Thursday, December 7, 2023
Homeಆರೋಗ್ಯ / ಜೀವನಶೈಲಿಸಾವಯವ ಕೃಷಿಯಾಯ್ತು ಈಗ ಅಡುಗೆಗೂ ಸಾವಯವ

ಸಾವಯವ ಕೃಷಿಯಾಯ್ತು ಈಗ ಅಡುಗೆಗೂ ಸಾವಯವ

ಲಕ್ನೋ, ನ.5-ಇಲ್ಲಿಂದ ಸುಮಾರು 128 ಕಿಮೀ ದೂರದಲ್ಲಿರುವ ಬಹ್ರೈಚ್‍ನಲ್ಲಿರುವ ಥಾರು ಬುಡಕಟ್ಟು ಜನಾಂಗಕ್ಕೆ ಸೇರಿದ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ತಮ್ಮ ಕುಟುಂಬದ ಪೌಷ್ಟಿಕಾಂಶದ ಅಗತ್ಯವನ್ನರಿತು ಸಾವಯವ ಕೃಷಿ ಮತ್ತು ಅಡುಗೆಗೆ ಮುಂದಾಗಿದ್ದಾರೆ.
ಪೋಷ್ಟಿಕಾಂಶವಿಲ್ಲದೆ ದುರ್ಬಲಗೊಂಡಿದ್ದ ಮಹಿಳೆಯರ ಕುಟುಂಬದಲ್ಲಿ ಅತ್ಯಂತ ಕಡಿಮೆ ಪೌಷ್ಠಿಕಾಂಶದ ಮಟ್ಟವನ್ನು ಸಮೀಕ್ಷೆಯು ಸೂಚಿಸಿದ ನಂತರ, ನಾಲ್ಕು ತಾರು ಗ್ರಾಮಗಳು ಸೇರಿದಂತೆ ಆರು ಗ್ರಾಮಗಳಲ್ಲಿ 35 ಸ್ವ-ಸಹಾಯ ಗುಂಪುಗಳ ಸದಸ್ಯರಾಗಿರುವ ಮಹಿಳೆಯರು ಪೋಷ್ಟಿಕಾಂಶಕ್ಕಾಗಿ ಸಾವಯವ ಕೃಷಿ ಮಾಡಲು ಸ್ವತಃ ಮುಂದಾಗಿದ್ದಾರೆ.

ಸಾಂಕ್ರಾಮಿಕ ರೋಗ ಕೋವಿಡ್‍ನಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರ ಕುಟುಂಬಗಳ ಪೌಷ್ಟಿಕಾಂಶದ ಮಟ್ಟವು ತುಂಬಾ ಕಡಿಮೆಯಾಗಿದೆ ಮತ್ತು ಅವರಿಗೆ ಏನಾದರೂ ಮಾಡಬೇಕಾಗಿದೆ ಎಂದು ಉಲ್ಲೇಖಿಸಲಾಗಿತ್ತು.

ಉತ್ತಪ್ರದೇಶದ ಥಾರು ಬುಡಕಟ್ಟು ಮಹಿಳೆಯರು ಕುಟುಂಬಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸಾವಯವ ಅಡಿಗೆ ತೋಟಕ್ಕೆ ತಿರುಗಿದ್ದಾರೆ. ಅವರಿಗೆ ತರಕಾರಿಗಳ ಮೂಲಕ ಪೌಷ್ಟಿಕಾಂಶದ ಆಹಾರವನ್ನು ಒದಗಿಸುವ ಆಲೋಚನೆಯು ಈಗ ಅವರ ಅಡುಗೆ ತೋಟಗಳಲ್ಲಿ ಬೇರೂರಿದೆ ಎಂದು ವಿಶ್ವ ವನ್ಯಜೀವಿ ನಿ-ಭಾರತದ ಹಿರಿಯ ಯೋಜನಾಕಾರಿ ದಬೀರ್ ಹಸನ್ ತಿಳಿಸಿದ್ದಾರೆ.

