Sunday, December 1, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಂದ್ರದ್ರೋಣ ಪರ್ವತದ ಬಳಿ ಪ್ರಪಾತಕ್ಕೆ ಬಿದ್ದ ಕಾರು : ಐವರಿಗೆ ಗಂಭೀರ ಗಾಯ

ಚಂದ್ರದ್ರೋಣ ಪರ್ವತದ ಬಳಿ ಪ್ರಪಾತಕ್ಕೆ ಬಿದ್ದ ಕಾರು : ಐವರಿಗೆ ಗಂಭೀರ ಗಾಯ

The car fell into cliff

ಚಿಕ್ಕಮಗಳೂರು, ಅ.13- ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ 250 ಅಡಿ ಪ್ರಪಾತಕ್ಕೆ ಹೊರಳಿದ್ದು ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಹೈದರಾಬಾದ್‌ನಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದು ಮುಳ್ಳಯ್ಯನಗಿರಿ ಸಮೀಪದ ಕವಿಕಲ್ ಗಂಡಿ ಬಳಿ ಈ ಘಟನೆ ನಡೆದಿದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರಿಗೂ ಗಂಭೀರ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

250 ಅಡಿ ಎತ್ತರದಿಂದ ಬೀಳುವಾಗ ಮರಗಳು ಹಾಗೂ ರೆಂಬೆ ಕೊಂಬೆಗಳಿಗೆ ಸಿಲುಕಿದ ಕಾರು ಸಿನಿಮೀಯ ರೀತಿಯಲ್ಲಿ ಕೆಳಗೆ ಬಿದ್ದಿದ್ದು ಇದರಿಂದಾಗಿ ಕಾರು ಬೀಳುವ ವೇಗ ಕಡಿಮೆಯಾಗಿದೆ.

ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದು ಮರದ ರಂಬೆ-ಕೊಂಬೆಗಳಿಗೆ ಸಿಲುಕಿ ಕಾರು ಅಡ್ಡಲಾಗಿ ನಿಂತಿದ್ದು ಸಂಪೂರ್ಣ ಜಖಂಗೊಂಡಿದೆ. ಮರಗಳ ನಡುವೆ ಸಿಲುಕಿದ್ದರಿಂದ ಕಾರು ಇನ್ನಷ್ಟು ಪ್ರಪಾತಕ್ಕೆ ಉರುಳುವುದು ತಪ್ಪಿದ್ದು ಪ್ರಯಾಣಿಕರ ಜೀವ ಉಳಿದಿದೆ.

ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಭೇಟಿ ಮಾಡಿದ್ದು ಪ್ರಕರಣ ದಾಖಲಿಸಲು ಅವರ ಸಂಬಂಧಿಕರು ಯಾರೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಪ್ರಪಾತದಲ್ಲಿ ಇದ್ದು ಅದನ್ನು ಹೊರ ತೆಗೆದು ನಂತರ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

RELATED ARTICLES

Latest News