Friday, November 22, 2024
Homeರಾಷ್ಟ್ರೀಯ | Nationalಪೊಲೀಸ್‌‍ ಪ್ರಧಾನ ಕಚೇರಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಕಳುಹಿಸಿದ್ದ ಬಾಲಕನ ಬಂಧನ

ಪೊಲೀಸ್‌‍ ಪ್ರಧಾನ ಕಚೇರಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಕಳುಹಿಸಿದ್ದ ಬಾಲಕನ ಬಂಧನ

ನವದೆಹಲಿ, ಮೇ 3- ದೆಹಲಿಯ ನಂಗ್ಲೋಯ್‌ ಪ್ರದೇಶದಲ್ಲಿ ಬಾಂಬ್‌ ಇಡಲಾಗಿದೆ ಎಂದು ದೆಹಲಿ ಪೊಲೀಸ್‌‍ ಪ್ರಧಾನ ಕಚೇರಿಗೆ ಇಮೇಲ್‌ ಕಳುಹಿಸಿದ್ದ ಆರೋಪದ ಮೇಲೆ ಬಾಲಕನೊಬ್ಬ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಕೂಲಂಕುಷವಾಗಿ ತಪಾಸಣೆ ನಡೆಸಿದ ಬಳಿಕ ಬಾಲಕನ ಕೃತ್ಯ ಎಂದು ತಿಳಿದುಬಂದಿದೆ. ಮಧ್ಯ ದೆಹಲಿಯ ಜೈ ಸಿಂಗ್‌ ರಸ್ತೆಯಲ್ಲಿರುವ ದೆಹಲಿ ಪೊಲೀಸ್‌‍ ಪ್ರಧಾನ ಕಛೇರಿಯು ನಂಗ್ಲೋಯಿಯಿಂದ ಸುಮಾರು 18 ಕಿಲೋಮೀಟರ್‌ ದೂರದಲ್ಲಿದೆ.ಇಮೇಲ್‌ ಕಳುಹಿಸುವವರು ಅಪ್ರಾಪ್ತ ಬಾಲಕನಾಗಿದ್ದು ಆದ್ದರಿಂದ ಆತನ ವಿವರಗಳನ್ನು ಹಂಚಿಕೊಳ್ಳಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಕಿಡಿಗೇಡಿತನದ ಕೃತ್ಯವೆಂದು ಬಾಲಾಪರಾಧಿ, ಸರಿಯಾದ ಕೌನ್ಸೆಲಿಂಗ್‌ ನಂತರ ಪೋಷಕರಿಗೆ ಹಸ್ತಾಂತರಿಸಲಾಗುವುದು ತಿಳಿಸಿದ್ದಾರೆ. ಬಾಲಕ ಹೀಗೆ ಮಾಡಲು ಕಾರಣವೇನು ಎಮಬುದು ನಿಗೂಢವಾಗಿದೆ ಆದರೂ ಪೋಷಕರ ನಿರ್ಲಕ್ಷ ಕಾಣುತ್ತಿದೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ.

RELATED ARTICLES

Latest News