Friday, May 24, 2024
Homeರಾಜ್ಯಪಾಕಿಸ್ತಾನಕ್ಕೆ ಹಾರಲು ಪ್ಲಾನ್ ಮಾಡಿದ್ದ ರಾಮೇಶ್ವರಂ ಕೆಫೆ ಸ್ಪೋಟದ ಬಾಂಬರ್‌ಗಳು

ಪಾಕಿಸ್ತಾನಕ್ಕೆ ಹಾರಲು ಪ್ಲಾನ್ ಮಾಡಿದ್ದ ರಾಮೇಶ್ವರಂ ಕೆಫೆ ಸ್ಪೋಟದ ಬಾಂಬರ್‌ಗಳು

ಬೆಂಗಳೂರು, ಏ.23- ರಾಮೇಶ್ವರಂ ಕೆಫೆ ಸ್ಪೋಟಿಸಿದ ನಂತರ ಪಾಕಿಸ್ತಾನಕ್ಕೆ ಹಾರಲು ಬಾಂಬರ್ಗಳು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿ ಎನ್ಐಎ ತನಿಖೆಯಲ್ಲಿ ಗೊತ್ತಾಗಿದೆ. ಎನ್ಐಎ ತಂಡ ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಾಂಬರ್ಗಳನ್ನು ಬಂಧಿಸದಿದ್ದರೆ ಈ ವೇಳೆಗಾಗಲೇ ಅವರು ಪಾಕಿಸ್ತಾನದಲ್ಲಿ ನೆಲೆಸುತ್ತಿದ್ದರು ಎಂಬುವುದು ತಿಳಿದು ಬಂದಿದೆ.

ಬಾಂಬರ್ ಮುಸಾವೀರ್ ಮತ್ತು ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಕೆಫೆ ಸ್ಪೋಟಿಸಿದ ನಂತರ ರಾಜ್ಯದ ಹಲವು ಕಡೆಗಳಲ್ಲಿ ಸಂಚರಿಸಿ ನಂತರ ವಿವಿಧ ರಾಜ್ಯಗಳಲ್ಲೂ ತಲೆಮರೆಸಿಕೊಂಡು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದರು.

ಈ ಇಬ್ಬರಿಗೆ ಸಹಾಯ ಮಾಡಿದ್ದ ಆರೋಪಿ ಮುಜಾಮಿಲ್ ತನ್ನ ಹಾಗೂ ಗೆಳೆಯರ ಬ್ಯಾಂಕ್ ಅಕೌಂಟ್ ಹಾಗೂ ಎಟಿಎಂ ಕಾರ್ಡ್ ನೀಡಿದ್ದು ವಿದೇಶದಿಂದಲೂ ಇವರ ಖಾತೆಗೆ ಹಣ ಬರುತ್ತಿತ್ತು ಎಂಬುವುದು ವಿಚಾರಣೆಯಿಂದ ತಿಳಿದುಬಂದಿದೆ.

ಪಶ್ಚಿಮ ಬಂಗಾಳದಿಂದ ಬಾಂಗ್ಲಾಕ್ಕೆ ಹೋಗಿ ಅಲ್ಲಿಂದ ಪಾಕಿಸ್ತಾನಕ್ಕೆ ಹಾರಲು ಈ ಇಬ್ಬರು ಬಾಂಬರ್ಗಳು ಯೋಜನೆ ರೂಪಿಸಿಕೊಂಡು ಹಣಕ್ಕಾಗಿ ಕಾಯುತ್ತಿದ್ದರು. ಅದಕ್ಕಾಗಿ ಇವರಿಗೆ ಕನಿಷ್ಟ ಒಂದು ಲಕ್ಷ ಹಣದ ಅವಶ್ಯಕತೆಯಿತ್ತು.

ಯಾವಾಗ ಎನ್ಐಎಗೆ ಬ್ಯಾಂಕ್ ಅಕೌಂಟ್ಬಗ್ಗೆ ಮಾಹಿತಿ ಲಭ್ಯವಾಯಿತು. ಆ ಬಳಿಕ ಮತೀನ್ ತಾಹ ಹಾಗೂ ಮುಜಾವೀರ್ ಅಕೌಂಟ್ ಬಳಕೆ ನಿಲ್ಲಿಸಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿ ಹಣ ಪಡೆಯಲು ಸಾಧ್ಯವಾಗದಿದ್ದಾಗ ಪಶ್ಚಿಮ ಬಂಗಾಳದಲ್ಲೇ ಉಳಿದುಕೊಂಡಿದ್ದರು.

