Saturday, February 24, 2024
Homeರಾಷ್ಟ್ರೀಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-02-2024)

ನಿತ್ಯ ನೀತಿ : ಒಂಟಿಯಾಗಿರುವಾಗ ಯೋಚನೆಗಳ ಬಗ್ಗೆ ಹಿಡಿತವಿರಬೇಕು. ಎಲ್ಲರ ಜತೆಯಲ್ಲಿರುವಾಗ ನಾಲಿಗೆ ಮೇಲೆ ಹಿಡಿತವಿರಬೇಕು.

ಪಂಚಾಂಗ ಸೋಮವಾರ 05-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಅನುರಾಧಾ / ಯೋಗ: ಧ್ರುವ | ಕರಣ: ಭವ

ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.22
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಆತ್ಮೀಯರಿಂದ ಸಹಾಯ ಸಿಗಲಿದೆ. ಕುಟುಂಬದ ಕಡೆ ಗಮನ ಹರಿಸಿ.
ವೃಷಭ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.
ಮಿಥುನ: ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ.

ಕಟಕ: ಆಸ್ತಿ, ಅಪಾರ್ಟ್‍ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ಸಿಂಹ: ಅಂದುಕೊಂಡ ಕೆಲಸಗಳು ಅಡೆತಡೆಗಳಿಲ್ಲದೆ ನೆರವೇರಲಿವೆ.
ಕನ್ಯಾ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.

ತುಲಾ: ವ್ಯಾಪಾರ- ವ್ಯವಹಾರ ದಲ್ಲಿ ಹಿನ್ನಡೆ ಯಾಗಿ ಮಾನಸಿಕವಾಗಿ ಅಸ್ಥಿರತೆ ಕಾಡಲಿದೆ.
ವೃಶ್ಚಿಕ: ನಿಮ್ಮ ಆಸೆಗಳು ಈಡೇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಧನುಸ್ಸು: ವೃತ್ತಿಪರರಿಗೆ ದಿನವೂ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ.

ಮಕರ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನು ಕೂಲವಾಗಲಿದೆ. ಮಿತ್ರರಿಂದ ಸಹಾಯ ಸಿಗಲಿದೆ.
ಕುಂಭ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸುವುದು ಬಹಳ ಕಷ್ಟದಾಯಕ. ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ.
ಮೀನ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.

RELATED ARTICLES

Latest News