ಸಸಾರಾಮ್, ಫೆ 16 (ಪಿಟಿಐ) ಇಂದಿನಿಂದ ಬಿಹಾರದ ಸಸಾರಾಮ್ ಜಿಲ್ಲೆಯಿಂದ ಪುನರಾರಂಭಗೊಂಡಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಸಂಸದರಾಗಿರುವ ಗಾಂಧಿ ಅವರು ಇಂದು ಬೆಳಗ್ಗೆ ಪಕ್ಷದ ಜಿಲ್ಲೆ ಕಚೇರಿಯಿಂದ ತಮ್ಮ ಯಾತ್ರೆಯನ್ನು ಆರಂಭಿಸಿದ್ದು, ಸಂಜೆ ಕೈಮೂರ್ ಜಿಲ್ಲೆಯ ಮೊಹಾನಿಯಾ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ನಿಧಾನವಾಗಿ ಚಲಿಸುತ್ತಿದ್ದ ಸ್ಪೋಟ್ರ್ಸ್ ಯುಟಿಲಿಟಿ ವಾಹನದ ಛಾವಣಿಯ ಮೇಲೆ ಯಾದವ್ ಮತ್ತು ಗಾಂಧಿ ಕುಳಿತಿರುವುದು ಕಂಡುಬಂದಿತು ಮತ್ತು ಅವರು ಪಟ್ಟಣದ ಮುಖ್ಯ ರಸ್ತೆಯ ಉದ್ದಕ್ಕೂ ನೆರೆದಿದ್ದ ಉತ್ಸಾಹಭರಿತ ಜನರತ್ತ ಕೈ ಬೀಸಿದರು. ಸ್ಥಳೀಯರು ರಸ್ತೆಯ ಇಕ್ಕೆಲಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು.
ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಪ್ರತಿಭಟನಾನಿರತ ರೈತರ ಬೆಂಬಲಕ್ಕೆ ನಿಂತ ಗಾಂಧಿ, ಸಾಗುವಳಿದಾರರನ್ನು ದೇಶದ ಗಡಿಯಲ್ಲಿ ಹೋರಾಡುವ ಸೈನಿಕರಿಗೆ ಹೋಲಿಸಿದರು.ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸಿದರು.
ಪಾಕಿಸ್ತಾನಿ ಕ್ವಾಡ್‌ಕಾಪ್ಟರ್‌ಗಳ ಮೇಲೆ ಬಿಎಸ್ಎಫ್ ಗುಂಡಿನ ದಾಳಿ
ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯು 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೇಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.