ಪೌಷ್ಠಿಕಾಂಶದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಮಹಿಳೆಯರೊಂದಿಗೆ ಪದೇ ಪದೇ ಓರಿಯಂಟೇಶನ್ ಮಾಡಲಾಯಿತು. 75 ಜನರೊಂದಿಗೆ ಪ್ರಾರಂಭಿಸಿ ಈಗ ಎರಡು ಋತುಗಳ ನಂತರ, ಈ ಮಹಿಳೆಯರು ಸಹ ಯೋಜನೆಯ ವೆಚ್ಚದ 25 ಪ್ರತಿಶತಕ್ಕೆ ಕೊಡುಗೆ ನೀಡಲು ಪ್ರಾರಂಭಿಸಿದ್ದಾರೆ.

ಇದಕ್ಕೆ ಮೊದಲು ಡಬ್ಲ್ಯುಡಬ್ಲ್ಯುಎಫ್ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತಿತ್ತು, ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಸಿದ ಕ್ಷೇತ್ರಗಳಲ್ಲಿ 60ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಬ್ಲ್ಯುಡಬ್ಲ್ಯುಎಫ್ ಹಸನ್ ತಿಳಿಸಿದ್ದಾರೆ.
ಈ ಮಹಿಳೆಯರ ಆರೋಗ್ಯದ ಮೇಲೆ ಈ ಯೋಜನೆಯ ಪ್ರಭಾವವನ್ನು ಪರಿಶೀಲಿಸಲು, ಉತ್ತರ ಪ್ರದೇಶ ಆರೋಗ್ಯ ಇಲಾಖೆಯು ಅವರ ಪೌಷ್ಟಿಕಾಂಶದ ಅಗತ್ಯತೆಗೆ ಸಂಬಂಸಿದ ಇತ್ತೀಚಿನ ಡೇಟಾವನ್ನು ಸಂಗ್ರಹಿಸಲು ಮತ್ತು ಅದರ ಫಲಿತಾಂಶದೊಂದಿಗೆ ಹೋಲಿಸಲು ಮನೆ-ಮನೆಗೆ ಸಮೀಕ್ಷೆಯನ್ನು ನಡೆಸುವಲ್ಲಿ ತೊಡಗಿಸಿಕೊಂಡಿದೆ.

ಎಎನ್‍ಎಂ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮಟ್ಟದ ಆರೋಗ್ಯ ಇಲಾಖೆ ಕಾರ್ಯಕರ್ತರ ತರಬೇತಿಯನ್ನು ಇತ್ತೀಚೆಗೆ ನಡೆಸಲಾಗಿದ್ದು, ಈ ಮಹಿಳೆಯರು ಮತ್ತು ಅವರ ಕುಟುಂಬದ ಸದಸ್ಯರ ಪೌಷ್ಟಿಕಾಂಶದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಲಾಯಿತು, ಇದು ಮಾರ್ಗದರ್ಶನಕ್ಕೂ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಫಕೀರಪುರಿ ಗ್ರಾಮದ ತಾರುವಿನ ಮೀರಾದೇವಿ ಅವರು ಮನೆ ಸುತ್ತಮುತ್ತ ಪಾಲಕ್, ಮೆಂತ್ಯ, ಹೂಕೋಸು, ಬಟಾಣಿ, ಕೊತ್ತಂಬರಿ, ಮೂಲಂಗಿ, ಕ್ಯಾರೆಟ್, ಟರ್ನಿಪ್ ಮುಂತಾದ ತರಕಾರಿಗಳನ್ನು ಬೆಳೆದು ಇಳುವರಿಯನ್ನು ಪಡೆದಿದ್ದಾರೆ.

ಫಕೀರ್ಪುರಿಯ ಸುಜೆರಾಣಿ ಎಂಬ ಮತ್ತೊಬ್ಬ ಮಹಿಳೆ ತಜ್ಞರ ಮಾರ್ಗದರ್ಶನದೊಂದಿಗೆ ಸಾವಯವ ಕೃಷಿಯಿಂದ ಪೋಷ್ಟಿಕಾಂಶಯುಕ್ತ ಅಡುಗೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ನಮಗೆ ಹೆಚ್ಚಿನ ಸಹಾಯ ಸಿಕ್ಕರೆ, ನಾವು ಕಷ್ಟಪಟ್ಟು ದುಡಿದು ಹೆಚ್ಚು ತರಕಾರಿಗಳನ್ನು ಬೆಳೆಯಲು ಸಿದ್ಧ ಎಂದಿದ್ದಾರೆ.

ಬೆಂಗಳೂರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಭೀಕರ ಹತ್ಯೆ

ಡಬ್ಲ್ಯುಡಬ್ಲ್ಯುಎಫ್‍ನಿಂದ ಬೀಜ ಪಡೆದು ಉತ್ತಮ ಇಳುವರಿ ಬಂದಿದೆ, ಟೊಮೇಟೊ, ಅವರೆಕಾಯಿ, ಹೂಕೋಸು ಎಲ್ಲವೂ ಚೆನ್ನಾಗಿ ಬೆಳೆಯುತ್ತಿದೆ, ನಾಟಿ ಮಾಡಿದ ಸಸಿಗಳು ಸಿದ್ಧವಾದಾಗ ಹಣ್ಣುಗಳ ಸ್ಥಿತಿ ಹೇಗಿದೆ ಎಂದು ನೋಡೋಣ ಎಂದು ರಾಮಪುರ ಗ್ರಾಮದ ಸೀಮಾದೇವಿ ಹೇಳುತ್ತಾರೆ.

ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕ್ಷೇತ್ರದ ತೋಟಗಾರಿಕೆ ನಿರೀಕ್ಷಕ ಎ.ಕೆ.ವರ್ಮಾ ಮಾತನಾಡಿ, ತಮ್ಮ ಇಲಾಖೆಯು ಉತ್ತಮ ಗುಣಮಟ್ಟದ ಬೀಜಗಳು ಮತ್ತು ತರಕಾರಿಗಳು ಮತ್ತು ಹಣ್ಣುಗಳ ಸಸಿಗಳನ್ನು ಒದಗಿಸುತ್ತದೆ, ಇವುಗಳನ್ನು ಸ್ವಸಹಾಯ ಸಂಘಗಳ ಮಹಿಳೆಯರು ಬಳಸುತ್ತಿದ್ದಾರೆ. ಅಗತ್ಯವಿರುವ ಕಡೆ ತರಬೇತಿಯನ್ನೂ ನಡೆಸಿ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತೇವೆ ಎಂದಿದ್ದಾರೆ.

ಭವಿಷ್ಯದಲ್ಲಿ ಈ ಯೋಜನೆಯಿಂದ ಈ ಮಹಿಳೆಯರು ಆರ್ಥಿಕವಾಗಿ ಹೇಗೆ ಪ್ರಯೋಜನ ಪಡೆಯಬಹುದು. ಸಾವಯವ ವಸ್ತುಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯೊಂದಿಗೆ, ಅವರು ಬೆಳೆದ ತರಕಾರಿಗಳು ಮತ್ತು ಇತರ ವಸ್ತುಗಳು ಹೆಚ್ಚುವರಿ ಆದಾಯವನ್ನು ಗಳಿಸಲು ಉತ್ತಮ ಅವಕಾಶವನ್ನು ಹೊಂದಿವೆ.

ಈಗ ನಾವು ಅದನ್ನು ಪ್ರಾಯೋಗಿಕ ಆಧಾರದ ಮೇಲೆ ನಡೆಸುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಯಾಗಿಸಲು ತೋಟಗಾರಿಕೆ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳೊಂದಿಗೆ ಹ್ಯಾಂಡ್‍ಹೋಲ್ಡ್ ಮಾಡಲು ಮತ್ತು ಲಿಂಕ್ ಮಾಡಲು ಯೋಜಿಸುತ್ತೇವೆ. ಉತ್ಪನ್ನಗಳ ಕೃಷಿ ಮಾಡಲು ಅವರಿಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸಲಾಗುವುದು ಎಂದು ಹಸನ್ ತಿಳಿಸಿದ್ದಾರೆ.

RELATED ARTICLES

Latest News