Monday, October 14, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruವಿಶ್ವ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ಗೆ ತುಮಕೂರಿನ ವಿದ್ಯಾರ್ಥಿನಿ ಆಯ್ಕೆ

ವಿಶ್ವ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ಗೆ ತುಮಕೂರಿನ ವಿದ್ಯಾರ್ಥಿನಿ ಆಯ್ಕೆ

Student from Tumkur selected for World Skating Championship

ತುಮಕೂರು,ಸೆ.19- ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಸ್ಕೇಟಿಂಗ್‌ ಚಾಂಪಿಯನ್‌ ಶಿಪ್‌-2024ರಲ್ಲಿ ಭಾಗವಹಿಸಲು ನಗರದ ಉದಯೋನುಖ ಕ್ರೀಡಾ ಪ್ರತಿಭೆ ಜಯತೇಷ್ಣ ಟಿ.ಜಿ. ಅವರು ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇಟಲಿಯಲ್ಲಿ ಸೆ.23ರವರೆಗೆ ನಡೆಯಲಿರುವ ವರ್ಲ್‌್ಡ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕಲ್ಪತರು ನಾಡು ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ಜಯತೇಷ್ಣ ಟಿ.ಜಿ.ರವರು ಆರ್ಹತೆ ಪಡೆದಿದ್ದು, ಈಗಾಗಲೇ ವರ್ಲ್ಡ್‌ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ತೆರಳಿದ್ದಾರೆ.

ಸ್ಕೇಟಿಂಗ್‌ ತರಬೇತುದಾರರಾದ ಮೋಹನಕುಮಾರ್‌ ಮತ್ತು ಪಟ್ನಾಕರ್‌ ಅವರ ಮಾರ್ಗದರ್ಶನದಲ್ಲಿ ಸ್ಕೇಟಿಂಗ್‌ ಅಭ್ಯಾಸ ಮಾಡುತ್ತಿರುವ ಜಯತೇಷ್ಣ ಟಿ.ಜಿ, ಅವರು ತಾಹೇರ ಅವರ ಪುತ್ರಿಯಾಗಿದ್ದು, ಈ ಹಿಂದೆ ರಾಜ್ಯಮಟ್ಟದ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದರು.

ಆಗಸ್ಟ್‌ ತಿಂಗಳಲ್ಲಿ ನಡೆದ ರಾಷ್ಟ್ರೀಯ ಸ್ಕೇಟಿಂಗ್‌ ರೋರಲ್‌ ಡರ್ಬಿ ಚಾಂಪಿಯನ್‌ ಶಿಪ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ ಜಯತೇಷ್ಣ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದೆ.

RELATED ARTICLES

Latest News