ನಾಳೆ ಚಂದ್ರನ ಹಿಂದೆ ಕಣ್ಮರೆಯಾಗಲಿದೆ ಯುರೇನಸ್ ಗ್ರಹ

ವಾಷಿಂಗ್ಟನ್,ಜ.27- ನಾಳೆ ಬಾಹ್ಯಾಕಾಶದಲ್ಲೊಂದು ಸೋಜಿಗ ನಡೆಯಲಿದೆ. ದೂರದರ್ಶಕದ ಮೂಲಕ ಗೋಚರಿಸುವ ಯುರೇನಸ್ ಗ್ರಹ ನಾಳೆ ಚಂದ್ರನ ಹಿಂದೆ ಕಣ್ಮರೆಯಾಗುವುದೆಂದು ನಾಸಾ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ನಾಳೆ ರಾತ್ರಿ 10.28 ರಿಂದ ಭಾನುವಾರದ ಬೆಳಗಿನ ಜಾವ 3.28ರವರೆಗೆ ನಡೆಯುವ ಈ ಸೋಜಿಗವನ್ನು ಪ್ರಪಂಚದ ಉತ್ತರ ಭಾಗದ ಜನರು ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ವೀಕ್ಷಿಸಬಹುದಾಗಿದೆ. ಅಲಾಸ್ಕಾ, ಕೆನಡಾದ ದೂರದ ಉತ್ತರ, ಗ್ರೀನ್ಲ್ಯಾಂಡ್, ರಷ್ಯಾ ಮತ್ತು ಜಪಾನ್ನ ಪ್ರದೇಶಗಳಲ್ಲಿ ಈ ಚಮತ್ಕಾರ ಗೋಚರಿಸುತ್ತದೆ ಎಂದು ಔಟ್ಲೆಟ್ ವರದಿ ಮಾಡಿದೆ. ಹೆಂಡತಿ […]