಟಿ ಖಾದರ್‌, ಶಾಸಕರಾದ ದಿನೇಶ್‌ ಗುಂಡುರಾವ್‌, ಡಾ. ಅಶ್ವತ್ಥ್ ನಾರಾಯಣ, ಹ್ಯಾರಿಸ್‌‍, ಪ್ರಿಯಕೃಷ್ಣ, ರಾಜ್ಯ ಗ್ಯಾರಂಟಿ ಯೋಜನೆ

ಪ್ರಾಧಿಕಾರದ ಅಧ್ಯಕ್ಷ ಎಚ್‌ಎಂ ರೇವಣ್ಣ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ಪಿಎಂ ಕೃಷ್ಣಮೂರ್ತಿ, ಎಚ್‌ಪಿ ದಯಾನಂದ, ಆರ್‌ ಮುನಿರಾಜು, ಸಪ್ತಗಿರಿ ಗೌಡ, ಎಂ, ಪರಮೇಶ್‌, ರಾಘವೇಂದ್ರ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ 11 ಕ್ಕೆ ಧ್ವಜಾರೋಹಣ ನಂತರ ವೇದಿಕೆ ಕಾರ್ಯಕ್ರಮ, ವಿಚಾರ ಸಂಕಿರಣ ಹಾಗೂ ಶಾಲಾ ಮಕ್ಕಳಿಗೆ ನೋಟ್‌ಬುಕ್‌ ವಿತರಣೆ, ಸಾಧಕಿಯರಿಗೆ ಸನಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದೆ.

ಕನ್ನಡ ಸೇನೆ -ಕರ್ನಾಟಕ ವತಿಯಿಂದ ಕನ್ನಡ ಹಬ್ಬವನ್ನು ಹಮಿಕೊಳ್ಳಲಾಗಿದೆ. ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರ್ಗುಡಿ ಅವರ ದಿವ್ಯ ಸಾನಿಧ್ಯದಲ್ಲಿ ಗಾನ ಕೋಗಿಲೆ ಎಸ್‌‍. ಜಾನಕಿ ಹಾಗೂ ಗಾನ ಗಂಧರ್ವ ಎಸ್‌‍ ಪಿ ಬಾಲಸುಬ್ರಮಣ್ಯಂ ವೇದಿಕೆಯಲ್ಲಿ ಅದ್ದೂರಿ ರಾಜ್ಯೋತ್ಸವವನ್ನು ಆಯೋಜಿಸಲಾಗಿದೆ.

ನಾಳೆ ಬೆಳಿಗ್ಗೆ 11.30ಕ್ಕೆ ಮಲ್ಲೇಶ್ವರಂನ ಸರ್ಕಲ್‌ ಮಾರಮ ದೇವಸ್ಥಾನದಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಾ. ರಾಜ್‌ಕುಮಾರ್‌ ರಸ್ತೆಯ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸಭಾಂಗಣದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

RELATED ARTICLES

Latest News