ಬೆಂಗಳೂರು, ಜ.4- ದೇವಾಲಯಗಳ ಗರ್ಭಗುಡಿಗಳು ಒಂದು ಸಮುದಾಯಕ್ಕೆ ಸೀಮಿತ ಎಂಬುದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಅಸಮಧಾನವನ್ನು ಹೊರ ಹಾಕುವ ಮೂಲಕ ಕಾಂಗ್ರೆಸ್ ಪಕ್ಷ ಬಹುಸಂಖ್ಯಾತರ ಒಲೈಕೆಗೆ ಮುಂದಾಗಿದೆ.
ಚಿತ್ರದುರ್ಗದ ಬಾಗೂರಿನ ದೇವಸ್ಥಾನದಲ್ಲಿ ಕನಕಗುರು ಪೀಠದ ಶ್ರೀಗಳ ಗರ್ಭಗುಡಿ ಪ್ರವೇಶಕ್ಕೆ ಅಡ್ಡಿ ಪಡಿಸಿದ ಪ್ರಕರಣವನ್ನು ಆಧಾರವನ್ನಾಗಿಟ್ಟು ಕೊಂಡು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ದೇವಸ್ಥಾನಗಳು ಎಲ್ಲರಿಗೂ ಸೇರಿವೆ, ಎಲ್ಲರೂ ಅಲ್ಲಿ ಸಮಾನರು ಎಂದಿದೆ.
ನಾರಾಯಣಗುರುಗಳು, ಬಸವಣ್ಣ, ಕನಕದಾಸರಂತಹ ಮಹಾನ್ ಸಮಾಜ ಸುಧಾರಕರು, ದಾರ್ಶನಿಕರನ್ನು ಪಡೆದ ನಾಡು ಕರ್ನಾಟಕ. ಅಸ್ಪಶ್ಯತೆಯ ವಿರುದ್ಧ ಸಮಾನತೆಯ ತತ್ವವನ್ನು ಸ್ಥಾಪಿಸಲು ಕರ್ನಾಟಕ ಪ್ರಖರ ಚಳವಳಿ ಕಟ್ಟಿದೆ. ಬಸವಣ್ಣರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ನಮ್ಮ ಸರ್ಕಾರಕ್ಕೆ ಬಸವಣ್ಣನ ಆಶಯಗಳೇ ಆದರ್ಶ ಎಂದಿದ್ದಾರೆ.
ವೈಫಲ್ಯಗಳನ್ನು ಮರೆಮಾಚಲು ಕೇಂದ್ರ ರುದ್ಧ ಗೂಬೆ ಕೂರಿಸುವ ಪ್ರಯತ್ನ : ಬಿಜೆಪಿ ವಾಗ್ದಾಳಿ
ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮಿಗಳಿಗೆ ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಾಲಯದ ಒಳಾವಾರಣಕ್ಕೆ ಪ್ರವೇಶಿಸದಂತೆ ತಡೆದಿರುವುದು ಹಾಗೂ ಸ್ವಾಮಿಗಳು ಬಂದಿದ್ದಾಕ್ಕಾಗಿ ದೇವಾಲಯವನ್ನು ಸ್ವಚ್ಛಗೊಳಿಸಿರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನಾವು ಮನುಸ್ಮತಿಯ ಕಾಲದಲ್ಲಿಲ್ಲ, ಸಂವಿಧಾನದ ಕಾಲದಲ್ಲಿದ್ದೇವೆ. ಇದನ್ನು ಸಹಿಸಿದರೆ ಬಸವಣ್ಣ, ನಾರಾಯಣಗುರು, ಅಂಬೇಡ್ಕರ್ ರಂತಹ ಮಹನೀಯರಿಗೆ ಅವಮಾನಿಸಿದಂತೆಯೇ ಸರಿ ಎಂದು ಕಾಂಗ್ರೆಸ್ ಹೇಳಿದೆ.
ಕೇವಲ ಒಂದು ಸಮುದಾಯಕ್ಕೆ ಮಾತ್ರ ಗರ್ಭಗುಡಿಯ ಪ್ರವೇಶಕ್ಕೆ ಅವಕಾಶವಿದೆ ಎನ್ನುವ ಸಂಗತಿ ಶ್ರೀಗಳಿಂದಲೂ ತಿಳಿದುಬಂದಿದೆ, ಅ ದೇವಾಲಯದ ಅರ್ಚಕರೂ ತಿಳಿಸಿದ್ದಾರೆ, ಇದನ್ನು ಸಹಿಸಲು ಸಾಧ್ಯವಿಲ್ಲ,
ದೇವರ ಮುಂದೆ ಸರ್ವರೂ ಸಮಾನರು. ಕೇವಲ ಒಂದು ಸಮುದಾಯಕ್ಕೆ ಮಾತ್ರ ದೇವರು ಮೀಸಲಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಘಟನೆಯ ಕುರಿತು ಸಚಿವ ರಾಮಲಿಂಗಾರೆಡ್ಡಿಯವರು ವರದಿ ಕೇಳಿದ್ದಾರೆ, ವರದಿ ಬಂದನಂತರ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟ ಪಡಿಸಿದೆ.