Monday, October 14, 2024
Homeಜಿಲ್ಲಾ ಸುದ್ದಿಗಳು | District Newsಅಕ್ರಮವಾಗಿ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ಮೂವರ ಬಂಧನ

three Arrested for transporting Star Turtles

ಕೊಳ್ಳೇಗಾಲ,ಸೆ.19- ನಕ್ಷತ್ರ ಆಮೆಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕು ಕುಳ್ಳೂರು ಗ್ರಾಮದ ಮಾದೇಶ್‌ (32) , ತಮಿಳುನಾಡು ಮೂಲದ ಶಿವಕುಮಾರ್‌ (22), ಪಿರಿಯಪಟ್ಟಣದ ಮೂಲದ ಜಾಕಿರ್‌ ಷರೀಪ್‌ (31) ಬಂಧಿತ ಆರೋಪಿಗಳು.

ಈ ಮೂವರು ಆರೋಪಿಗಳು ಪಟ್ಟಣದ ಮುಡಿಗುಂಡ ಆದರ್ಶ ಶಾಲೆಯ ಮಾರ್ಗದಲ್ಲಿ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಜೀವಂತ ನಕ್ಷತ್ರ ಆಮೆಗಳು, ಕಪ್ಪು ಬಣ್ಣದ ಕಾಲೇಜು ಬ್ಯಾಗ್‌ , ಸಾಗಾಣಿಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ನಕ್ಷತ್ರ ಆಮೆ ಅಕ್ರಮ ಸಾಗಾಣಿಕೆ ವಿರುದ್ಧ ದೂರು ದಾಖಲಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

RELATED ARTICLES

Latest News