ಸಿಬಿಐ ವಿಚಾರಣೆಗೆ ಗೈರಾದ ತೇಜಸ್ವಿಯಾದವ್

ನವದೆಹಲಿ,ಮಾ.11-ಸಿಬಿಐ ಎದುರು ವಿಚಾರಣೆಗೆ ಹಾಜರಾಗಲು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತೆ ನಿರಾಕರಿಸಿದ್ದಾರೆ. ಜಮೀನು ಮತ್ತು ಉದ್ಯೋಗಕ್ಕಾಗಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟೀಸ್ ನೀಡಿತ್ತು ಆದರೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಇಂದು ವಿಚಾರಣೆಗೆ ಹಾಜರಾಗಿಲ್ಲ. ಈ ಹಿಂದೆ ಮಾರ್ಚ್ 4 ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಆದರೆ ಅವರು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ, ನಂತರ ಇಂದಿಗೆ ಹೊಸ ದಿನಾಂಕ ನಿಗದಿಪಡಿಸಿದ್ದರು ಅವರು ವಿಚಾರಣೆಗೆ ಬಂದಿಲ್ಲ. […]

ವಿಚಾರಣೆಗೆ ಕಾಲವಕಾಶ ಕೋರಿದ ಮನೀಷ್ ಸಿಸೋಡಿಯಾ

ನವದೆಹಲಿ,ಫೆ.19 – ನಗರಾಡಳಿತದ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಕಾಲವಕಾಶ ನೀಡುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಿಬಿಐಗೆ ಮನವಿ ಮಾಡಿದ್ದಾರೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ 3 ತಿಂಗಳ ಹಿಂದೆ ಚಾರ್ಜ್‍ಶೀಟ್ ಸಲ್ಲಿಸಿತ್ತು. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಆದರೆ ಎರಡು ವಾರಗಳ ಬಳಿಕ ಹಾಜರಾಗಲು ಅವಕಾಶ ನೀಡುವಂತೆ ಸಿಸೋಡಿಯಾ ಸಿಬಿಐಗೆ ಮನವಿ ಮಾಡಿದ್ದಾರೆ. ಕೋಟಿ […]

ಬಿ.ಎಲ್.ಸಂತೋಷ್‌ಗೆ ಬಂಧನದ ಭೀತಿ

ನವದೆಹಲಿ,ನ.19- ತೆಲಂಗಾಣದ ಆಡಳಿತರೂಢ ಟಿಆರ್‍ಎಸ್ ಶಾಸಕರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ವಿಶೇಷ ತನಿಖಾ ತಂಡ ಸಮನ್ಸ್ ಜಾರಿ ಮಾಡಿದೆ. ಒಂದು ವೇಳೆ 21ರೊಳಗೆ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುತ್ತದೆ ಎಂದು ಸಮನ್ಸ್‍ನಲ್ಲಿ ಎಸ್‍ಐಟಿ ಬಿ.ಎಲ್.ಸಂತೋಷ್‍ಗೆ ಎಚ್ಚರಿಸಿದೆ. ಶಾಸಕರ ಅಪಹರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಜೊತೆಗೆ ಎಸ್‍ಐಟಿ ತನಿಖೆಯನ್ನು ನ್ಯಾಯಾೀಧಿಶರ ನೇತೃತ್ವದಲ್ಲೆ ತನಿಖೆ ನಡೆಸಬೇಕೆಂದು ಮಾಡಿಕೊಂಡ ಮನವಿ ಅರ್ಜಿಯನ್ನು […]

ಕಾಂಗ್ರೆಸ್ ಶಾಸಕರಿಂದ ನಗದು ವಶ ಪ್ರಕರಣ : ಅಸ್ಸಾಂ ಉದ್ಯಮಿಗೆ ಸಮನ್ಸ್

ಗುವಾಹಟಿ, ಆ.8 – ಜಾರ್ಖಂಡ್ ಕಾಂಗ್ರೇಸ್ ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಅಸ್ಸಾಂ ಮೂಲದ ಉದ್ಯಮಿ ಅಶೋಕ್ ಕುಮಾರ್ ಧನುಕಾ ಅವರಿಗೆ ಸಮನ್ಸ ನೀಡಿದ್ದಾರೆ. ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಗುವಾಹಟಿಯಲ್ಲಿರುವ ಧನುಕಾ ಅವರ ನಿವಾಸದ ಗೇಟ್‍ಗೆ ನೋಟಿಸ್ ಅಂಟಿಸಿ ಕೋಲ್ಕತ್ತಾದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ. ದೂರವಾಣಿ ಮೂಲಕ ಪದೇ ಪದೇ ಪ್ರಯತ್ನಿಸಿದರೂ ಧನುಕಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಆದ ಕಾರಣ ನೋಟೀಸ್ ನೀಡಿ ವಿಚಾರಣೆಗೆ […]