Homeಇದೀಗ ಬಂದ ಸುದ್ದಿಸ್ಪೀಕರ್‌, ಸಭಾಪತಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ

ಸ್ಪೀಕರ್‌, ಸಭಾಪತಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ

ಬೆಂಗಳೂರು,ಆ.12- ವಿಧಾನಸಭೆಯ ಸಭಾಧ್ಯಕ್ಷ ಸ್ಥಾನ ಹಾಗೂ ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಲಿದೆ.ಈ ಎರಡೂ ಸ್ಥಾನಗಳಿಗೆ ಸೂಚನಾ ಪತ್ರ ಸಲ್ಲಿಸಲು ನಾಳೆ ಮಧ್ಯಾಹ್ನ 12 ಗಂಟೆ ಕಡೆಯ ಅವಧಿಯಾಗಿದೆ. ಯು.ಟಿ.ಖಾದರ್‌ ಅವರ ರಾಜೀನಾಮೆಯಿಂದ ವಿಧಾನಸಭಾಧ್ಯಕ್ಷ ಸ್ಥಾನ ತೆರವಾಗಿದೆ. ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ವಿಧಾನಪರಿಷತ್‌ನ ಸಭಾಪತಿ ಸ್ಥಾನ ತೆರವಾಗಿದೆ.

ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವವರ ಹೆಸರನ್ನು ಲಿಖಿತವಾಗಿ ಸೂಚನಾ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿಯವರಿಗೆ ನೀಡಬೇಕಿದೆ. ಈ ಸೂಚನಾ ಪತ್ರವನ್ನು ಮತ್ತೊಬ್ಬ ಶಾಸಕರು ಅನುಮೋದಿಸಬೇಕು ಹಾಗೂ ಸಭಾಧ್ಯಕ್ಷರಾಗುವವರು ಆ ಸ್ಥಾನದ ಕಾರ್ಯ ನಿರ್ವಹಿಸಲು ಸಮತಿ ಸೂಚಿಸುವ ಪತ್ರವನ್ನು ಕೂಡ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕಿದೆ.

ಅದೇ ರೀತಿ ಸಭಾಪತಿಯಾಗಿ ಆಯ್ಕೆಯಾಗುವವರ ಹೆಸರನ್ನು ಲಿಖಿತವಾಗಿ ವಿಧಾನಪರಿಷತ್‌ನ ಕಾರ್ಯದರ್ಶಿಯವರಿಗೆ ಸೂಚಿಸಬೇಕು. ಮತ್ತೊಬ್ಬ ಸದಸ್ಯರು ಅದನ್ನು ಅನುಮೋದಿಸಬೇಕು. ಅಲ್ಲದೆ ಸಭಾಪತಿಯಾಗುವವರು ಆ ಸ್ಥಾನದ ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಿಸುವ ಒಪ್ಪಿಗೆ ಪತ್ರವನ್ನು ಕಾರ್ಯದರ್ಶಿಯವರಿಗೆ ಸಲ್ಲಿಸಬೇಕಿದೆ.

ಈಗಾಗಲೇ ಕಾಂಗ್ರೆಸ್‌‍ ಹೈಕಮಾಂಡ್‌ ಸಭಾಧ್ಯಕ್ಷ ಸ್ಥಾನಕ್ಕೆ ಶಾಸಕ ಜಿ.ಎಸ್‌‍.ಪಾಟೀಲ್‌, ಉಪಸಭಾಧ್ಯಕ್ಷ ಸ್ಥಾನಕ್ಕೆ ಶಾಸಕ ಎ.ಎಸ್‌‍.ಪೊನ್ನಣ್ಣ ಅವರ ಹೆಸರನ್ನು ಅನುಮೋದಿಸಿದೆ.
ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ವಿಧಾನಪರಿಷತ್‌ ಸದಸ್ಯ ಸಲೀಂ ಅಹಮದ್‌ ಹಾಗೂ ಉಪಸಭಾಪತಿ ಸ್ಥಾನಕ್ಕೆ ಮೇಲನೆ ಸದಸ್ಯೆ ಉಮಾಶ್ರೀ ಅವರನ್ನು ಕಾಂಗ್ರೆಸ್‌‍ ಹೈಕಮಾಂಡ್‌ ಈಗಾಗಲೇ ಅನುಮೋದಿಸಿದೆ.

RELATED ARTICLES
spot_img

Latest News