Friday, May 3, 2024
Homeಅಂತಾರಾಷ್ಟ್ರೀಯಚೀನಾದಲ್ಲಿನ ಅಮೆರಿಕ ಕಂಪನಿಗಳಿಗೆ ಶುರುವಾಯ್ತು ಚಿಂತೆ

ಚೀನಾದಲ್ಲಿನ ಅಮೆರಿಕ ಕಂಪನಿಗಳಿಗೆ ಶುರುವಾಯ್ತು ಚಿಂತೆ

ಬೀಜಿಂಗ್, ಏ 23- ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆಯು ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕನ್ ಕಂಪನಿಗಳಿಗೆ ಪ್ರಮುಖ ಚಿಂತೆಯಾಗಿದೆ ಎಂದು ಇಲ್ಲಿನ ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಕಳವಳ ವ್ಯಕ್ತಪಡಿಸಿದೆ.

ವರದಿಯ ಪ್ರಕಾರ ಅಸಮಂಜಸ ಮತ್ತು ಅಸ್ಪಷ್ಟ ನೀತಿಗಳಿಂದ ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು ಮತ್ತು ಡೇಟಾ ಭದ್ರತೆ ಸಮಸ್ಯೆಗಳು ಅಮೆರಿಕಾ ಕಂಪನಿಗಳು ಚೀನಾದಲ್ಲಿ ಕಾರ್ಯನಿರ್ವಹಿಸುವುದು ಪ್ರಮುಖ ಚಿಂತೆಯಾಗಿದೆ ಎಂದು ಹೇಳಿದೆ. ಬೀಜಿಂಗ್ ವಿದೇಶಿ ವ್ಯವಹಾರಗಳನ್ನು ಸ್ವಾಗತಿಸುತ್ತದೆ ಎಂದು ಚೀನಾದ ನಾಯಕರ ಹೇಳಿಕೆಗಳ ಹೊರತಾಗಿಯೂ, ಅನೇಕರು ಇನ್ನೂ ಮುಕ್ತ ಸ್ಪರ್ಧೆಯಿಂದ ಅಡ್ಡಿ ಅನುಭವುಸುತ್ತಿದ್ದಾರೆ.

ಚೀನಾ ಸರ್ಕಾರವು ವಿದೇಶಿ ನೇರ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದೆ, ಆದರೆ ನಮ್ಮ ಅನೇಕ ಸದಸ್ಯರು ಹೂಡಿಕೆ ಮತ್ತು ಕಾರ್ಯಾಚರಣೆಗಳಿಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ, ಅವುಗಳ ವಿರುದ್ಧ ತಾರತಮ್ಯ ನೀತಿಗಳು ಮತ್ತು ವಿದೇಶಿಯರ ಅನುಮಾನವನ್ನು ಉಂಟುಮಾಡುವ ಘಟನೆಗಳು ನಡೆಯುತ್ತಿದೆ.

ಮಂಬರುವ ನವೆಂಬರ್‍ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಭವಿಷ್ಯದ ವ್ಯಾಪಾರ ವಾತಾವರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಇತ್ತೀಚೆಗೆ, ಅಮರಿಕ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಬೀಜಿಂಗ್‍ಗೆ ಭೇಟಿ ನೀಡಿದ ವೇಳೆ ಚೀನಾದ ಉದ್ಯಮಗಳಲ್ಲಿ ಮಿತಿಮೀರಿದ ಸಾಮಥ್ರ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ .

ವಿದ್ಯುತ್ ವಾಹನಗಳು, ಉಕ್ಕಿನ ತಯಾರಿಕೆ ಮತ್ತು ಸೌರ ಫಲಕಗಳ ವಲಯದಲ್ಲಿ ಅಮೆರಿಕ ಮತ್ತು ಇತರ ವಿದೇಶಿ ತಯಾರಕರನ್ನು ಹೊರಹಾಕಬಹುದು ಎಂದು ಕಳವಳ ವ್ಯಕ್ತಪಡಿಸಿದರು.ಇಬ್ಬರ ನಡುವಿನ ಉನ್ನತ ಮಟ್ಟದ ಸಭೆ ,ಮಾಹಿತಿ ವಿನಿಮಯ ಮತ್ತು ಸಂವಹನವನ್ನು ಪ್ರಮುಖ ಆದ್ಯತೆಯಾಗಿ ನಾವು ನೋಡುತ್ತಿದ್ದೇವೆ ಎಂದು ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೇರಿಕನ್ ಕಂಪನಿಗಳು ಹೇಳಿವೆ

RELATED ARTICLES

Latest News