ಈ ಮಾಹಿತಿ ಕಲೆ ಹಾಕಿದ ಎನ್ಐಎ ತಂಡ ಕ್ಷಣಾರ್ಧದಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿ ಇಬ್ಬರು ಬಾಂಬರ್ಗಳ ಎಡೆಮುರಿ ಕಟ್ಟಿ ಕರೆತಂದಿದ್ದಾರೆ.ಈ ಆರೋಪಿಗಳು ಟೆಲಿಗ್ರಾಂ, ಸಿಗ್ನಲ್, ಎಂಡ್ಟುಎಂಡ್ ಎನ್ಕ್ರಿಪೈಡ್ ಮಾದರಿಯಲ್ಲಿ ಮಾತುಕತೆ ನಡೆಸುತ್ತಾ ತಾವು ಏನೆಲ್ಲಾ ಮಾಡಬೇಕೆಂಬ ವಿಚಾರದ ಬಗ್ಗೆ ಅಬ್ದುಲ್ ಮತೀನ್ ತಾಹಗೆ ಕಮಾಂಡರ್, ಹ್ಯಾಂಡರ್ಸ್ ಅಥವಾ ಕರ್ನಲ್ ಎಂಬ ಹೆಸರಿನಲ್ಲಿ ನಿರ್ದೇಶನ ಬರುತ್ತಿತ್ತು ಎಂಬುವುದು ವಿಚಾರಣೆಯಿಂದ ಗೊತ್ತಾಗಿದೆ.

ಈ ಹ್ಯಾಂಡ್ಲರ್ ಮೂಲತಃ ಪಾಕಿಸ್ತಾನದ ವ್ಯಕ್ತಿ ಎಂಬ ಶಂಕೆ ವ್ಯಕ್ತವಾಗಿದ್ದು, ಈತ ಮಧ್ಯಪ್ರಾಚ್ಯ ದೇಶದಲ್ಲಿ ಇದ್ದುಕೊಂಡು ತಾಹಗೆ ನಿರ್ದೇಶನ ನೀಡಿದ್ದರ ಬಗ್ಗೆಯೂ ಎನ್ಐಎಗೆ ಮಾಹಿತಿ ಲಭ್ಯವಾಗಿದೆ.

ವಿದೇಶದಿಂದ ಹಣದ ನೆರವು:
ಈ ಇಬ್ಬರು ಬಾಂಬರ್ಗಳ ಖಾತೆಗಳಿಗೆ ವಿದೇಶದಿಂದ ಹಣ ಬರುತ್ತಿತ್ತು ಎಂಬುದು ಎನ್ಐಎ ತನಿಖೆಯಿಂದ ಗೊತ್ತಾಗಿದೆ. ಯಾವಾಗ ಬ್ಯಾಂಕ್ ಅಕೌಂಟ್ಗಳ ಬಗ್ಗೆ ಮಾಹಿತಿ ಲಭ್ಯವಾಯಿತೋ ಆ ಸಂದರ್ಭದಲ್ಲಿ ಮಾಸ್ಟರ್ ಮೈಂಡ್ ಮತೀನ್ ತಾಹ ಹಾಗೂ ಬಾಂಬರ್ ಮುಸಾವೀರ್ ಅಕೌಂಟ್ ಬಳಸುವುದನ್ನು ನಿಲ್ಲಿಸಿದ್ದರಿಂದ ಇವರಿಗೆ ಆರ್ಥಿಕ ಸಂಕಷ್ಟ ಎದುರಾಗಿ ಪಾಕಿಸ್ತಾನಕ್ಕೆ ಹಾರುವ ಸಂಚು ವಿಫಲವಾಗಿದ್ದರಿಂದ ಎನ್ಐಎಗೆ ಸಿಕ್ಕಿಕೊಂಡಿದ್ದರು.

RELATED ARTICLES

Latest News