Friday, May 3, 2024
Homeರಾಷ್ಟ್ರೀಯಇಂದಿನಿಂದ ನ್ಯಾಯ ಯಾತ್ರೆ ಪುನರಾರಂಭ

ಇಂದಿನಿಂದ ನ್ಯಾಯ ಯಾತ್ರೆ ಪುನರಾರಂಭ

ರಾಮಗಢ, ಫೆ.5 (ಪಿಟಿಐ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜಾರ್ಖಂಡ್‍ನ ರಾಮಗಢ ಜಿಲ್ಲೆಯಿಂದ ರಾಜ್ಯದಲ್ಲಿ ಇಂದಿನಿಂದ ಪುನರಾರಂಭಗೊಂಡಿದೆ. ಜಿಲ್ಲೆಯ ಸಿದ್ದು-ಕಾನ್ಹು ಮೈದಾನದಲ್ಲಿ ರಾತ್ರಿ ವಿರಾಮದ ನಂತರ ಇಂದು ಬೆಳಗ್ಗೆ ಮಹಾತ್ಮ ಗಾಂಧಿ ಚೌಕ್‍ನಿಂದ ಯಾತ್ರೆ ಪುನರಾರಂಭಗೊಂಡು ಚುಟುಪಾಲು ಕಣಿವೆಗೆ ತೆರಳಿದ ರಾಹುಲ್ ಅವರು ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಸಹೀದ್ ಶೇಖ್ ಖಾರಿ ಮತ್ತು ಟಿಕೈತ್ ಉಮಾರೋ ಸಿಂಗ್ , ರಾಜ್ಯ ಕಾಂಗ್ರೆಸ್ ವಕ್ತಾರ ರಾಜೀವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಂಚಿ ಜಿಲ್ಲೆಯ ಇರ್ಬಾ ತಲುಪಿದ ನಂತರ ಇಂದಿರಾಗಾಂಧಿ ಕೈಮಗ್ಗ ಪ್ರಕ್ರಿಯೆ ಮೈದಾನದಲ್ಲಿ ನೇಕಾರರೊಂದಿಗೆ ಸಂವಾದ ನಡೆಸಿದರು. ಭೋಜನ ವಿರಾಮದ ನಂತರ ಯಾತ್ರೆಯು ರಾಂಚಿಯ ಶಹೀದ್ ಮೈದಾನವನ್ನು ತಲುಪಿದ ನಂತರ ಅವರು ಅಲ್ಲಿ ರ್ಯಾಲಿ ನಡೆಸಲಾಗುವುದು.

ಗರ್ಭಗುಡಿಗಳು ಒಂದು ಸಮುದಾಯಕ್ಕೆ ಸೀಮಿತ ಎಂಬುದನ್ನು ಒಪ್ಪಿಕೊಳ್ಳಲಾಗುವುದಿಲ್ಲ: ಕಾಂಗ್ರೆಸ್

ಜಲ್-ಜಂಗಲ್-ಜಮಿನ್ (ನೀರು, ಅರಣ್ಯ ಮತ್ತು ಭೂ ಸಂಪನ್ಮೂಲಗಳು) ಮೇಲಿನ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಪಕ್ಷವು ನಿಂತಿದೆ ಎಂದು ಗಾಂಧಿ ಹೇಳಿದ್ದರು. ಜೆಎಂಎಂ ನೇತೃತ್ವದ ಮೈತ್ರಿ ಸರ್ಕಾರ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ.

ಖುಂಟಿ ಜಿಲ್ಲೆಯಲ್ಲಿ ರಾಹುಲ್‍ಗಾಂಧಿಯವರ ರಾತ್ರಿ ವಿರಾಮವನ್ನು ನಿಗದಿಪಡಿಸಲಾಗಿದೆ. ಎರಡು ಹಂತಗಳಲ್ಲಿ ಎಂಟು ದಿನಗಳ ಕಾಲ ರಾಜ್ಯದ 13 ಜಿಲ್ಲೆಗಳಲ್ಲಿ 804 ಕಿ.ಮೀ ಯಾತ್ರೆ ಸಂಚರಿಸಲಿದೆ. ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯು 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

RELATED ARTICLES

Latest News